For Quick Alerts
ALLOW NOTIFICATIONS  
For Daily Alerts

  ಕರ್ನಾಟಕದಲ್ಲಿ 'ಕಾಲಾ' ರಿಲೀಸ್ ಆಗಿಲ್ಲ ಅಂದ್ರೆ ಎಷ್ಟು ಕೋಟಿ ನಷ್ಟವಾಗುತ್ತೆ.?

  By Bharath Kumar
  |
  ಕಾಲ ಸಿನೆಮಾಗೆ ಕರ್ನಾಟಕದವರು ಯಾವ ಪರಿಸ್ಥಿತಿ ತಂದಿದ್ದಾರೆ ನೋಡಿ | Filmibeat Kannada

  ತಮಿಳು ನಟ ರಜನಿಕಾಂತ್ ಅಭಿನಯದ 'ಕಾಲಾ' ಸಿನಿಮಾ ಜೂನ್ 7 ರಂದು ವರ್ಲ್ಡ್ ವೈಡ್ ಬಿಡುಗಡೆಯಾಗುತ್ತಿದೆ. ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಿದ್ಧವಾಗಿರುವ ಈ ಚಿತ್ರಕ್ಕೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದ್ದು, ಇಲ್ಲಿ ಬಿಡುಗಡೆ ಅನುಮಾನವಾಗಿದೆ.

  ಕಾವೇರಿ ನೀರಿನ ವಿಚಾರದಲ್ಲಿ ನಟ ರಜನಿಕಾಂತ್ ಕರ್ನಾಟಕದ ವಿರುದ್ಧವಾಗಿ ಹೇಳಿಕೆ ನೀಡಿದ್ದಾರೆ ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಸಿನಿಮಾ ರಿಲೀಸ್ ಮಾಡಲು ಅವಕಾಶ ಕೊಡಲ್ಲ ಎಂದು ಎಚ್ಚರಿಕೆ ನೀಡಿದೆ.

  ಜನಾಭಿಪ್ರಾಯ: ಕರ್ನಾಟಕದಲ್ಲಿ 'ಕಾಲಾ' ರಿಲೀಸ್ ಆಗ್ಬೇಕಾ-ಬೇಡವಾ.?

  ಇದರಿಂದ ಆತಂಕಕ್ಕೊಳಗಾಗಿರುವ ಚಿತ್ರತಂಡ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದೆ. ಒಂದು ವೇಳೆ 'ಕಾಲಾ' ಸಿನಿಮಾ ಕರ್ನಾಟಕದಲ್ಲಿ ತೆರೆಕಂಡಿಲ್ಲ ಅಂದ್ರೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತೆ ಎಂದು ಮನವರಿಕೆ ಮಾಡಲು ಮುಂದಾಗಿದೆ. ಹಾಗಿದ್ರೆ, 'ಕಾಲಾ' ಸಿನಿಮಾ ಕನ್ನಡನಾಡಿನಲ್ಲಿ ಬಿಡುಗಡೆಯಾಗಿಲ್ಲ ಅಂದ್ರೆ ಎಷ್ಟು ಕೋಟಿ ನಷ್ಟವಾಗುತ್ತೆ ಗೊತ್ತಾ.? ಮುಂದೆ ಓದಿ.....

  140 ಕೋಟಿ ಬಜೆಟ್ ಸಿನಿಮಾ

  ರಜನಿಕಾಂತ್ ಅಳಿಯ ಧನುಶ್ ನಿರ್ಮಾಣ ಸಂಸ್ಥೆ ತಯಾರು ಮಾಡಿರುವ 'ಕಾಲಾ' ಚಿತ್ರಕ್ಕೆ ಬರೋಬ್ಬರಿ 140 ಕೋಟಿ ಬಂಡವಾಳ ಹಾಕಲಾಗಿದೆ. ಆದ್ರೆ, ಕರ್ನಾಟಕದಲ್ಲಿ ಬಿಡುಗಡೆಯಾಗಿಲ್ಲ ಅಂದ್ರೆ ದೊಡ್ಡ ಮೊತ್ತದ ನಷ್ಟ ಅನುಭವಿಸವುದು ಖಚಿತ. ಯಾಕಂದ್ರೆ, ರಜನಿಕಾಂತ್ ದಕ್ಷಿಣ ಭಾರತದ ಬಹುಬೇಡಿಕೆಯ ನಟ. ಅದರಲ್ಲೂ ಕರ್ನಾಟಕದಲ್ಲಿ ರಜನಿ ಸಿನಿಮಾಗಳಿಗೆ ದೊಡ್ಡ ಮಟ್ಟದ ಒಪನಿಂಗ್ ಸಿಗುತ್ತೆ.

  ಮತ್ತೊಂದು ವಿವಾದದಲ್ಲಿ 'ಕಾಲಾ': ವರ್ಲ್ಡ್ ವೈಡ್ ಬಿಡುಗಡೆಗೆ ಸಂಕಷ್ಟ.!

  ನಿರ್ಮಾಪಕರಿಗೆ ಎಷ್ಟು ಕೋಟಿ ನಷ್ಟವಾಗುತ್ತೆ.?

  ಹಿರಿಯ ನಿರ್ಮಾಪಕರ ಲೆಕ್ಕಾಚಾರದ ಪ್ರಕಾರ 'ಕಾಲಾ' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಿಲ್ಲ ಅಂದ್ರೆ ಸುಮಾರು 7 ಕೋಟಿ (ನೆಟ್ ಕಲೆಕ್ಷನ್) ನಷ್ಟವಾಗುತ್ತೆ. ಒಟ್ಟಾರೆ 25 ಕೋಟಿವರೆಗೂ ಕಳೆದುಕೊಳ್ಳುವ ಆತಂಕವಿದೆ.

  ತಮಿಳು ಚಿತ್ರಕ್ಕೆ ಹೊರರಾಜ್ಯದಲ್ಲೇ ಲಾಭ ಹೆಚ್ಚು

  ಮೂಲಗಳ ಪ್ರಕಾರ ತಮಿಳು ಚಿತ್ರಗಳಿಗೆ ಹೊರರಾಜ್ಯಗಳಿಂದಲೇ ಹೆಚ್ಚು ಲಾಭ ಸಿಗುತ್ತೆ. ಶೇಕಡಾ 25 ರಿಂದ 30ರಷ್ಟು ಆದಾಯ ನೆರೆರಾಜ್ಯಗಳಿಂದಲೇ ಬರುತ್ತೆ. ಅದರಲ್ಲೂ ಬೆಂಗಳೂರಿನಂತಹ ನಗರದಿಂದಲೇ ಹೆಚ್ಚು ಹಣ ಗಳಿಸಿಬಹುದು. ಒಂದು ವೇಳೆ ಇಲ್ಲಿ ಬಿಡಗಡೆಯಾಗಲ್ಲ ಅಂದ್ರೆ, ನಿರ್ಮಾಪಕರಿಗೆ ದೊಡ್ಡ ಮಟ್ಟದ ಹಣ ನಷ್ಟ ಆಗೋದು ಪಕ್ಕಾ.

  'ಕಾಲಾ' ವಿವಾದ: ಅವರು ಮಾಡಿದ್ರೆ ಸರಿ, ನಾವ್ ಮಾಡಿದ್ರೆ ತಪ್ಪಾ.?

  ಹೈಕೋರ್ಟ್ ಮೊರೆ ಹೋದ ಕಾಲಾ

  ಸದ್ಯದ ಮಾಹಿತಿ ಪ್ರಕಾರ 'ಕಾಲಾ' ಚಿತ್ರದ ನಿರ್ಮಾಪಕರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ ಎನ್ನಲಾಗಿದೆ. 'ಕಾಲಾ' ಸಿನಿಮಾವನ್ನ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡಬೇಕು ಮತ್ತು ಚಿತ್ರಮಂದಿರಗಳಿಗೆ ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರಂತೆ. ನಿಷೇಧದಿಂದ ಆಗುವ ನಷ್ಟದ ಬಗ್ಗೆ ಕೋರ್ಟ್ ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.

  ಕನ್ನಡಿಗರ ಕೋಪಕ್ಕೆ ಗುರಿಯಾಗಿದ್ದ ತಮಿಳು ಚಿತ್ರಗಳು

  ರಾಜ್ಯ ಸರ್ಕಾರ ನಿಷೇಧ ಮಾಡಿಲ್ಲ

  ಕರ್ನಾಟಕದಲ್ಲಿ 'ಕಾಲಾ' ಸಿನಿಮಾವನ್ನ ಕರ್ನಾಟಕ ಸರ್ಕಾರ ನಿಷೇಧ ಮಾಡಿಲ್ಲ. ಕನ್ನಡ ಪರ ಸಂಘಟನೆಗಳು ಮಾತ್ರ ವಿರೋಧ ಸೂಚಿಸಿದೆ. ಇನ್ನೊಂದು ಮಾಹಿತಿಯ ಪ್ರಕಾರ ಕರ್ನಾಟಕದ ವಿತರಕರು ಮತ್ತು ಪ್ರದರ್ಶಕರು ಸಿನಿಮಾ ತೆಗೆದುಕೊಳ್ಳುವಲ್ಲಿ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

  ಬಾಕ್ಸ್ ಆಫೀಸ್ ಧೂಳೆಬ್ಬಿಸಿದ್ದ 'ಕಬಾಲಿ'

  ಈ ಹಿಂದೆ ತೆರೆಕಂಡಿದ್ದ ರಜನಿಕಾಂತ್ ಸಿನಿಮಾ 'ಕಬಾಲಿ', ಕರ್ನಾಟಕದಲ್ಲಿ ಸುಮಾರು 240ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿತ್ತು. ಮೊದಲ ದಿನ ದಾಖಲೆ ಮೊತ್ತದಲ್ಲಿ ಕಲೆಕ್ಷನ್ ಮಾಡಿತ್ತು. ಹೀಗಾಗಿ, 'ಕಾಲಾ' ಚಿತ್ರದ ಮೇಲೂ ನಿರೀಕ್ಷೆ ಹೆಚ್ಚಿದೆ.

  English summary
  Rajinikanth films usually take good openings in the Karnataka state and the ban will end up costing the makers a hefty sum. suppose Kaala' ban in Karnataka, How much money will the makers lose?

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more