For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದ ಈ ಥಿಯೇಟರ್ ನಲ್ಲಿ 'ಕಾಲಾ' ರಿಲೀಸ್ ಆಗೋಯ್ತು.!

  By Bharath Kumar
  |

  ರಜನಿಕಾಂತ್ ಅಭಿನಯದ 'ಕಾಲಾ' ಸಿನಿಮಾಗೆ ಕರ್ನಾಟಕದಲ್ಲಿ ಭಾರಿ ಹಿನ್ನಡೆಯಾಗಿದೆ. ಸುಮಾರು 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ 'ಕಾಲಾ' ರಿಲೀಸ್ ಆಗುತ್ತೆ ಎಂದು ವಿತರಕರು ಹೇಳಿದ್ದರು. ಆದ್ರೆ, ಕನ್ನಡ ಪರ ಹೋರಾಟಗಾರ ಎಚ್ಚರಿಕೆ ಹಿನ್ನಲೆ ಯಾವ ಚಿತ್ರಮಂದಿರವೂ ರಜನಿ ಚಿತ್ರವನ್ನ ಬಿಡುಗಡೆ ಮಾಡಲು ಮುಂದಾಗಿಲ್ಲ.

  ಬೆಂಗಳೂರಿನ ಒರೆಯಾನ್ ಮಾಲ್, ಐನಾಕ್ಸ್ ಮಾಲ್, ಪಿವಿಆರ್ ಮಾಲ್ ಸೇರಿದಂತೆ ರಾಜ್ಯದ ಯಾವುದೇ ಸಿಂಗಲ್ ಚಿತ್ರಮಂದಿರದಲ್ಲೂ 'ಕಾಲಾ' ಬಿಡುಗಡೆ ಮಾಡಲು ಚಿತ್ರಮಂದಿರದ ಮಾಲೀಕರು ಧೈರ್ಯ ಮಾಡಿರಲಿಲ್ಲ.

  'ಕಾವೇರಿ' ಜೊತೆಗೆ 'ಕಾಲಾ'ಗೆ ಕಾಡುತ್ತಿರುವ 5 ವಿವಾದಗಳು.!'ಕಾವೇರಿ' ಜೊತೆಗೆ 'ಕಾಲಾ'ಗೆ ಕಾಡುತ್ತಿರುವ 5 ವಿವಾದಗಳು.!

  ಆದ್ರೆ, ಬೆಳಿಗ್ಗೆ 10.30ರ ನಂತರ ಕರ್ನಾಟಕದಲ್ಲಿ 'ಕಾಲಾ' ಚಿತ್ರ ಪ್ರದರ್ಶನ ಕಂಡಿದೆ. ಕೆಲವು ಚಿತ್ರಮಂದಿರಗಳು ಮೊದಲ ಶೋ ಆರಂಬಭಿಸಿದೆ. ಅಷ್ಟಕ್ಕೂ, 'ಕಾಲಾ' ಚಿತ್ರವನ್ನ ಬಿಡುಗಡೆ ಮಾಡಿದ ಥಿಯೇಟರ್ ಯಾವುದು.? ಎಷ್ಟು ಗಂಟೆಗೆ ಶೋ ಆರಂಭವಾಗಿದೆ. ಮುಂದೆ ಓದಿ...

  ರಾಧಿಕಾ ಚಿತ್ರಮಂದರಿದಲ್ಲಿ 'ಕಾಲಾ'

  ರಾಧಿಕಾ ಚಿತ್ರಮಂದರಿದಲ್ಲಿ 'ಕಾಲಾ'

  ಬಳ್ಳಾರಿಯ ರಾಧಿಕಾ ಚಿತ್ರಮಂದಿರದಲ್ಲಿ ರಜನಿಕಾಂತ್ ಅಭಿನಯದ 'ಕಾಲಾ' ಸಿನಿಮಾ ಪ್ರದರ್ಶನ ಕಾಣುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಬಿಡುಗಡೆಯಾಗುವುದಿಲ್ಲ ಎಂದೇ ಹೇಳಲಾಗುತ್ತಿದ್ದ ಸಿನಿಮಾ ಕೊನೆಗೂ ತನ್ನ ಮೊದಲ ಶೋ ಆರಂಭ ಮಾಡಿದೆ.

  'ಕಾವೇರಿ' ಜೊತೆಗೆ 'ಕಾಲಾ'ಗೆ ಕಾಡುತ್ತಿರುವ 5 ವಿವಾದಗಳು.!'ಕಾವೇರಿ' ಜೊತೆಗೆ 'ಕಾಲಾ'ಗೆ ಕಾಡುತ್ತಿರುವ 5 ವಿವಾದಗಳು.!

  11 ಗಂಟೆಯ ಬಳಿಕ ಮತ್ತಷ್ಟು ಚಿತ್ರಮಂದಿರಗಳಲ್ಲಿ 'ಕಾಲಾ'

  11 ಗಂಟೆಯ ಬಳಿಕ ಮತ್ತಷ್ಟು ಚಿತ್ರಮಂದಿರಗಳಲ್ಲಿ 'ಕಾಲಾ'

  ಇನ್ನು ಬೆಳಿಗ್ಗೆ 11 ಗಂಟೆಯ ನಂತರ ರಾಜ್ಯದ ಮತ್ತಷ್ಟು ಚಿತ್ರಮಂದಿರಗಳಲ್ಲಿ 'ಕಾಲಾ' ಸಿನಿಮಾ ಪ್ರದರ್ಶನವಾಗಲಿದೆ ಎಂಬ ಮಾಹಿತಿಯನ್ನ ಕರ್ನಾಟಕದ ಕಾಲಾ ವಿತರಕ ಕನಕಪುರ ಶ್ರೀನಿವಾಸ್ ನೀಡಿದ್ದರು. ಆದ್ರೆ, ನಿಖರವಾಗಿ ಯಾವ ಚಿತ್ರಮಂದಿರಗಳು ಎಂದು ಹೇಳಲಿಲ್ಲ.

  ಕರ್ನಾಟಕದ ಎಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಕಾಲಾ ?ಕರ್ನಾಟಕದ ಎಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಕಾಲಾ ?

  ಹಲವು ಕಡೆ ಅರ್ಧಕ್ಕೆ ಸ್ಥಗಿತವಾದ 'ಕಾಲಾ'

  ಹಲವು ಕಡೆ ಅರ್ಧಕ್ಕೆ ಸ್ಥಗಿತವಾದ 'ಕಾಲಾ'

  ಇನ್ನು ಹಲವು ಚಿತ್ರಮಂದಿರಗಳು ಮಧ್ಯಾಹ್ನದ ನಂತರ 'ಕಾಲಾ' ಸಿನಿಮಾ ಪ್ರದರ್ಶನ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನು ಕೊಪ್ಪಳದ ಕಾರಟಗಿಯ ಲಕ್ಷ್ಮಿ ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿದ್ದ 'ಕಾಲಾ' ಚಿತ್ರವನ್ನ ಕರವೇ ಕಾರ್ಯಕರ್ತರು ಅರ್ಧದಲ್ಲೇ ತಡೆದಿದ್ದಾರೆ. ಇಲ್ಲಿಗೆ 'ಕಾಲಾ' ಅರ್ಧಕ್ಕೆ ಸ್ಥಗಿತವಾಗಿದೆ.

  'ಕಾಲಾ' ಬದಲು ಜುರಾಸಿಕ್ ವರ್ಲ್ಡ್

  'ಕಾಲಾ' ಬದಲು ಜುರಾಸಿಕ್ ವರ್ಲ್ಡ್

  ಇನ್ನು ತಮಿಳಿನ 'ಕಾಲಾ' ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಬಹುತೇಕ ಚಿತ್ರಮಂದಿರಗಳು ಈಗ ಹಾಲಿವುಡ್ ಸಿನಿಮಾವನ್ನ ಪ್ರದರ್ಶನ ಮಾಡುತ್ತಿದೆ. 'ಜುರಾಸಿಕ್ ವರ್ಲ್ಡ್' ಸಿನಿಮಾ ಕೂಡ ಇಂದು ಬಿಡುಗಡೆಯಾಗಿದ್ದು, 'ಕಾಲಾ' ಬದಲು ಈ ಚಿತ್ರವನ್ನ ಪ್ರದರ್ಶನ ಮಾಡುತ್ತಿದ್ದಾರೆ.

  English summary
  Superstar rajinikanth starrer most expected Tamil movie kaala has released in bellary's radhika theater.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X