»   » ದುನಿಯಾ ಸೂರಿ ಸಂದರ್ಶನ, ಕಡ್ಡಿಪುಡಿ ವಿಶೇಷಗಳು

ದುನಿಯಾ ಸೂರಿ ಸಂದರ್ಶನ, ಕಡ್ಡಿಪುಡಿ ವಿಶೇಷಗಳು

By: ಸಂದರ್ಶಿಸಿದವರು: ರಾಜೇಂದ್ರ ಚಿಂತಾಮಣಿ
Subscribe to Filmibeat Kannada
<ul id="pagination-digg"><li class="next"><a href="/news/kannada-film-kaddipudi-special-duniya-soori-074651.html">Next »</a></li></ul>

"ನಾಯಕನನ್ನು ಹೊಗಳುವ, ವೈಭವೀಕರಿಸುವ ಸಿನಿಮಾ ಇದಲ್ಲ. ನಲವತ್ತು ಐವತ್ತು ಜನರನ್ನು ಒಬ್ಬನೇ ಹೊಡೆದು ಹಾಕುವುದು, ಆದಿಯಿಂದಲೂ ಅಂತ್ಯದವರೆಗೂ ನಾಯಕನನ್ನು ವೈಭವೀಕರಿಸುವ ಸಿನಿಮಾ ಅಂತೂ ಖಂಡಿತ ಅಲ್ಲ" ಎನ್ನುತ್ತಾರೆ ನಿರ್ದೇಶಕ ದುನಿಯಾ ಸೂರಿ. 'ಕಡ್ಡಿಪುಡಿ' ಚಿತ್ರಕ್ಕೆ ಸಂಬಂಧಿಸಿದಂತೆ ಒನ್ಇಂಡಿಯಾ ಜೊತೆಗಿನ ಸಂದರ್ಶನ ಇಲ್ಲಿದೆ.

1. 'ಕಡ್ಡಿಪುಡಿ' ಚಿತ್ರದ ವಿಶೇಷತೆಗಳೇನು?
ಇದೊಂದು ಪಕ್ಕಾ ಸ್ಕ್ರೀನ್ ಪ್ಲೇ ಮೂವಿ. ನಾಯಕನಟನ ವೈಭವೀಕರಣ ಇಲ್ಲದಿರುವ ಸಿನಿಮಾ. ಪರ್ಫಾಮೆನ್ಸ್ ಗೆ ಒತ್ತು ಕೊಟ್ಟಿರುವ ಚಿತ್ರ. ನಾನು ಮಾಡಿದ ಐದು ಸಿನಿಮಾಗಳ ಸಾಲಿನಲ್ಲಿ ಈ ಚಿತ್ರ ನಿಲ್ಲುವುದಿಲ್ಲ. ಇದರಲ್ಲಿ ಬೇರೆಯದೇ ಪ್ರಯತ್ನಗಳನ್ನು ಮಾಡಿದ್ದೇವೆ.

2. ಶಿವಣ್ಣ ಒಳ್ಳೆಯ ಡಾನ್ಸರ್, ಆದರೂ ಕೊರಿಯೋಗ್ರಾಫರ್ ಬಳಸಿಕೊಂಡಿಲ್ಲವಲ್ಲಾ?
ಸಿನಿಮಾದ ಒಂದು ವಿಶೇಷ ಎಂದರೆ ಈ ಚಿತ್ರದ ಶೀರ್ಷಿಕೆ ಸಹ ರೆಗ್ಯುಲರ್ ಸಿನಿಮಾ ಟೈಟಲ್ ನ್ನು ಹೋಲುವುದಿಲ್ಲ. ಸ್ಕ್ರೀನ್ ಪ್ಲೇ ಅದನ್ನು ಬಯಸುವುದೂ ಇಲ್ಲ. ಅಲ್ಲಿಂದಲೇ ಬಿಗಿ ಹಿಡಿತ ಇದೆ. ಚಿತ್ರದ ಕಥೆಯೇ ಆ ರೀತಿ ಇರುವುದರಿಂದ ಕೊರಿಯೋಗ್ರಫಿ ಬೇಡ ಎಂದು ನಾನೇ ಡಿಸೈಡ್ ಮಾಡಿದೆ. ಒಂದು ವೇಳೆ ಕೊರಿಯೋಗ್ರಫಿ ಇದ್ದಿದ್ದರೆ ಚಿತ್ರದಲ್ಲಿ ಆ ಭಾಗ ತುಂಬಾ ಕೃತಕವಾಗಿ ಕಾಣುತ್ತದೆ. ಮೂರು ನಿಮಿಷದ ಹಾಡು ನೈಜವಾಗಿರಲಿ ಎಂದು ಕೊರಿಯೋಗ್ರಫಿ ಇಲ್ಲದಂತೆ ಚಿತ್ರಿಸಿದೆವು.

ಮೊದಲು ಹಾಡನ್ನು ಹಾಕಿ ಕಲಾವಿದರು ಹೇಗೆ ಡಾನ್ಸ್ ಮಾಡುತ್ತಾರೋ ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಬಳಿಕ ಚಿತ್ರೀಕರಿಸಿದೆವು. "ಸೌಂದರ್ಯ ಸಮರ..." ಎಂಬ ಹಾಡಿನಲ್ಲಿ ಒಂದು ಕಥಕ್ ಥೀಮನ್ನು ಬಳಸಿದೆ. ಆ ಹಾಡು ಕ್ಲಾಸಿಕ್ ಡಾನ್ಸ್ ಆಗಿರುವ ಕಾರಣ ಕೆಲವು ಮೂವ್ ಮೆಂಟ್ ಗಳನ್ನು ಸಂಯೋಜನೆ ಮಾಡಬೇಕಾಯಿತು ಅಷ್ಟೇ. ಉಳಿದಂತೆ ಸಹಜವಾದ ಡಾನ್ಸ್ ಇದೆ. ಇಡೀ ಸಿನಿಮಾದ ತುಂಬಾ ಮಾಂಟೇಜ್ ಹಾಡುಗಳು ಬರುತ್ತವೆ.

ಜಾಕಿ ತರಹದ ಹಾಡುಗಳು, ಅಣ್ಣಾಬಾಂಡ್ ತರಹದ ಸಾಂಗ್ ಗಳು ಇಲ್ಲಿಲ್ಲ. ಆ ರೀತಿಯ ಪ್ರಯತ್ನ ಮಾಡಕ್ಕೆ ಹೋಗಿಲ್ಲ. ಸಬ್ಜೆಕ್ಟ್ ಕೊರಿಯೋಗ್ರಫಿ ಕೇಳುತ್ತದೆ ಎಂದಾದರೆ ಅದನ್ನು ಬಳಸಿಕೊಳ್ಳಬಹುದಿತ್ತು. ಆದರೆ ಇಲ್ಲಿ ಅದಿಲ್ಲದ ಕಾರಣ ಸಹಜವಾಗಿ ಹಾಡುಗಳನ್ನು ಚಿತ್ರೀಕರಿಸಿದ್ದೇವೆ.

3. ಅಂದರೆ ಹಾಡುಗಳಲ್ಲಿ ಡಾನ್ಸ್ ಇರುವುದಿಲ್ಲವೇ?
ಇರುತ್ತದೆ. ಆದರೆ ಅವರ ತರಹ ಎಲ್ಲರೂ ಕುಣಿಯಲ್ಲ ಅಷ್ಟೇ. ಹಿಂದೆ ಹದಿನೈದು ಜನ ಸಹಕಲಾವಿದರು ಇರುತ್ತಾರೆ. ಆದರೆ ಇಲ್ಲಿ ನೀವು ಅದನ್ನು ಕಾಣುವುದಿಲ್ಲ. ರೌಡಿಯ ಹಿನ್ನೆಲೆಯ ಚಿತ್ರವನ್ನು ಮಾಡುವಾಗ ಆತ ಒಬ್ಬ ಡಾನ್ಸರ್ ಎಂದು ಹೇಳಬೇಕಾಗಿಲ್ಲ. ನಾಯಕ ನಟನಿಗೆ ಡಾನ್ಸ್ ಬರುತ್ತದೆ ಎಂಬ ಕಾರಣಕ್ಕೆ ಅವರನ್ನು ಅದಕ್ಕಾಗಿ ಬಳಸಿಕೊಳ್ಳುವುದು ತಪ್ಪಾಗುತ್ತದೆ ಅಲ್ಲವೆ?

4. ಚಿತ್ರದಲ್ಲಿ ಐಂದ್ರಿತಾ ರೇ ಅವರದು ಐಟಂ ಸಾಂಗ್ ಅಷ್ಟೇನಾ?
ಐಂದ್ರಿತಾ ಅವರು ಒಂದು ಸನ್ನಿವೇಶದಲ್ಲೂ ಬಂದು ಹೋಗುತ್ತಾರೆ. ಆದರೆ ಹಾಗೆ ಬಂದು ಹೋಗುವ ಕ್ಯಾರೆಕ್ಟರ್ ಅಲ್ಲ ಅದು. ಒಂದು ವೇಶ್ಯಾವಾಟಿಕೆಯನ್ನು ರೇಡ್ ಮಾಡಲು ಹೋದಾಗ ಬರುವಂತಹಾ ಹಾಡು ಅದು. ಅದಾದ ಬಳಿಕ ಅವರ ಪಾತ್ರ ಬರುತ್ತದೆ.

5. ಇದನ್ನು ಐಟಂ ಸಾಂಗ್ ಎಂದು ಕರೆಯಬೇಕೋ ಅಥವಾ ಸ್ಪೆಷಲ್ ಸಾಂಗ್ ಎಂದು ಕರೆಯಬೇಕೋ?
ಈಗ ಐಟಂ ಸಾಂಗ್ ಎಂಬ ಪದ ಬಳಸುತ್ತಿದ್ದಾರೆ ಅಷ್ಟೇ. ಹಾಗಾಗಿ ಅದೇ ಜನಪ್ರಿಯವಾಗಿದೆ. ಸ್ಪೆಷಲ್ ಸಾಂಗ್ ಎಂದು ಕರೆಯುವುದೇ ಒಳ್ಳೆಯದು.

<ul id="pagination-digg"><li class="next"><a href="/news/kannada-film-kaddipudi-special-duniya-soori-074651.html">Next »</a></li></ul>
English summary
An interview with Kannada films most successful director Duniya Soori or Suri. He shares his experience about his upcoming film 'Kaddipudi', which will be slated for release on 7th June, 2013. It stars Shivrajkumar and Radhika Pandit in the lead.
Please Wait while comments are loading...