twitter
    For Quick Alerts
    ALLOW NOTIFICATIONS  
    For Daily Alerts

    ಕಾಜಲ್ ಅಗರವಾಲ್ ಚಿತ್ರದ 25 ದೃಶ್ಯಕ್ಕೆ ಕತ್ತರಿ: ಅಂತಹದ್ದೇನಿದೆ ಸಿನಿಮಾದಲ್ಲಿ?

    |

    ಟಾಲಿವುಡ್ ಮತ್ತು ಕಾಲಿವುಡ್ ನ ಖ್ಯಾತ ನಟಿ ಕಾಜಲ್ ಅಗರವಾಲ್ ವಾಲ್ ಇತ್ತೀಚಿಗೆ ತೆರೆ ಮೇಲೆ ಮಿಂಚಿದ್ದು ತುಂಬ ಕಡಿಮೆ. ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಬಳಿ ಸದ್ಯ ಎರಡ್ಮೂರು ಸಿನಿಮಾಗಳಿವೆ. ಆದ್ರೀಗ ಕಾಜಲ್ ಅಭಿನಯದ ಚಿತ್ರವೊಂದಕ್ಕೆ ಸೆನ್ಸಾರ್ ಮಂಡಳಿ ಬರೋಬ್ಬರಿ 25 ಕಡೆ ಕತ್ತರಿ ಹಾಕಿ ಅಚ್ಚರಿ ಮೂಡಿಸಿದೆ.

    ಕನ್ನಡ ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್ ನಿರ್ದೇಶನದ 'ಪ್ಯಾರೀಸ್ ಪ್ಯಾರೀಸ್' ಚಿತ್ರಕ್ಕೆ ಸೆನ್ಸಾರ್ ಮಂಡಳಿ 25 ಕಡೆ ಕತ್ತರಿ ಹಾಕಿದೆ. ಅಚ್ಚರಿಕರ ಸಂಗತಿ ಅಂದ್ರೆ, ಇದೇ ಸಿನಿಮಾ ಬೇರೆ ಬೇರೆ ಹೆಸರಿನಲ್ಲಿ ಕನ್ನಡ, ತಮಿಳು ಮತ್ತು ಮಲಯಾಳಂನಲ್ಲೂ ರಿಲೀಸ್ ಗೆ ಸಿದ್ಧವಾಗಿದೆ.

    ಕಾಜಲ್ ಮೇಲಿನ ಆಸೆಯಿಂದ 60 ಲಕ್ಷ ಕಳೆದುಕೊಂಡ ಯುವಕ ಕಾಜಲ್ ಮೇಲಿನ ಆಸೆಯಿಂದ 60 ಲಕ್ಷ ಕಳೆದುಕೊಂಡ ಯುವಕ

    ಆದ್ರೆ ಕನ್ನಡ, ತೆಲುಗು ಮತ್ತು ಮಲಯಾಳಂ ಸಿನಿಮಾಗೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ. ಆದ್ರೆ ತಮಿಳು ವರ್ಷನ್ ಗೆ ಮಾತ್ರ ಚೆನ್ನೈ ಸೆನ್ಸಾರ್ ಬೋರ್ಡ್ 25ಕ್ಕು ಹೆಚ್ಚು ಕಡೆ ಕತ್ತರಿ ಹಾಕಿದೆ. ಅಲ್ಲದೆ ಅನೇಕ ದೃಶ್ಯಗಳನ್ನು ಬ್ಲರ್ ಮಾಡುವಂತೆ ಮತ್ತು ಮ್ಯೂಟ್ ಮಾಡುವಂತೆ ಚೆನ್ನೈ ಸೆನ್ಸಾರ್ ಬೋರ್ಡ್ ಚಿತ್ರತಂಡಕ್ಕೆ ಸೂಚಿಸಿದೆಯಂತೆ. ಕತ್ತರಿ ಪ್ರಯೋಗ ಆದ ನಂತರ ಮತ್ತೆ ಸೆನ್ಸಾರ್ ಮಾಡಿಸುವಂತೆ ಚಿತ್ರತಂಡಕ್ಕೆ ಹೇಳಿದೆಯಂತೆ.

    Kajal Aggarwal starrer Paris Paris Tamil remake of Queen was given multiple cuts.

    ಅಂದ್ಹಾಗೆ 'ಪ್ಯಾರೀಸ್ ಪ್ಯಾರೀಸ್' ಸಿನಿಮಾ ಬಾಲಿವುಡ್ ನ ಸೂಪರ್ ಹಿಟ್ 'ಕ್ವೀನ್' ಸಿನಿಮಾದ ರಿಮೇಕ್. 2014ರಲ್ಲೆ ರಿಲೀಸ್ ಆದ ಕ್ವೀನ್ ಸಿನಿಮಾ ಕೂಡ ಯು/ಎ ಪ್ರಮಾಣ ಪತ್ರ ಪಡೆದುಕೊಂಡಿತ್ತು. ಆದ್ರೆ ತಮಿಳು ವರ್ಷನ್ ಗೆ ಯಾಕೆ ಚೆನ್ನೈ ಸೆನ್ಸಾರ್ ಬೋರ್ಡ್ ಹೀಗೆ ಮಾಡಿದೆ ಎನ್ನುವುದು ಚಿತ್ರತಂಡದ ಪ್ರಶ್ನೆಯಾಗಿದೆ. ಕನ್ನಡದಲ್ಲಿ ಬಟರ್ ಪ್ಲೈ ಹೆಸರಿನಲ್ಲಿ ನಟಿ ಪಾರುಲ್ ಯಾದವ್ ನಾಯಕಿಯಾಗಿ ಮಿಂಚಿರುವ ಸಿನಿಮಾ ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿದೆ.

    ಈ ಬಗ್ಗೆ ತಮಿಳು ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕಿ ಪಾರುಲ್ ಯಾದವ್ "ಕ್ವೀನ್ ಸಿನಿಮಾದಿಂದ ಕೆಲವೊಂದು ದೃಶ್ಯಗಳನ್ನು ತೆಗೆದುಕೊಂಡಿಲ್ಲ. ಆದ್ರೆ ಚೆನ್ನೈ ಸೆನ್ಸಾರ್ ಬೋರ್ಡ್ ಮಾತ್ರ 25ಕ್ಕು ಹೆಚ್ಚು ಕಡೆ ಕತ್ತರಿ ಹಾಕಿದೆ. ಹಾಗಾಗಿ ಪರಿಷ್ಕರಣೆ ಸಮಿತಿ ಮುಂದೆ ಹೋಗುತ್ತೇವೆ" ಎಂದು ಹೇಳಿದ್ದಾರೆ. ನಾಲ್ಕು ಭಾಷೆಯಲ್ಲೂ ಚಿತ್ರವನ್ನು ಏಕಕಾಲಕ್ಕೆ ತೆರೆಗೆ ತರುವ ಪ್ಲಾನ್ ಮಾಡಿತ್ತು ಚಿತ್ರತಂಡ. ಆದ್ರೀಗ ತಮಿಳು ವರ್ಷನ್ ನಿಂದ ಕೊಂಚ ತಡವಾಗು ಸಾಧ್ಯತೆ ಇದೆ.

    English summary
    Kajal Aggarwal starrer Paris Paris Tamil remake of Queen was given multiple cuts. Kannada and malayalam versions of Queen remake passed the certification with UA.
    Tuesday, August 6, 2019, 16:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X