For Quick Alerts
  ALLOW NOTIFICATIONS  
  For Daily Alerts

  ರಾಜಕಾರಣಿಗಳಿಗೆ ನಿಜವಾದ 'ವಿಲನ್' ರಾಮ್ ಗೋಪಾಲ್ ವರ್ಮಾ!

  |

  ರಾಮ್ ಗೋಪಾಲ್ ವರ್ಮಾ ಕಣ್ಣು ಆಂಧ್ರ ಮತ್ತು ತೆಲಂಗಾಣ ರಾಜಕೀಯದ ಮೇಲೆ ಬಿದ್ದಿದೆ. ಲಕ್ಷ್ಮೀಸ್ ಎನ್.ಟಿ.ಆರ್ ಸಿನಿಮಾ ಮೂಲಕ ಚಂದ್ರಬಾಬು ನಾಯ್ಡು ಅವರನ್ನ ಕಾಡಿದ್ದ ಆರ್.ಜಿ.ವಿ ಈಗ ಮತ್ತಷ್ಟು ನಾಯಕರನ್ನ ಟಾರ್ಗೆಟ್ ಮಾಡಿದ್ದಾರೆ.

  'ಕಮ್ಮ ರಾಜ್ಯಂಲ್ಲೊ ಕಡಪ ರೆಡ್ಡಲು' ಎಂಬ ಸಿನಿಮಾ ಮಾಡುತ್ತಿರುವ ವರ್ಮಾ ಆಂಧ್ರ ರಾಜಕೀಯದ ಮೇಲೆ ತಮ್ಮ ಮೂರನೇ ಕಣ್ಣು ಬಿಟ್ಟಿದ್ದಾರೆ ಅನ್ಸುತ್ತೆ. ಅಧಿಕಾರಕ್ಕಾಗಿ ಆಂಧ್ರದಲ್ಲಿ ರಕ್ತಪಾತ ನಡೆಯುತ್ತಿದೆ ಎಂದು ಹೊರ ಪ್ರಪಂಚಕ್ಕೆ ತೋರಿಸುತ್ತಿದ್ದಾರೆ.

  ಅಂಡರ್ ವರ್ಲ್ಡ್ ಜಗತ್ತಿನ ಭೂಗತ ಪಾತಕಿಗಳ ಜೀವನವನ್ನ ಹೆಕ್ಕಿ, ತೆರೆಮೇಲೆ ತರುತ್ತಿದ್ದ ಆರ್.ಜಿ.ವಿ, ಈಗ ರಾಜಕಾರಣಿಗಳ ಬುಡಕ್ಕೆ ಬೆಂಕಿಯಿಡುವಂತಹ ಸಿನಿಮಾಗಳನ್ನ ಮಾಡುತ್ತಿದ್ದಾರೆ. 'ಕಮ್ಮ ರಾಜ್ಯಂಲ್ಲೊ ಕಡಪ ರೆಡ್ಡಲು' ಟ್ರೈಲರ್ ನೋಡುತ್ತಿದ್ದರೆ, ಲಕ್ಷ್ಮೀಸ್ ಎನ್.ಟಿ.ಆರ್ ಚಿತ್ರಕ್ಕಿಂತ ಹೆಚ್ಚು ವಿವಾದ ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  ರಾಮ್ ಗೋಪಾಲ್ ವರ್ಮಾ ಮುಂದಿನ ಸಿನಿಮಾದಲ್ಲಿ 'ಮೆಗಾಸ್ಟಾರ್' ಟಾರ್ಗೆಟ್!ರಾಮ್ ಗೋಪಾಲ್ ವರ್ಮಾ ಮುಂದಿನ ಸಿನಿಮಾದಲ್ಲಿ 'ಮೆಗಾಸ್ಟಾರ್' ಟಾರ್ಗೆಟ್!

  'ಕಮ್ಮ ರಾಜ್ಯಂಲ್ಲೊ ಕಡಪ ರೆಡ್ಡಲು' ಎಂದು ಹೆಸರಿಟ್ಟಿರುವ ವರ್ಮಾ, ಈ ಚಿತ್ರದಲ್ಲಿ ವೈಎಸ್ ಜಗನ್ಮೋಹನ್ ರೆಡ್ಡಿ ಮತ್ತು ಚಂದ್ರುಬಾಬು ನಾಯ್ಡು ನಡುವಿನ ರಾಜಕೀಯದ ಅಸಲಿ ಕತೆ ಏನು? ಯಾರಿಗೂ ಗೊತ್ತಿಲ್ಲದಂತೆ ಇವರಿಬ್ಬರ ಮಧ್ಯೆ ನಡೆಯುತ್ತಿರುವ ಪ್ರತಿಷ್ಠೆಯ ಕದನ ಹೇಗಿದೆ? ಎಂಬುದರ ಬಗ್ಗೆ ಫೋಕಸ್ ಮಾಡಿದ್ದಾರೆ ಎನ್ನಲಾಗುತ್ತಿದೆ.

  ನೀಲಿತಾರೆಯ ಅರೆನಗ್ನ ಫೋಟೋ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾನೀಲಿತಾರೆಯ ಅರೆನಗ್ನ ಫೋಟೋ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾ

  ವೈಎಸ್ ಜಗನ್ಮೋಹನ್ ರೆಡ್ಡಿ ಸರ್ಕಾರವನ್ನ ಬೀಳಿಸಲು ಚಂದ್ರಬಾಬು ನಾಯ್ಡು ಎಷ್ಟು ಕೆಳಹಂತದ ರಾಜಕೀಯ ಮಾಡ್ತಾರೆ ಎನ್ನುವುದನ್ನ ವರ್ಮಾ ಬಿಚ್ಚಿಟ್ಟಿದ್ದಾರೆ. ಜೊತೆಗೆ ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರು ಪಾತ್ರವನ್ನ ಇಲ್ಲಿ ಸ್ಮರಿಸಿದ್ದು, ಅವರ ಬಗ್ಗೆ ಹೇಗೆ ಬಿಂಬಿಸಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  ಅಂದ್ಹಾಗೆ, ಈ ಟ್ರೈಲರ್ ನೋಡಿದ ಜನರು ಮಾತ್ರ ಬಾಯಿ ಮೇಲೆ ಬೆರಳಿಟ್ಟು, ''ಯಪ್ಪಾ ಈ ವರ್ಮಾಗೆ ಏನ್ ಧೈರ್ಯ ಗುರು'' ಎಂದು ಅಚ್ಚರಿಯಾಗಿದ್ದಾರೆ. 'ಇಷ್ಟು ಓಪನ್ ಆಗಿ ಅವರ ಕತೆಗಳನ್ನ ತೋರಿಸ್ತಾರೆ, ನಿಜಕ್ಕೂ ಇದು ವರ್ಮಾ ಅವರಿಂದ ಮಾತ್ರ ಸಾಧ್ಯ'' ಎಂದು ಹೇಳುವವರು ಇದ್ದಾರೆ.


  ಈ ನಟಿ ಮೊಬೈಲ್ ಗೆ ಅಶ್ಲೀಲ ವಿಡಿಯೋ ಕಳುಹಿಸಿದ್ದರಂತೆ ವರ್ಮಾ

  ಅಂದ್ಹಾಗೆ, 'ಕಮ್ಮ ರಾಜ್ಯಂಲ್ಲೊ ಕಡಪ ರೆಡ್ಡಲು' ಸಿನಿಮಾ ಸೆನ್ಸಾರ್ ಆಗಿಲ್ಲ. ಈ ಚಿತ್ರದ ಬಿಡುಗಡೆಗೆ ಅನುಮತಿ ಸಿಗುತ್ತೋ ಇಲ್ವೋ ಎಂಬ ಅನುಮಾನವೂ ಇದೆ. ಒಟ್ಟಾರೆ, ವರ್ಮಾ ಅವರು ಈ ಸಿನಿಮಾ ಮಾತ್ರ ಸದ್ಯ ಟಾಲಿವುಡ್ನ ಸೆನ್ಸೆಷ್ನಲ್ ಆಗಿದೆ.

  ಅಜ್ಮಲ್ ಅಮೀರ್ ಅವರು ಜಗನ್ಮೋಹನ್ ರೆಡ್ಡಿ ಅವರ ಪಾತ್ರದಲ್ಲಿ ನಟಿಸಿದ್ದು, ಬ್ರಹ್ಮಾನಂದಂ, ಅಲಿ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ಸ್ವತಃ ರಾಮ್ ಗೋಪಾಲ್ ವರ್ಮಾ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ.

  English summary
  Ram gopal varma directed Kama Rajyam Lo Kadapa Redla trailer has released. this trailer may be created controversy in Andhra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X