For Quick Alerts
  ALLOW NOTIFICATIONS  
  For Daily Alerts

  'ವಿಶ್ವರೂಪಂ 2'ಕ್ಕೆ ನಟ ಕಮಲ್ ಹಾಸನ್ ತಯಾರಿ

  By ಶಂಕರ್, ಚೆನ್ನೈ
  |

  ಕಮಲ್ ಹಾಸನ್ ನಟಿಸಿ, ನಿರ್ದೇಶಿಸಿ ಹಾಗೂ ನಿರ್ಮಿಸಿರುವ 'ವಿಶ್ವರೂಪಂ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಮೇಲಿನ ನಿಷೇಧವನ್ನು ತಮಿಳುನಾಡು ಸರ್ಕಾರ ತೆರೆವುಗೊಳಿಸಿದ್ದು, ಫೆ.7ರಿಂದ ಪ್ರದರ್ಶನ ಕಾಣುತ್ತಿದೆ. ತಮಿಳುನಾಡಿನಾದ್ಯಂತ ಚಿತ್ರಕ್ಕೆ ನೂಕು ನುಗ್ಗಲು ಏರ್ಪಟ್ಟಿದೆ.

  ಚಿತ್ರಕ್ಕೆ ಎಲ್ಲಡೆಯಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಮುಂಗಡ ಬುಕಿಂಗ್ ಕ್ಲೋಸ್ ಆಗಿದ್ದು ಒಂದು ವಾರದ ತನಕ ಟಿಕೆಟ್ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ ಕಮಲ್ ಅವರು ತಮ್ಮ ರಾಜ್ ಕಮಲ್ ಫಿಲಂಸ್ ಕಚೇರಿಗೆ ಮಾಧ್ಯಮ ಮಿತ್ರರನ್ನು ಆಹ್ವಾನಿಸಿದ್ದರು.

  ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಚಿರಋಣಿ ಎಂದ ಅವರು, ಇದೇ ಸಂದರ್ಭದಲ್ಲಿ ಅವರು ತಮ್ಮ ಮುಂದಿನ ಯೋಜನೆ ಬಗ್ಗೆಯೂ ಮಾತನಾಡಿದ್ದಾರೆ. "ತಮ್ಮ ಮುಂದಿನ ಚಿತ್ರ 'ವಿಶ್ವರೂಪಂ 2' ಅಥವಾ 'ಮೂ' (Moo) ಎಂದು ಹೆಸರಿಡಲು ನಿರ್ಧರಿಸಿದ್ದೇನೆ" ಎಂದಿದ್ದಾರೆ.

  ವಿಶ್ವರೂಪಂ ಚಿತ್ರದಲ್ಲಿರುವ ಬಹುತೇಕ ಪಾತ್ರವರ್ಗ ಭಾಗ 2ರಲ್ಲೂ ಇರುತ್ತದೆ. ತಾಂತ್ರಿಕ ಬಳಗವೂ ಹೆಚ್ಚುಕಡಿಮೆ ಅವರೇ ಇರುತ್ತಾರೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಡಿಟಿಎಚ್ ಪ್ರಸಾರದ ಬಗೆಗಿನ ಗೊಂದಲಗಳನ್ನು ಶೀಘ್ರದಲ್ಲೇ ಇತ್ಯರ್ಥ ಮಾಡುವ ಭರವಸೆಯನ್ನು ನೀಡಿದರು.

  ತಮ್ಮ ವಿಶ್ವರೂಪಂ ಚಿತ್ರಕ್ಕೆ ಮುಸ್ಲಿಂ ಸಂಘಟನೆಗಳಿಂದ ವಿವಾದ ಎದುರಾದ ಬಳಿಕ ಅವರು ಹೆಚ್ಚಾಗಿ ತಮ್ಮ ರಾಜ್ ಕಮಲ್ ಫಿಲಂಸ್ ಕಚೇರಿಗೆ ಭೇಟಿ ನೀಡುತ್ತಿರಲಿಲ್ಲ. ಆದರೆ ಈಗ ಸಮಸ್ಯೆ ಬಗೆಹರಿದಿರುವ ಕಾರಣ ಅವರು ತಮ್ಮ ಕಚೇರಿಗೆ ಬಂದು ಹೋಗುತ್ತಿದ್ದಾರೆ.

  English summary
  After Vishwaroopam actor Kamal Haasan all plans to take his next project. His next project is named as Vishwaroopam 2 or Moo. The cast for this project will be the same in addition to some from Hollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X