For Quick Alerts
  ALLOW NOTIFICATIONS  
  For Daily Alerts

  ವಿಷ್ಣು ಅಭಿಮಾನಿಗಳಿಗೆ ಕ್ಷಮೆ ಕೋರಿದ ನಿರ್ದೇಶಕ ಆರ್.ಚಂದ್ರು

  By Harshitha
  |

  ಕನ್ನಡ ಚಿತ್ರರಂಗಕ್ಕೆ ಆರ್.ಚಂದ್ರು ಕಾಲಿಟ್ಟು ಹತ್ತು ವರ್ಷಗಳಾಗಿವೆ. ಈ ಒಂದು ದಶಕದಲ್ಲಿ ಆರ್.ಚಂದ್ರು ನಿರ್ದೇಶಿಸಿರುವ ಚಿತ್ರಗಳು ಸಿಕ್ಕಾಪಟ್ಟೆ ಪ್ರಚಾರ ಪಡೆಯಿತೇ ಹೊರತು ವಿವಾದಗಳನ್ನ ಹುಟ್ಟು ಹಾಕಲಿಲ್ಲ. ಕಾಂಟ್ರವರ್ಸಿಗಳಿಂದ ಕೊಂಚ ದೂರವೇ ಉಳಿದಿದ್ದ ಆರ್.ಚಂದ್ರು 'ಕನಕ' ಚಿತ್ರದಿಂದ ಮಾತ್ರ ಬೇಡದ ವಿಷಯಕ್ಕೆ ಸುದ್ದಿ ಮಾಡಿದ್ದಾರೆ.

  'ಮಾಸ್ತಿ ಗುಡಿ' ದುರಂತದಲ್ಲಿ ಸಾವನ್ನಪ್ಪಿದ ಅನಿಲ್ ಹಾಗೂ ಉದಯ್ ಕುಟುಂಬಕ್ಕೆ ಸಹಾಯ ಹಸ್ತ ಚಾಚುವ ಮೂಲಕ 'ಕನಕ' ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳಿಗೆ ಆರ್.ಚಂದ್ರು ಚಾಲನೆ ನೀಡಿದ್ರು. ಮೊನ್ನೆಯಷ್ಟೇ 'ಕನಕ' ಚಿತ್ರದ ಸಾಂಗ್ ರೆಕಾರ್ಡಿಂಗ್ ಕೂಡ ಅದ್ಧೂರಿಯಾಗಿ ಪ್ರಾರಂಭವಾಯ್ತು. ಅದೇ ಸಮಯದಲ್ಲಿ ಬಿಡುಗಡೆ ಆದ 'ಕನಕ' ಪೋಸ್ಟರ್ ನಲ್ಲಿ ಬರೆದ ಸಾಲು ಈಗ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಕಣ್ಣು ಕೆಂಪಗೆ ಮಾಡಿದೆ.

  ವಿವಾದದ ಗಾಂಭೀರ್ಯ ಅರಿತಿರುವ ನಿರ್ದೇಶಕ ಆರ್.ಚಂದ್ರು 'ಸಾಹಸ ಸಿಂಹ' ವಿಷ್ಣು ಅಭಿಮಾನಿಗಳಲ್ಲಿ ಕ್ಷಮೆ ಕೋರಿದ್ದಾರೆ. 'ಕನಕ' ಪೋಸ್ಟರ್ ವಿವಾದದ ಕುರಿತು ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಆರ್.ಚಂದ್ರು ನೀಡಿದ ಸ್ಪಷ್ಟನೆ ಇಲ್ಲಿದೆ ಓದಿ....

  'ಕನಕ' ಕ್ಯಾರೆಕ್ಟರ್ ಹುಲಿ ತರಹ.!

  'ಕನಕ' ಕ್ಯಾರೆಕ್ಟರ್ ಹುಲಿ ತರಹ.!

  ''ಕನಕ'ನ ಕ್ಯಾರೆಕ್ಟರ್ ಹುಲಿ ತರಹ. ಅಂದ್ರೆ ಹುಲಿ ತರಹದ ಫೋರ್ಸ್. ಪೋಸ್ಟರ್ ನಲ್ಲೂ ಹುಲಿ ಇದೆ. ಹೀಗಿದ್ದೂ, 'ಇಲಿಗೆ ಬಗ್ತೀನಿ, ಹುಲಿ ಬಗುದ್ಬಿಡ್ತೀನಿ' ಅಂದ್ರೆ ತಪ್ಪಾಗುತ್ತೆ ಅಂತ ಹುಲಿ ಬದಲು ಸಿಂಹ ಬಳಸಿದ್ವಿ ಅಷ್ಟೆ. ವ್ಯಕ್ತಿಗತವಾಗಿ ಬಳಸಿಲ್ಲ, ಬಳಸುವುದಿಲ್ಲ'' ಅಂತ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ನಿರ್ದೇಶಕ ಆರ್.ಚಂದ್ರು ಸ್ಪಷ್ಟನೆ ನೀಡಿದರು. [ಆರ್.ಚಂದ್ರು ವಿರುದ್ಧ ಘರ್ಜಿಸಿದ ಸಾಹಸ'ಸಿಂಹ' ಫ್ಯಾನ್ಸ್: ಏನಿದು ಹೊಸ ವಿವಾದ.?]

  ಎಲ್ಲರನ್ನೂ ಇಷ್ಟ ಪಡುತ್ತೇನೆ

  ಎಲ್ಲರನ್ನೂ ಇಷ್ಟ ಪಡುತ್ತೇನೆ

  ''ನಾವು ಅಣ್ಣಾವ್ರು, ವಿಷ್ಣು ಸರ್, ಅಂಬರೀಶ್ ಸರ್, ಶಂಕ್ರಣ್ಣ... ಎಲ್ಲರನ್ನೂ ಇಷ್ಟ ಪಡುತ್ತೇವೆ. ಆ ಒಂದು ಲೈನ್ ಬರೆಯುವಾಗ ನಮ್ಮ ಮೈಂಡ್ ಗೆ ಯಾರೂ ಬರಲಿಲ್ಲ'' - ಆರ್.ಚಂದ್ರು, ನಿರ್ದೇಶಕ

  ಕ್ಷಮೆ ಕೇಳಿದ ಆರ್.ಚಂದ್ರು

  ಕ್ಷಮೆ ಕೇಳಿದ ಆರ್.ಚಂದ್ರು

  ''ನಾನು ಖಂಡಿತವಾಗಲೂ ಒಂದೊಳ್ಳೆ ಸಿನಿಮಾ ಮಾಡ್ತಿದ್ದೇನೆ. ಈ ಚಿತ್ರದಲ್ಲಿ ಎಲ್ಲರೂ ಬಂದು ಹೋಗುತ್ತಾರೆ. ಎಲ್ಲರನ್ನೂ ನಾವು ಆರಾಧಿಸುತ್ತೇವೆ. ನನ್ನಿಂದ ಬೇಸರ ಆಗಿದ್ದರೆ ಕ್ಷಮೆ ಕೇಳುತ್ತೇನೆ. ನಾಳೆಯಿಂದ ಆ ತರಹ ಸಂಭಾಷಣೆ ಬಳಸುವುದಿಲ್ಲ. ನಮ್ಮ ಉದ್ದೇಶ ಹಾಗಿರಲಿಲ್ಲ ಎಂಬುದು ಕೂಡ ಸತ್ಯ'' - ಆರ್.ಚಂದ್ರು, ನಿರ್ದೇಶಕ ['ಡಾ.ರಾಜ್ ಕುಮಾರ್ ಅಭಿಮಾನಿ' ಕುರಿತು ಆರ್ ಚಂದ್ರು ಹೊಸ ಸಿನಿಮಾ]

  ವೀರಕಪುತ್ರ ಶ್ರೀನಿವಾಸ್ ಗೆ ಆರ್.ಚಂದ್ರು ಪತ್ರ

  ವೀರಕಪುತ್ರ ಶ್ರೀನಿವಾಸ್ ಗೆ ಆರ್.ಚಂದ್ರು ಪತ್ರ

  'ಕನಕ' ಪೋಸ್ಟರ್ ನಲ್ಲಿರುವ #ಗರ್ಜಿಸೋ_ಸಿಂಹಾನದ್ರೂ_ಬಗುದುಬಿಡ್ತೀನಿ.. ಎಂಬ ಸಾಲಿನ ಕುರಿತು ಡಾ.ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಫೇಸ್ ಬುಕ್ ನಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡುವ ಸಲುವಾಗಿ ಆರ್.ಚಂದ್ರು ಒಂದು ಪತ್ರ ಬರೆದಿದ್ದಾರೆ.

  ಆರ್.ಚಂದ್ರು ಬರೆದಿರುವ ಪತ್ರದಲ್ಲಿ ಏನಿದೆ?

  ಆರ್.ಚಂದ್ರು ಬರೆದಿರುವ ಪತ್ರದಲ್ಲಿ ಏನಿದೆ?

  ''ಸಹೋದರ ಶ್ರೀನಿವಾಸ್ ರವರೇ...

  ನೀವು ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಲೇಖನ ಓದಿದೆ. ನಾನು ಈ ಸಂಭಾಷಣೆ ಬರೆದಾಗ ಅಂತಹ ಮೇರುನಟನಿಗೆ ಹೋಲಿಕೆಯಾಗಬಹುದೆಂದು ಅನಿಸಿರಲಿಲ್ಲ. ಕೆಟ್ಟ ಉದ್ದೇಶವೂ ನನಗೆ ಇರಲಿಲ್ಲ. ಇರುವುದಿಲ್ಲ ಕೂಡ. ನಾವು ಕೂಡ ಅಣ್ಣಾವ್ರು, ವಿಷ್ಣು ಸಾರ್, ಶಂಕ್ರಣ್ಣ ಇವರುಗಳ ಸಿನಿಮಾಗಳನ್ನ ನೋಡುತ್ತಾ, ಆದರ್ಶಗಳನ್ನು ಪಾಲಿಸುತ್ತಾ ಚಿತ್ರರಂಗಕ್ಕೆ ಬಂದವನು. ಅಂತಹ ಮಹಾನ್ ದೇವರುಗಳ ಹೆಸರಿಗೆ ಕಳಂಕ ತರುವ ಕೆಲಸವನ್ನು ಯಾವ ಕನ್ನಡಿಗ ಕೂಡ ಮಾಡಬಾರದು. ನಾನೂ ಮಾಡುವುದಿಲ್ಲ'' - ಆರ್.ಚಂದ್ರು, ನಿರ್ದೇಶಕ

  ಕಥೆಗಾಗಿ ಬಳಸಿದ ಪದ

  ಕಥೆಗಾಗಿ ಬಳಸಿದ ಪದ

  ''ನಾನು ಈಗ ನಿರ್ದೇಶಿಸಲು ಹೊರಟಿರುವ 'ಕನಕ' ಚಿತ್ರದಲ್ಲಿ ದುನಿಯಾ ವಿಜಯ್ ರವರ ಪಾತ್ರ 'ಹುಲಿ'ಯಂತಿದ್ದ ಕಾರಣಕ್ಕೆ 'ಹುಲಿಗೆ ಹುಲಿಯೇ ಬಗಿದರೆ ಅನರ್ಥವಾಗಿರುತ್ತಿತ್ತು. ಹಾಗಾಗಿ 'ಸಿಂಹ'ದ ಹೆಸರು ಬಳಸಿದೆ. ಕಥೆಗೋಸ್ಕರ ಬಳಸಿದ ಪದವಷ್ಟೆ'' - ಆರ್.ಚಂದ್ರು, ನಿರ್ದೇಶಕ [ಆರ್ ಚಂದ್ರು ಚಿತ್ರದಲ್ಲಿ 'ರಾಜ್ ಕುಮಾರ್ ಫ್ಯಾನ್' ಯಾರು ಗೊತ್ತಾ?]

  ಇನ್ಮುಂದೆ ಬಳಸುವುದಿಲ್ಲ

  ಇನ್ಮುಂದೆ ಬಳಸುವುದಿಲ್ಲ

  ''ಈಗ ಅದು ನಿಮ್ಮ ಅನಿಸಿಕೆಯಂತೆ, ಅದು ವಿಷ್ಣು ಸರ್ ರವರನ್ನು ನೆನಪಿಸುತ್ತದೆ ಎನ್ನುವುದಾದರೆ, ಈ ಸಂಭಾಷಣೆಯನ್ನು 'ಕನಕ' ಚಿತ್ರದಲ್ಲಿ ಖಂಡಿತ ಬಳಸುವುದಿಲ್ಲ. ನಿಮಗೆ ನೋವಾಗಿದ್ದರೆ ಖಂಡಿತ ಕ್ಷಮೆ ಇರಲಿ. ಕಾಕತಾಳಿಯ ಈ ಸಂದರ್ಭ ಯಾರಿಗೂ ನೋವುಂಟು ಮಾಡದಿರಲಿ'' - ಆರ್.ಚಂದ್ರು, ನಿರ್ದೇಶಕ

  ಚಿತ್ರರಂಗ ಬೆಳೆಸೋಣ

  ಚಿತ್ರರಂಗ ಬೆಳೆಸೋಣ

  ''ನಾವೆಲ್ಲರೂ ಕನ್ನಡ ತಾಯಿಯ ಮಕ್ಕಳು.. ನಮ್ಮಲ್ಲಿ ಹಗೆತನ ಬೇಡ.. ಕನ್ನಡ ಉಳಿಸೋಣ.. ಕನ್ನಡ ಚಿತ್ರರಂಗ ಬೆಳೆಸೋಣ'' - ಆರ್.ಚಂದ್ರು, ನಿರ್ದೇಶಕ

  ವಿವಾದದ ಹಿನ್ನಲೆ

  ವಿವಾದದ ಹಿನ್ನಲೆ

  'ಕನಕ' ಚಿತ್ರದ ಪೋಸ್ಟರ್ ನಲ್ಲಿ 'ಪ್ರೀತೀಲಿ ಬಂದ್ರೆ, ಇಲಿಗೂ ಬಗ್ತೀನಿ. ಗಾಂಚಲಿ ಮಾಡಿದ್ರೆ, ಗರ್ಜಿಸೋ ಸಿಂಹಾನೂ ಬಗುದ್ಬಿಡ್ತೀನಿ' ಎಂಬ ಸಾಲು ಬಳಸಲಾಗಿದೆ. ಇದನ್ನ ನೋಡಿ 'ಸಾಹಸ ಸಿಂಹ' ಫ್ಯಾನ್ಸ್ ಗರಂ ಆದರು. ಅದರಲ್ಲೂ ಆರ್.ಚಂದ್ರು ವಿರುದ್ಧ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಫೇಸ್ ಬುಕ್ ನಲ್ಲಿ ಗುಡುಗಿದರು.

  ಸಂಪೂರ್ಣ ಸ್ಟೇಟಸ್ ನೋಡಿ

  ಸಂಪೂರ್ಣ ಸ್ಟೇಟಸ್ ನೋಡಿ

  'ಕನಕ' ಚಿತ್ರದ ಪೋಸ್ಟರ್ ಕುರಿತು ಅಸಮಾಧಾನ ವ್ಯಕ್ತಪಡಿಸಿ, ತಮ್ಮ ಫೇಸ್ ಬುಕ್ ನಲ್ಲಿ ವೀರಕಪುತ್ರ ಶ್ರೀನಿವಾಸ್ ಹಾಕಿರುವ ಸುದೀರ್ಘ ಸ್ಟೇಟಸ್ ಲಿಂಕ್ ಇಲ್ಲಿದೆ. ಕ್ಲಿಕ್ ಮಾಡಿ...

  English summary
  Veerakaputra Srinivasa, President of Dr.Vishnu Sena Samithi took his facebook account to express his displeasure over R.Chandru directorial 'Kanaka' poster. Now, R.Chandru has given clarification over the usage of 'Simha' dialogue

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X