»   » ಜನಜಂಗುಳಿಯಲ್ಲಿ ನಡೆಯಲಿದೆ 'ಕನಕ'ನ ಫೋಟೋಶೂಟ್

ಜನಜಂಗುಳಿಯಲ್ಲಿ ನಡೆಯಲಿದೆ 'ಕನಕ'ನ ಫೋಟೋಶೂಟ್

Posted By:
Subscribe to Filmibeat Kannada
ದುನಿಯಾ ವಿಜಯ್ ಹಾಗೂ ಆರ್.ಚಂದ್ರು ಕಾಂಬಿನೇಷನ್ ನಲ್ಲಿ 'ಕನಕ' ಚಿತ್ರ ತಯಾರಾಗುತ್ತಿರುವ ಸುದ್ದಿ ನಿಮಗೆ ತಿಳಿದಿದೆ. ಈಗಾಗಲೇ ಮುಹೂರ್ತ ಮುಗಿಸಿರುವ 'ಕನಕ' ಚಿತ್ರತಂಡ, ಸದ್ಯದಲ್ಲೇ ಒಂದು ಸ್ಪೆಷಲ್ ಫೋಟೋಶೂಟ್ ಗೆ ಚಾಲನೆ ನೀಡಲಿದೆ.

ಸಾಮಾನ್ಯವಾಗಿ ಫೋಟೋಶೂಟ್ ನಡೆಯುವುದು ಸ್ಟುಡಿಯೋದಲ್ಲಿ. ಆದ್ರೆ, 'ಕನಕ'ನ ಫೋಟೋಶೂಟ್ ಎಂದಿನಂತೆ ಸ್ಟುಡಿಯೋದಲ್ಲಿ ನಡೆಯುವುದಿಲ್ಲ. ಬದಲಾಗಿ ಜನನಿಬಿಡ ಪ್ರದೇಶಗಳಲ್ಲಿ ನಡೆಯುತ್ತೆ.[ಅಣ್ಣಾವ್ರ ಅಭಿಮಾನಿ 'ಕನಕ' ಸಾಂಗ್ ರೆಕಾರ್ಡಿಂಗ್ ಆರಂಭ]

kanaka-photo-shoot-amidst-crowd

ಹೇಳಿ ಕೇಳಿ, 'ಕನಕ' ಆಟೋ ಡ್ರೈವರ್. ಅದರಲ್ಲೂ ಡಾ.ರಾಜ್ ಅಭಿಮಾನಿ. ಹೀಗಾಗಿ, ನಗರದ ಕೆಲ ಜನಜಂಗುಳಿ ಇರುವ ಆಟೋ ಸ್ಟ್ಯಾಂಡ್ ಗಳಲ್ಲಿ ಫೋಟೋಶೂಟ್ ನಡೆಸಲು ನಿರ್ದೇಶಕ ಆರ್.ಚಂದ್ರು ತೀರ್ಮಾನಿಸಿದ್ದಾರೆ. ಇದಕ್ಕೆ ಆಟೋ ಡ್ರೈವರ್ 'ಕನಕ' ಪಾತ್ರ ನಿರ್ವಹಿಸುತ್ತಿರುವ ದುನಿಯಾ ವಿಜಯ್ ಕೂಡ ಸಮ್ಮತಿ ಕೊಟ್ಟಿದ್ದಾರೆ.[ದುನಿಯಾ ವಿಜಯ್ ಹುಟ್ಟುಹಬ್ಬ: ಬಡವರಿಗೆ 'ಕನಕ'ನ ಕಾಣಿಕೆ]

kanaka-photo-shoot-amidst-crowd

ಈಗಾಗಲೇ ಆಟೋ ಡ್ರೈವರ್ ಗಳ ಮಾತಿನ ಶೈಲಿ ಹಾಗೂ ಮ್ಯಾನರಿಸಂಗಳನ್ನ ಸೂಕ್ಷ್ಮವಾಗಿ ಗಮನಿಸಿರುವ ದುನಿಯಾ ವಿಜಯ್ 'ಆಟೋ' ಓಡಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಎಲ್ಲವೂ ಪ್ಲಾನ್ ಪ್ರಕಾರ ನಡೆದರೆ, ಇನ್ನು ಕೆಲವೇ ದಿನಗಳಲ್ಲಿ 'ಕನಕ' ಫೋಟೋಶೂಟ್ ನಡೆಯಲಿದೆ. ಅದಾದ ಬಳಿಕ ಶೂಟಿಂಗ್ ಶುರು....

English summary
Duniya Vijay starrer R.Chandru directorial 'Kanaka' photo shoot will be done amidst Crowd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada