For Quick Alerts
  ALLOW NOTIFICATIONS  
  For Daily Alerts

  ಜಯಲಲಿತಾ ಪಾತ್ರಕ್ಕೆ ಕಂಗನಾ ಪಡೆದ ಸಂಭಾವನೆ ಇಷ್ಟೊಂದಾ

  |

  ಬಾಲಿವುಡ್ ನಟಿ ಕಂಗಾನ ರಣವತ್ ಪ್ರತಿ ಸಿನಿಮಾದಲ್ಲಿಯೂ ಚಾಲೆಂಜಿಂಗ್ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾರೆ. ಹೊಸ ಹೊಸ ರೀತಿಯ ಪಾತ್ರಗಳ ಮೂಲಕ ಕಂಗಾನ ಬಿ ಟೌನ್ ನಲ್ಲಿ ಪ್ರಭಾವ ಬೀರಿದ್ದಾರೆ.

  ಕಂಗಾನಾ ಇದೀಗ ಮತ್ತೊಂದು ಮಹತ್ವದ ಪಾತ್ರವನ್ನು ಮಾಡಲು ಸಿದ್ಧವಾಗಿದ್ದಾರೆ. ಅದೇ ಜಯಲಲಿತಾ ಪಾತ್ರ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನಾದಾರಿತ ಸಿನಿಮಾದಲ್ಲಿ ಕಂಗಾನಾ ಕಾಣಿಸಿಕೊಳ್ಳುತ್ತಿದ್ದಾರೆ.

  Big News: ಜಯಲಲಿತಾ ಬಗ್ಗೆ ಇನ್ನೊಂದು ಬಯೋಪಿಕ್: 'ಅಮ್ಮ'ನ ಪಾತ್ರದಲ್ಲಿ ಖ್ಯಾತ ನಟಿ

  ಅಂದಹಾಗೆ, ಈ ಸಿನಿಮಾ ಈಗ ಸುದ್ದಿ ಮಾಡುತ್ತಿರುವುದು ಕಂಗಾನಾ ಸಂಭಾವನೆ ವಿಚಾರಕ್ಕೆ. ಕಂಗಾನಾ ಈ ಸಿನಿಮಾಗಾಗಿ ಬರೊಬ್ಬರಿ 25 ಕೋಟಿ ಸಂಭಾವನೆ ಪಡೆಯಲಿದ್ದಾರಂತೆ. ಈ ಸಿನಿಮಾ ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಗೆ ಬರಲಿದ್ದು, ಈ ಮಟ್ಟದ ಸಂಭಾವನೆ ಕಂಗಾನಾಗೆ ಸಿಗುತ್ತಿದೆಯಂತೆ.

  ನಟಿಯರಿಗೆ ಈ ಮಟ್ಟಿನ ಸಂಭಾವನೆ ಸಿಗುವುದು ಎಂದರೆ ದೊಡ್ಡ ವಿಷಯ. ಇನ್ನು ದೀಪಿಕಾ ಪಡುಕೋಣೆ 'ಪದ್ಮಾವತ್' ಸಿನಿಮಾಗೆ 13 ಕೋಟಿ ಸಂಭಾವನೆ ಪಡೆದು ಅಚ್ಚರಿ ಮೂಡಿಸಿದ್ದರು. ಈಗ ಕಂಗಾನಾ ಅದನ್ನು ಮೀರಿಸಿದ್ದಾರೆ.

  ಹೃತಿಕ್ ರೋಷನ್ ವಿರುದ್ಧ ಸಿಡಿದೆದ್ದ ಕಂಗನಾ ರಣೌತ್.!

  ಕಂಗಾನಾ ನಟಿಸಿರುವ ಸಾಕಷ್ಟು ಸಿನಿಮಾಗಳು ನೂರು ಕೋಟಿ ಕ್ಲಬ್ ಸೇರಿವೆ. ಈ ಕಾರಣ ಅವರಿಗೆ ದೊಡ್ಡ ಸಂಭಾವನೆ ಸಿಗುತ್ತಿದೆ.

  English summary
  Bollywood actress Kangana Ranaut getting 25 crore remuneration for jayalalitha biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X