»   » 'ಕೃಷ್ಣ-ರುಕ್ಕು' ಸಿನಿಮಾದ ಅಸಲಿ ಸತ್ಯ ಬಿಚ್ಚಿಟ್ಟ ಅಜೇಯ್ ರಾವ್

'ಕೃಷ್ಣ-ರುಕ್ಕು' ಸಿನಿಮಾದ ಅಸಲಿ ಸತ್ಯ ಬಿಚ್ಚಿಟ್ಟ ಅಜೇಯ್ ರಾವ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಕೃಷ್ಣ ಅಜೇಯ್ ರಾವ್ ಮತ್ತು ಬೇಬಿ ಡಾಲ್ ಅಮೂಲ್ಯ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ಕೃಷ್ಣ-ರುಕ್ಕು' ಸಿನಿಮಾ ಬಿಡುಗಡೆ ಆಗಿಯೂ ಆಗಿದೆ. ಚಿತ್ರಕ್ಕೆ ಜನರ ಪ್ರತಿಕ್ರಿಯೆ ಕೂಡ ಉತ್ತಮವಾಗಿ ವ್ಯಕ್ತವಾಗಿದೆ.

ಅಂದಹಾಗೆ ಇದೀಗ ವಿಷ್ಯಾ ಏನಪ್ಪಾ ಅಂದ್ರೆ, ಅಮೂಲ್ಯ-ಅಜೇಯ್ ರಾವ್ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ 'ಕೃಷ್ಣ-ರುಕ್ಕು' ಸಿನಿಮಾ ತೆಲುಗು ಸಿನಿಮಾದ ರೀಮೇಕ್ ಅಂತ ಸಿನಿಮಾ ನೋಡಿದ ಎಲ್ಲರಿಗೂ ಗೊತ್ತಾಯ್ತು.[ವಿಮರ್ಶೆ: ಉಡಾಫೆ ಕೃಷ್ಣ, ಬಜಾರಿ ರುಕ್ಕು ಕಥೆ ಚೆನ್ನಾಗಿದೆ]


Kannada Actor Ajay Rao reveals the matter of 'Krishna-Rukku' Remake

ಆದರೆ ಬಿಡುಗಡೆಗೂ ಮುಂಚೆ ರೀಮೇಕ್ ಅಲ್ಲ ಅಂತ ಅಲ್ಲಗಳೆದಿದ್ದ ಅದೇ ಅಜೇಯ್ ರಾವ್ ಅವರು ಇದೀಗ ಸಿನಿಮಾ ತೆಲುಗಿನ 'ಉಯ್ಯಾಲಾ ಜಂಪಾಲಾ' ರೀಮೇಕ್ ಅಂತ ಬಾಯಿ ಬಿಟ್ಟಿದ್ದಾರೆ. ರೀಮೇಕ್ ವಿಷಯವನ್ನು ಮುಚ್ಚಿಟ್ಟಿದ್ದಕ್ಕೆ ಕಾರಣವನ್ನು ಕೊಟ್ಟಿದ್ದಾರೆ.


Kannada Actor Ajay Rao reveals the matter of 'Krishna-Rukku' Remake

"ನಾವು 'ಕೃಷ್ಣ-ರುಕ್ಕು' ಸಿನಿಮಾ ತೆಲುಗಿನ ರೀಮೇಕ್ ಅಂತ ಪತ್ರಿಕಾಗೋಷ್ಠಿಯಲ್ಲಿ ಬಾಯಿ ಬಿಟ್ಟಿರಲಿಲ್ಲ. ಆದರೆ ಸಿನಿಮಾ ರೀಮೇಕ್ ಅಂತ ಕೆಲವರಿಗೆ ಗೊತ್ತಿತ್ತು. ಆದರೆ ನಮಗೆ ಸತ್ಯ ವಿಷಯವನ್ನು ಮುಚ್ಚಿಡಬೇಕು, ಪ್ರೇಕ್ಷಕರಿಗೆ ಮೋಸ ಮಾಡಬೇಕು ಅನ್ನೋ ಉದ್ದೇಶ ಖಂಡಿತ ಇರಲಿಲ್ಲ'.['ಕೃಷ್ಣ ರುಕ್ಕು' ಪ್ರೀತಿಗೆ ವಿಮರ್ಶಕರು ಏನಂದ್ರು]


Kannada Actor Ajay Rao reveals the matter of 'Krishna-Rukku' Remake

'ಸಿನಿಮಾ ರೀಮೇಕ್ ಅಂತ ಎಲ್ಲೆಡೆ ಸುದ್ದಿಯಾದರೆ, ಕೆಲವು ಕೇಬಲ್ ಚಾನಲ್ ನವರು ಒರಿಜಿನಲ್ ಚಿತ್ರವನ್ನು ಪ್ರದರ್ಶನ ಮಾಡಿದರೆ, ನಮ್ಮ ಜನ ಚಿತ್ರಮಂದಿರಕ್ಕೆ ಬರುವುದಿಲ್ಲ. ಇದರಿಂದ ನಮ್ಮ ನಿರ್ಮಾಪಕರಿಗೆ ಅನ್ಯಾಯ ಆಗಬಹುದು ಎಂಬ ಕಾರಣಕ್ಕಾಗಿ ಈ ವಿಷಯವನ್ನು ದೊಡ್ಡದು ಮಾಡಲಿಲ್ಲ' ಎಂದು ಅಜೇಯ್ ರಾವ್ ಸಮಜಾಯಿಷಿ ನೀಡಿದ್ದಾರೆ.[ಬ್ಯಾಂಕಾಕ್ ನಲ್ಲಿ ಅಜೇಯ್ ರಾವ್ ಮತ್ತು ಅಮೂಲ್ಯಾ]


Kannada Actor Ajay Rao reveals the matter of 'Krishna-Rukku' Remake

'ಚಿತ್ರ ತೆಲುಗಿನ 'ಉಯ್ಯಾಲಾ ಜಂಪಾಲಾ' ರೀಮೇಕ್ ಆದರೂ ಮೂಲ ಚಿತ್ರದವರು ನಮಗೆ ಫೋನ್ ಮಾಡಿ 'ನಮಗಿಂಥ ಚೆನ್ನಾಗಿ ಸಿನಿಮಾ ಮಾಡಿದ್ದೀರಾ, ಬಹಳ ಚೆನ್ನಾಗಿ ಮೂಡಿಬಂದಿದೆ ಎಂದು ಮೆಚ್ಚಿಕೊಂಡಿದ್ದಾರೆ. ಇದಕ್ಕಿಂತ ಹೆಚ್ಚಿನ ಸಂತೋಷ ಇನ್ನೇನು ಬೇಕು' ಅಂತಾರೆ ನಟ ಅಜೇಯ್ ರಾವ್.


ಒಟ್ನಲ್ಲಿ ನಿರ್ದೇಶಕ ಅನಿಲ್ ಕುಮಾರ್ ಆಕ್ಷನ್-ಕಟ್ ಹೇಳಿದ್ದ, ನಿರ್ಮಾಪಕ ಉದಯ್ ಮೆಹ್ತಾ ಬಂಡವಾಳ ಹೂಡಿದ್ದ 'ಕೃಷ್ಣ-ರುಕ್ಕು' ಸಿನಿಮಾ ರೀಮೇಕ್ ಆದರೂ ಚಿತ್ರದ ಮೊದಲ ದಿನದ ಮೊದಲ ಶೋ ಮಾತ್ರ ಎಲ್ಲಾ ಕಡೆ ಹೌಸ್ ಫುಲ್ ಆಗಿದ್ದಂತೂ ಸತ್ಯ.

English summary
Kannada Actor Ajay Rao reveals the matter of 'Krishna-Rukku' Remake. Kannada Actor Ajay Rao, Kannada Actress Amoolya in the lead role. The movie is directed by Anil Kumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada