ಮೆಂಟಲ್ ಮಂಜ ಖ್ಯಾತಿಯ ನಟ ಅರ್ಜುನ್ ಅರೆಸ್ಟ್

ಈ ಸಂಬಂಧ ಮೆಂಟಲ್ ಮಂಜ ಅಲಿಯಾಸ್ ಅರ್ಜುನ್ ಅವರ ಪತ್ನಿ ಲತಾಶ್ರೀ ದೂರು ನೀಡಿದ್ದರು. ಮೆಂಟಲ್ ಮಂಜ ಚಿತ್ರದ ಮೂಲಕ ಪರಿಚಿತನಾದ ಈತ 'ಮೂರನೆ ಕ್ಲಾಸ್ ಮಂಜ ಬಿಕಾಂ ಭಾಗ್ಯ' ಚಿತ್ರದಲ್ಲೂ ಅಭಿನಯಿಸಿದ್ದಾರೆ.
ಕನ್ನಡದಲ್ಲಿ ತಕ್ಕಮಟ್ಟಿಗೆ ತನ್ನ ಛಾಪು ಮೂಡಿಸಿದ್ದ ನಟ ಈತ. ಪ್ರೇಮ್ ನಗರ, ಜರ್ನಿ, ತಿಮ್ಮ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಸದ್ಯಕ್ಕೆ 'ಆಟೋ ಮಂಜ' ಎಂಬ ಚಿತ್ರದಲ್ಲೂ ಅಭಿನಯಿಸುತ್ತಿದ್ದು ಅದು ಇನ್ನೂ ಚಿತ್ರೀಕರಣ ಹಂತದಲ್ಲಿದೆ.
ಲತಾಶ್ರೀ ಆವರನ್ನು ಅರ್ಜುನ್ ಪ್ರೀತಿಸಿ ಮದುವೆಯಾಗಿದ್ದರು. ಈಕೆ ಅರ್ಜುನ್ ಅವರ ಸಂಬಂಧಿಕರು. ಇವರಿಬ್ಬರ ದಾಂಪತ್ಯ ಜೀವನದ ಫಲವಾಗಿ ಇವರಿಗೆ 3 ವರ್ಷದ ಮಗು ಕೂಡ ಇದೆ. ಇಬ್ಬರೂ ಅನ್ಯೋನ್ಯವಾಗಿಯೇ ಇದ್ದರು ಎನ್ನುತ್ತವೆ ಕುಟುಂಬ ಮೂಲಗಳು.
ಯಾಕೋ ಏನೋ ಕನ್ನಡ ಚಿತ್ರರಂಗದಲ್ಲಿ ನಟರು ಪತ್ನಿಗೆ ಕಿರುಕುಳ ನೀಡಿವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ. ಕೆಲದಿನಗಳ ಹಿಂದೆ ಒರಟ ಪ್ರಶಾಂತ್ ತಮ್ಮ ಪತ್ನಿ ಮೇಲೆ ಒರೊಟೊರಟಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದ. ಈತ ತನ್ನ ಪತ್ನಿಗೆ ವರದಕ್ಷಿಣೆ ಕಿರುಕುಳ ಅಲ್ಲದೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದ ಎಂಬ ಆರೋಪಗಳು ಕೇಳಿಬಂದಿದ್ದವು.
ಈಗ 'ಮೆಂಟಲ್ ಮಂಜ'ನ ಸರದಿ. ಚಿತ್ರದ ಟೈಟಲ್ ಗಳಿಗೆ ತಕ್ಕಂತೆ ಇವರ ನಡೆನುಡಿಗಳು ಇರುವುದು ನಿಜಕ್ಕೂ ಖೇದಕರ ಸಂಗತಿ. ಇಂತಹ ನಟರ ಕೆಲ ಹುಚ್ಚು ಅಭಿಮಾನಿಗಳಿಗೂ ಇವರನ್ನು ಅನುಕರಣೆ ಮಾಡಿದರೆ ಅಚ್ಚರಿಪಡಬೇಕಿಲ್ಲ. (ಏಜೆನ್ಸೀಸ್)


Click it and Unblock the Notifications











