For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಹುಟ್ಟುಹಬ್ಬಕ್ಕಿಲ್ಲ 'ಚಕ್ರವರ್ತಿ' ಮುಹೂರ್ತ!

  By Harshitha
  |

  'ಬುಲ್ ಬುಲ್', 'ಅಂಬರೀಶ', 'ಐರಾವತ' ಮತ್ತು 'ಜಗ್ಗು ದಾದಾ'...ಈ ಎಲ್ಲಾ ಚಿತ್ರಗಳು ಸೆಟ್ಟೇರಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ದಿನ. ಈ ವರ್ಷ ಕೂಡ ದರ್ಶನ್ ಜನ್ಮದಿನದಂದು (ಫೆಬ್ರವರಿ 16) 'ಚಕ್ರವರ್ತಿ' ಮುಹೂರ್ತ ಸಮಾರಂಭ ನಡೆಯಬಹುದು ಎಂದು ಎಲ್ಲರೂ ಅಂದಾಜಿಸಿದ್ದರು.

  ಆದ್ರೆ, ಈ ಬಾರಿ ಹಾಗೆ ನಡೆಯುತ್ತಿಲ್ಲ. ದರ್ಶನ್ ಹುಟ್ಟುಹಬ್ಬಕ್ಕೂ ಮುನ್ನವೇ (ಅಂದ್ರೆ ಫೆಬ್ರವರಿ ಮೊದಲ ವಾರದಲ್ಲಿ) 'ಚಕ್ರವರ್ತಿ' ಮುಹೂರ್ತ ನಡೆಯಲಿದ್ದು, ಜನ್ಮದಿನದಂದು ದರ್ಶನ್ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

  ಹಾಗಂತ ಖುದ್ದು ದರ್ಶನ್ 'ವಿರಾಟ್' ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನ ಮುಹೂರ್ತ ಕಂಡ ಎಲ್ಲಾ ಚಿತ್ರಗಳು ರೆಡಿಯಾಗಲು ತೆಗೆದುಕೊಂಡ ಸಮಯ ಒಂದು ವರ್ಷಕ್ಕೂ ಹೆಚ್ಚು. ಹೀಗಾಗಿ ಈ ಬಾರಿ ತಡಮಾಡಬಾರದು ಎಂಬ ಕಾರಣಕ್ಕೆ ಬರ್ತಡೆಗೂ ಮುನ್ನವೇ ಚಿತ್ರಕ್ಕೆ ಚಾಲನೆ ನೀಡುವ ಪ್ಲಾನ್ ಮಾಡಿದ್ದಾರಂತೆ ದರ್ಶನ್. [ದರ್ಶನ್ ಮುಂದಿನ ಸಿನಿಮಾ ಯಾವುದು ಗೊತ್ತಾ?]

  ದರ್ಶನ್ ಚಿತ್ರಗಳಿಗೆ ಸಂಭಾಷಣೆ ಬರೆಯುತ್ತಿದ್ದ ಚಿಂತನ್ ಚೊಚ್ಚಲ ಬಾರಿ 'ಚಕ್ರವರ್ತಿ' ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ದರ್ಶನ್ ರವರ 'ಸಾರಥಿ' ಚಿತ್ರಕ್ಕೆ ಬಂಡವಾಳ ಹಾಕಿದ್ದ ಸತ್ಯಪ್ರಕಾಶ್ ಈ ಚಿತ್ರದ ನಿರ್ಮಾಪಕ. 'ಚಕ್ರವರ್ತಿ' ಚಿತ್ರದ ಮುಹೂರ್ತ ದಿನಾಂಕ ನಮಗೆ ಗೊತ್ತಾದ ಕೂಡಲೆ ನಿಮಗೆ ಹೇಳ್ತೀವಿ.

  English summary
  Kannada Actor Darshan starrer 'Chakravarthi', directed by Chintan, produced by Satya Prakash will go on floors in the first week of February prior Darshan's birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X