For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ 'ಶಿಷ್ಯ' ದೀಪಕ್ ಗೆ ಕಂಕಣ ಭಾಗ್ಯ ಕೂಡಿಬಂತು..!

  By Suneetha
  |

  ಮಂಡ್ಯದ ಹುಲಿ 'ಶಿಷ್ಯ' ಖ್ಯಾತಿಯ ನಟ ದೀಪಕ್ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಇಲ್ಲಿಯವರೆಗೂ ಬ್ಯಾಚುಲರ್ ಜೀವನವನ್ನು ಹಾಯಾಗಿ ಕಳೆಯುತ್ತಿದ್ದ ನಟ ದೀಪಕ್ ಗೌಡ ಅವರು ಇದೀಗ ಒಂಟಿ ಜೀವನಕ್ಕೆ ಬಾಯ್ ಬಾಯ್ ಹೇಳುತ್ತಿದ್ದಾರೆ.

  ಹೌದು 'ಬೆಳ್ಳಿ' ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರ ಜೊತೆ ಶಿವಣ್ಣ ಅವರ ಗೆಳೆಯನಾಗಿ ಅಭಿನಯಿಸಿದ್ದ ನಟ ದೀಪಕ್ ಅವರು ಸದ್ಯದಲ್ಲೇ ನಿಖಿತಾ ಎಂಬ ಹುಡುಗಿಯನ್ನು ಮದುವೆಯಾಗಲಿದ್ದಾರೆ.

  ನಿಖಿತಾ ಅವರ ಜೊತೆ ನಟ ದೀಪಕ್ ಗೌಡ ಅವರ ನಿಶ್ಚಿತಾರ್ಥ ಗುರುವಾರ (ಡಿಸೆಂಬರ್ 3) ದಂದು ನೆರವೇರಿದೆ. ಇನ್ನೇನು ಸದ್ಯದಲ್ಲೇ ಮದುವೆ ದಿನಾಂಕವನ್ನು ನಟ ದೀಪಕ್ ಅವರು ಘೋಷಿಸಲಿದ್ದಾರೆ.

  ಅಂದಹಾಗೆ ಈ ಮದುವೆಗೆ ಎರಡು ಮನೆಯವರ ಒಪ್ಪಿಗೆಯಿದ್ದು, ಪಕ್ಕಾ ಸಂಪ್ರದಾಯಬದ್ಧವಾಗಿ, ಎಲ್ಲರ ಸಮ್ಮುಖದಲ್ಲಿ ಈ ಮದುವೆ ನೆರವೇರಲಿದೆ.

  ಅದೇನೇ ಇರಲಿ ಒಟ್ನಲ್ಲಿ ಈ ವರ್ಷ ಅನೇಕ ಸ್ಯಾಂಡಲ್ ವುಡ್ ಮಂದಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು, ನೂತನ ಜೀವನಕ್ಕೆ ಕಾಲಿಟ್ಟವರು ಕೆಲವರಾದರೆ, ಇನ್ನು ಕೆಲವರು ಹೊಸ ಜೀವನಕ್ಕೆ ಕಾಲಿಡಲು ತಯಾರಾಗಿ ನಿಂತಿದ್ದಾರೆ. (ಚಿತ್ರಕೃಪೆ : ಚಿತ್ರಲೋಕ)

  English summary
  Actor Deepak of 'Shishya' fame is one of the most eligible bachelor of the Kannada film industry and Deepak is all set to tie knot soon. Deepak will be marrying Nikitha soon and both sides have given their nod to the marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X