»   » ನಟ ಕಲ್ಯಾಣ ಕುಮಾರ್ ಪತ್ನಿ ರೇವತಿ ಕಲ್ಯಾಣ್ ಕುಮಾರ್ ಇನಿಲ್ಲ

ನಟ ಕಲ್ಯಾಣ ಕುಮಾರ್ ಪತ್ನಿ ರೇವತಿ ಕಲ್ಯಾಣ್ ಕುಮಾರ್ ಇನಿಲ್ಲ

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗ ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನ ಸಂಪಾದಿಸಿದ ಕಲಾವಿದ ಕಲ್ಯಾಣ್ ಕುಮಾರ್ ಅವರ ಹಿಂದಿನ ಶಕ್ತಿ ಪತ್ನಿ 'ರೇವತಿ ಕಲ್ಯಾಣ್ ಕುಮಾರ್' ಇಂದು(ಡಿ.24) ಸಾವನ್ನಪ್ಪಿದ್ದಾರೆ. ಚೆನ್ನೈನಲ್ಲಿ ಬೆಳಗಿನ ಜಾವ ಎರಡು ಗಂಟೆಗೆ ಹಿರಿಯ ನಟಿ ರೇವತಿ ಕಲ್ಯಾಣಕುಮಾರ್ ಇಹಲೋಕ ತ್ಯಜಿಸಿದ್ದಾರೆ.

ವಿಠಲಾಚಾರ್ಯರು ನಿರ್ಮಿಸಿದ 'ರಾಜಲಕ್ಷ್ಮಿ' ಚಿತ್ರದ ಮೂಲಕ ನಾಯಕಿಯಾಗಿ ಬೆಳ್ಳಿತೆರೆಗೆ ಪಾದಾರ್ಪಣಿ ಮಾಡಿದ್ದರು 'ರೇವತಿ ಕಲ್ಯಾಣ್ ಕುಮಾರ್'. ರೇವತಿ ಅವರ ತಾಯಿ ಸರೋಜಮ್ಮ ಕೂಡ ಕಲಾವಿದೆಯಾಗಿದ್ದರು. ಹೀಗಾಗಿ ರೇವತಿ ಅವರಿಗೂ ಚಿಕ್ಕದಿಂದಲೇ ಬಣ್ಣದ ನಂಟು ಸೆಳೆದುಕೊಂಡು ಬಂದಿತ್ತು. ಚಿತ್ರಗಳಲ್ಲಿ ಅಭಿನಯಿಸುವುದರ ಜೊತೆಗೆ 'ಮನೆಗೆ ಬಂದ ಮಹಾಲಕ್ಷ್ಮಿ' ಚಿತ್ರವನ್ನ 1959ರಲ್ಲಿ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕಿಯಾಗಿಯೂ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದರು 'ರೇವತಿ ಕಲ್ಯಾಣ್ ಕುಮಾರ್'.

Kannada actor Kalyan Kumar's wife Revathi Kalyan Kumar passed away

ಕಲ್ಯಾಣ್ ಕುಮಾರ್ ಅವರನ್ನ ವಿವಾಹವಾದ ನಂತದ ಅವರ ವೃತ್ತಿಜೀವನಕ್ಕೆ ಬೆಂಬಲವಾಗಿದ್ದರು ರೇವತಿ ಕಲ್ಯಾಣ್ ಕುಮಾರ್. ಉತ್ತಮ ಬರಹಗಾರ್ತಿಯಾಗಿದ್ದ ಗುರುತಿಸಿಕೊಂಡಿದ್ದ ರೇವತಿ, ಕಥೆ-ಕಾದಂಬರಿಗಳನ್ನೂ ಬರೆದಿದ್ದಾರೆ. 'ಎಂದೂ ನಿನ್ನವನೆ', 'ಕಲ್ಲು ಸಕ್ಕರೆ', 'ಪ್ರವಾಸಿ ಮಂದಿರ' ಚಿತ್ರಗಳನ್ನ ಪತಿಯ ಜೊತೆ ಸೇರಿ ನಿರ್ಮಾಣ ಮಾಡಿದ್ದಾರೆ.

Kannada actor Kalyan Kumar's wife Revathi Kalyan Kumar passed away

ಸಾಕಷ್ಟು ಚಿತ್ರಗಳಿಗೆ ಸಂಭಾಷಣೆಯನ್ನ ಬರೆಯುವುದ ಜೊತೆಯಲ್ಲಿ 'ಪ್ರವಾಸಿ ಮಂದಿರ'ಕ್ಕೆ ಚಿತ್ರಗೀತೆಯೊಂದನ್ನೂ ಕೂಡ ರಚಿಸಿ ಗೀತರಚನೆಯನ್ನೂ ಮಾಡಿದ್ದಾರೆ. 'ನಾಟಕ ಅಕಾಡಮಿ', 'ರಾಜ್ಯೋತ್ಸವ' ಪ್ರಶಸ್ತಿಗಳನ್ನು ಪಡಿದಿದ್ದ ರೇವತಿ ಕಲ್ಯಾಣ್ ಕುಮಾರ್ ಇಂದು ಅಪಾರ ಅಭಿಮಾನಿ ಬಳಗವನ್ನ ಬಿಟ್ಟು ಹೋಗಿದ್ದಾರೆ. ನಾಳೆ (ಡಿ.25)ಬೆಳಿಗ್ಗೆ ಚೆನ್ನೈನ ವಿಜಯ ಚಿತಾಗಾರದಲ್ಲಿ ಅಂತಿಮ ವಿಧಿಗಳು ನಡೆಯಲಿದೆ.

English summary
Kannada actor Kalyan Kumar's wife Revathi Kalyan Kumar Revathi Kalyan Kumar passed away ,Revathi Kalyan Kumar has acted in a lot of Kannada movie, Revathy Kalyan Kumar has been awarded 'Drama Academy' and 'Rajyotsava' awards.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X