»   » ಕಾಶಿನಾಥ್ ಅವರ ಡ್ರೈವಿಂಗ್ ಲೈಸೆನ್ಸ್ ಹೇಳಿದ ಸತ್ಯ

ಕಾಶಿನಾಥ್ ಅವರ ಡ್ರೈವಿಂಗ್ ಲೈಸೆನ್ಸ್ ಹೇಳಿದ ಸತ್ಯ

Posted By:
Subscribe to Filmibeat Kannada
ಕಾಶಿನಾಥ್ ಅವರ ಡ್ರೈವಿಂಗ್ ಲೈಸೆನ್ಸ್ ಹೇಳಿದ ಸತ್ಯ | Filmibeat Kannada

ಕನ್ನಡ ಚಿತ್ರರಂಗದ ದಿಗ್ಗಜ ನಿರ್ದೇಶಕ ಹಾಗೂ ನಟ ಕಾಶಿನಾಥ್ ಅವರ ಪಾರ್ಥೀವ ಶರೀರ ಪಂಚಭೂತಗಳಲ್ಲಿ ಲೀನವಾಗಿದೆ. ಕುಟುಂಬದ ಸದಸ್ಯರು ಹಾಗೂ ಚಿತ್ರರಂಗವನ್ನ ಅಗಲಿರುವ 'ಅಪರೂಪದ ಅತಿಥಿ'ಯ ಜೀವನ ವಿಶೇಷವಾಗಿತ್ತು.

ಅಂದ್ಹಾಗೆ, ಕಾಶಿನಾಥ್ ಅವರು ಎಲ್ಲಿಯೂ ತಮ್ಮ ವಯಸ್ಸನ್ನ ಹೇಳುತ್ತಿರಲಿಲ್ಲ, ಮತ್ತು ಅವರ ಹುಟ್ಟುಹಬ್ಬದ ದಿನಾಂಕವೂ ಯಾರಿಗೂ ಗೊತ್ತಿರಲಿಲ್ಲ. ಇದನ್ನ ಗೌಪ್ಯವಾಗಿಯೇ ಇಟ್ಟಿದ್ದರು. ಅವರ ನಿಧನದ ನಂತರ ಅವರ ವಯಸ್ಸಿನ ಬಗ್ಗೆ ಚರ್ಚೆಯಾಗುತ್ತಿದೆ. 65, 66, 67 ವಯಸ್ಸು ಎಂದು ಹೇಳುತ್ತಿದ್ದಾರೆ. ಆದ್ರೆ, ಯಾವುದೇ ದಾಖಲೆಗಳಿರಲಿಲ್ಲ.

ಪಂಚಭೂತಗಳಲ್ಲಿ ಲೀನರಾದ 'ಮನ್ಮಥ ರಾಜ' ಕಾಶಿನಾಥ್

ಇದೀಗ, ಕಾಶಿನಾಥ್ ಅವರ ಡ್ರೈವಿಂಗ್ ಲೈಸೆನ್ಸ್ ವೈರಲ್ ಆಗಿದ್ದು, ಇದರಲ್ಲಿ ಕಾಶಿನಾಥ್ ಅವರ ಜನ್ಮದಿನಾಂಕ ಮತ್ತು ವಯಸ್ಸಿನ ಬಗ್ಗೆ ನಿಖರವಾದ ಮಾಹಿತಿ ಸಿಕ್ಕಿದೆ. ಮುಂದೆ ಓದಿ....

ಇದೇ ನೋಡಿ ಕಾಶಿನಾಥ್ DL

ಕಾಶಿನಾಥ್ ಅವರ ನಿಧನದ ನಂತರ ಅವರ ಡ್ರೈವಿಂಗ್ ಲೈಸೆನ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ಕಾಶಿನಾಥ್ ವಯಸ್ಸು ಎಷ್ಟು.? ಯಾರಿಗೂ ಗೊತ್ತಾಗಲೇ ಇಲ್ಲ.!

DL ನಲ್ಲಿರುವ ಮಾಹಿತಿ

ಹೆಸರು; ಕಾಶಿನಾಥ್ s/o ವಾಸುದೇವ ರಾವ್ ಜಿ
DL NO: KA05 19770000960
VALID Till: 26/04/2022
Blood Group: ಹಾಕಿಲ್ಲ
ಜನ್ಮಾದಿನಾಂಕ: 08/05/1951
ವಿಳಾಸ: #15, 7ನೇ ಮೇನ್, 27ನೇ ಕ್ರಾಸ್, 4ನೇ ಹಂತ, ಜಯನಗರ, ಬೆಂಗಳೂರು 560011

ಬಯಲಾಯ್ತು ವಯಸ್ಸಿನ ಗುಟ್ಟು

ಈ ದಾಖಲೆಗಳ ಪ್ರಕಾರ, ಕಾಶಿನಾಥ್ ಅವರು ಮೋಟರ್ ಬೈಕ್ ಮತ್ತು ಕಾರು ಚಾಲನೆ ಮಾಡುತ್ತಿದ್ದರು. ಹಾಗೂ 2018ನೇ ಜನವರಿ 18ನೇ ತಾರೀಖಿಗೆ, ಅವರ ವಯಸ್ಸು 66 ವರ್ಷ 8 ತಿಂಗಳು ಆಗಿತ್ತು. ಮೇ 4, 1951 ಅವರ ಜನ್ಮದಿನಾಂಕ.

ಪ್ರತಿಭೆಯ 'ಕಾಶಿ' ಗರಡಿಯಲ್ಲಿ ಪಳಗಿದ ಕನ್ನಡ ತಾರೆಯರಿವರು

66ನೇ ವರ್ಷಕ್ಕೆ ಕೊನೆಯುಸಿರೆಳೆದ 'ಕಾಶಿ'

66 ವರ್ಷದ ಕಾಶಿನಾಥ್ ಹೃದಯಾಘಾತದಿಂದ ನಿನ್ನೆ ಬೆಂಗಳೂರಿನ ಶ್ರೀಶಂಕರ ಆಸ್ಪತ್ರೆಯಲ್ಲಿ ನಿಧನರಾದರು. ಚಾಮರಾಜಪೇಟೆಯ ಟಿ.ಆರ್ ಮಿಲ್ ನಲ್ಲಿ ಕಾಶಿನಾಥ್ ಅವರ ಅಂತ್ಯಕ್ರಿಯೆ ನೆರವೇರಿತು. ಕಾಶಿನಾಥ್ಅವರನ್ನ ಕಳೆದುಕೊಂಡ ಚಿತ್ರರಂಗ ಕಂಬನಿ ಮಿಡಿದಿತ್ತು.

ಚಿತ್ರಗಳು: ಕಾಶಿನಾಥ್ ಅವರ ಅಂತಿಮಯಾತ್ರೆಯ ಕ್ಷಣಗಳು

English summary
According to Kannada film actor Kashinath Driving licence, his age is 66 years. Kashinath was born on May 8, 1951.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada