»   » ಅಪ್ಪು ಜೊತೆ 'ದೊಡ್ಮನೆ' ಮಗನಾದ 'ಮದರಂಗಿ' ಕೃಷ್ಣ

ಅಪ್ಪು ಜೊತೆ 'ದೊಡ್ಮನೆ' ಮಗನಾದ 'ಮದರಂಗಿ' ಕೃಷ್ಣ

Posted By:
Subscribe to Filmibeat Kannada

ಕಿರುತೆರೆಯಲ್ಲಿ ಖ್ಯಾತಿ ಗಳಿಸಿದ ಕೃಷ್ಣ, ಬೆಳ್ಳಿತೆರೆ ಮೇಲೆ ಕಮಾಲ್ ಮಾಡಿದ್ದು 'ಮದರಂಗಿ' ಚಿತ್ರದ ಮೂಲಕ. ''ಡಾರ್ಲಿಂಗ್...ಡಾರ್ಲಿಂಗ್..'' ಅಂತ ಹಾಡ್ತಾ ಹರೆಯದ ಹುಡುಗಿಯರಿಗೆ ಪ್ರೀತಿಯ ಡಾರ್ಲಿಂಗ್ ಆದ ಕೃಷ್ಣ ಅಲಿಯಾಸ್ ಸುನೀಲ್ ನಾಗಪ್ಪ ಈಗ 'ದೊಡ್ಮನೆ' ಮಗನಾಗಿದ್ದಾರೆ.

ಅರ್ಥಾತ್ 'ದೊಡ್ಮನೆ ಹುಡುಗ' ಪುನೀತ್ ರಾಜ್ ಕುಮಾರ್ ಜೊತೆಗೂಡಿ 'ದೊಡ್ಮನೆ' ಮಗನಾಗಿದ್ದಾರೆ ಕೃಷ್ಣ. ಹೌದು, ಮೊದಲಿನಿಂದಲೂ ಪುನೀತ್ ರಾಜ್ ಕುಮಾರ್ ಅವರಿಗೆ ಕೃಷ್ಣ ಅತ್ಯಾಪ್ತ.


puneeth rajkumar

'ಹುಡುಗರು' ಚಿತ್ರದಲ್ಲಿ ಅಪ್ಪು ಜೊತೆ ಸಣ್ಣ ಪಾತ್ರದಲ್ಲಿ ಮಿಂಚಿದ್ದ ಕೃಷ್ಣ ಈಗ 'ದೊಡ್ಮನೆ ಹುಡುಗ' ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಗೆ ತಮ್ಮನಾಗಿ ಅಭಿನಯಿಸುತ್ತಿದ್ದಾರೆ. [ಅಣ್ಣಾವ್ರ ಲುಕ್ ನಲ್ಲಿ 'ದೊಡ್ಮನೆ ಹುಡುಗ' ಪುನೀತ್]


ಕೃಷ್ಣ ಅವರಿಗೂ 'ದೊಡ್ಮನೆ ಹುಡುಗ' ಚಿತ್ರದಲ್ಲಿ ಪ್ರಮುಖ ಪಾತ್ರ ಸಿಕ್ಕಿದೆ. ಆದರೆ ಅವರ ಪಾತ್ರದ ಬಗ್ಗೆ ಚಿತ್ರತಂಡ ಹೆಚ್ಚು ಗುಟ್ಟು ಬಿಟ್ಟು ಕೊಟ್ಟಿಲ್ಲ.


puneeth rajkumar

ದುನಿಯಾ ಸೂರಿ ನಿರ್ದೇಶಿಸುತ್ತಿರುವ ಚಿತ್ರ 'ದೊಡ್ಮನೆ ಹುಡುಗ'. ರಾಧಿಕಾ ಪಂಡಿತ್, ಭಾರತಿ ವಿಷ್ಣುವರ್ಧನ್, ಅಂಬರೀಷ್, ಸುಮಲತಾ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಇವರೆಲ್ಲರ ಜೊತೆ ನಟಿಸುತ್ತಿರುವುದು ಕೃಷ್ಣ ಅವರಿಗೆ ಖುಷಿ ತಂದಿದೆ. [ದೊಡ್ಮನೆ ಹುಡುಗ ಚಿತ್ರದಲ್ಲಿ ಸುಮಲತಾ-ಅಂಬಿ ಜೋಡಿ]


'ದೊಡ್ಮನೆ ಹುಡುಗ' ಜೊತೆಗೆ 'ಮುಂಬೈ', 'ಚಿನ್ನ ಚಿನ್ನ ಆಸೆ' ಮತ್ತು 'ಚಾರ್ಲಿ' ಚಿತ್ರಗಳಲ್ಲೂ ಕೃಷ್ಣ ಬಿಜಿಯಾಗಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Kannada Actor Krishna of 'Madarangi' fame is roped in to play Puneeth Rajkumar's brother in Kannada Movie 'Dodmane Huduga'. Duniya Suri is directing this film, which features Radhika Pandit, Ambareesh, Sumalatha, Bharathi Vishnuvardhan in lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada