»   » ಸೆನ್ಸಾರ್ ಅಂಗಳದಲ್ಲಿ ಪಾಸ್ ಆದ 'ನಮಕ್ ಹರಾಮ್'

ಸೆನ್ಸಾರ್ ಅಂಗಳದಲ್ಲಿ ಪಾಸ್ ಆದ 'ನಮಕ್ ಹರಾಮ್'

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಮಹೇಶ್ ಅಭಿನಯದ ಚೊಚ್ಚಲ ಸಿನಿಮಾ 'ನಮಕ್ ಹರಾಮ್'. ರೌಡಿಸಂ ಬ್ಯಾಕ್ ಗ್ರೌಂಡ್ ಹೊಂದಿರುವ 'ನಮಕ್ ಹರಾಮ್' ಚಿತ್ರಕ್ಕೆ 'A' ಸರ್ಟಿಫಿಕೇಟ್ ಸಿಕ್ಕಿದೆ.

ನಿಹಾಲ್ ಮೂವೀಸ್ ಲಾಂಛನದಲ್ಲಿ ಗಂಗಾಧರ್, ಶಂಕರ್ ರಾಜು ಮತ್ತು ಆನಂದ್ ನಿರ್ಮಾಣದ 'ನಮಕ್ ಹರಾಮ್' ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯಾವುದೇ ಕಟ್ ಇಲ್ಲದೆ, ಎರಡು ಕಡೆ ಮ್ಯೂಟ್ ಮಾಡಿ 'A' ಸರ್ಟಿಫಿಕೇಟ್ ನೀಡಿದೆ.


namak haram

ನಾಗರಾಜ್ ಪೀಣ್ಯ ನಿರ್ದೇಶನದ 'ನಮಕ್ ಹರಾಮ್' ಸಿನಿಮಾ ಈಗಾಗಲೇ ಹರಿಕಥೆ ಹಾಡಿನಿಂದ ಸಖತ್ ಫೇಮಸ್ ಆಗಿದೆ. ಮಳವಳ್ಳಿ ಸಾಯಿ ಕೃಷ್ಣ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಸತೀಶ್ ಆರ್ಯನ್ ಸಂಗೀತ ನೀಡಿದ್ದಾರೆ. [ಗಣೇಶ್ ತಮ್ಮ ಮಹೇಶ್ ನಾಪತ್ತೆಯಾಗಿದ್ದಾರೆಯೇ?]


ಮೊದಲ ಬಾರಿಗೆ ರೇಡಿಯೋ ಜಾಕಿ ರ್ಯಾಪಿಡ್ ರಶ್ಮಿ ನಾಯಕಿಯಾಗಿ ಅಭಿನಯಿಸಿರುವ ಸಿನಿಮಾ ಇದು. ಗೌರೀಶ್ ಅಕ್ಕಿ, ಯತಿರಾಜ್ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿದ್ದಾರೆ.


ಲಾಂಗು-ಮಚ್ಚು ತಾಂಡವವಾಡಿರುವ 'ನಮಕ್ ಹರಾಮ್' ಚಿತ್ರಕ್ಕೆ 'A' ಸರ್ಟಿಫಿಕೇಟ್ ಸಿಕ್ಕಿದೆ ಅಂದ್ರೆ, ಚಿತ್ರದಲ್ಲಿ ರಕ್ತಪಾತ ಹೆಚ್ಚಿದೆ ಅಂತರ್ಥ. ಅದನ್ನ ನೋಡೋಕೆ ನೀವು ತಯಾರಿದ್ರೆ, ಸಿನಿಮಾ ಬಿಡುಗಡೆ ಆಗುವವರೆಗೂ ಕೊಂಚ ಕಾಯಿರಿ.

English summary
Kannada Actor Ganesh brother Mahesh starrer Kannada Movie 'Namak Haram' gets 'A' Certificate from the Censor Board. Nagaraj Peenya has directed this movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada