For Quick Alerts
  ALLOW NOTIFICATIONS  
  For Daily Alerts

  'ರಾಗ' ಚಿತ್ರ ಎತ್ತಂಗಡಿ: ನಟ-ನಿರ್ಮಾಪಕ ಮಿತ್ರ ಆಸ್ಪತ್ರೆಗೆ ದಾಖಲು!

  By Bharath Kumar
  |

  ಕಳೆದ ವಾರವಷ್ಟೇ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ 'ರಾಗ' ಚಿತ್ರವನ್ನ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಎತ್ತಂಗಡಿ ಮಾಡುತ್ತಿರುವ ಹಿನ್ನಲೆ ನಟ, ನಿರ್ಮಾಪಕ ಮಿತ್ರ ಅವರಿಗೆ ಆಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

  'ರಾಗ' ಚಿತ್ರವನ್ನ ಚಿತ್ರಮಂದಿರದಿಂದ ತೆಗೆಯುತ್ತಿರುವ ಸುದ್ದಿಯನ್ನ ಕೇಳಿದ ಮಿತ್ರ ಅವರಿಗೆ ರಕ್ತದೊತ್ತಡ ಹೆಚ್ಚಾಗಿ ಆಘಾತಕ್ಕೊಳಗಾದರು. ತಕ್ಷಣ ಅವರನ್ನ ನಾಗದೇವನಹಳ್ಳಿಯ ಶಿವಶಕ್ತಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸದ್ಯ, ಮಿತ್ರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ತುಂಬಾ ಬೇಸರ ವ್ಯಕ್ತಪಡಿಸುತ್ತಿದ್ದಾರೆ.[ವಿಮರ್ಶೆ: ಭಾವನೆಯಲ್ಲಿ ಮುಳುಗಿಸುವ ಪ್ರೇಮ'ರಾಗ' ]

  ಇನ್ನು ಈ ಕುರಿತು 'ರಾಗ' ಚಿತ್ರದ ನಿರ್ದೇಶಕ ಪಿ.ಸಿ ಶೇಖರ್ ವಿಡಿಯೋವೊಂದನ್ನ ಮಾಡಿ ಫೇಸ್ ಬುಕ್ ನಲ್ಲಿ ತಮ್ಮ ನೋವನ್ನ ಹೊರಹಾಕಿದ್ದಾರೆ. ಸುಮಾರು 65 ಚಿತ್ರಮಂದಿಗಳಲ್ಲಿ 'ರಾಗ' ಸಿನಿಮಾ ರಿಲೀಸ್ ಆಗಿತ್ತು. ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಆದ್ರೆ, ಒಂದೇ ವಾರದಲ್ಲಿ ಎಲ್ಲ ಚಿತ್ರಮಂದಿರಗಳಲ್ಲೂ ಸಿನಿಮಾವನ್ನ ತೆಗೆಯುತ್ತಿದ್ದಾರೆ ಎಂದು ತಮ್ಮ ಅಸಹಾಯಕತೆಯನ್ನ ವ್ಯಕ್ತಪಡಿಸಿದ್ದಾರೆ.[ಕಲಾತ್ಮಕತೆಯಲ್ಲಿ ಅರಳಿದ ಪ್ರೇಮ'ರಾಗ'ಕ್ಕೆ ವಿಮರ್ಶಕರ ಅಭಿಪ್ರಾಯ..]

  ಈ ವಾರ ದೇಶಾದ್ಯಂತ ತೆಲುಗು ಚಿತ್ರ 'ಬಾಹುಬಲಿ' ರಿಲೀಸ್ ಆಗುತ್ತಿದೆ. ಹೀಗಾಗಿ, ಕರ್ನಾಟಕದಲ್ಲಿ 'ಬಾಹುಬಲಿ' ಚಿತ್ರಕ್ಕೆ ಚಿತ್ರಮಂದಿರವನ್ನ ನೀಡಲು ಕನ್ನಡ ಚಿತ್ರಗಳನ್ನ ತೆಗೆಯಲಾಗುತ್ತಿದೆ.

  English summary
  Kannada Actor and Producer Mithra joins Hospital Becuse of High BP. Mithra Gets Depression for 'Raaga' Movie Show Cancel all Over Karnataka From This week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X