For Quick Alerts
  ALLOW NOTIFICATIONS  
  For Daily Alerts

  ನಾರಾಯಣ್ ಪುತ್ರನಿಗೆ ಲಾಟರಿ ಹೊಡಿತು : ಡಿ ಬಾಸ್ ಚಿತ್ರದಲ್ಲಿ ಪಂಕಜ್!

  By Naveen
  |
  ದರ್ಶನ್ ಒಡೆಯ ಸಿನಿಮಾದಲ್ಲಿ ತಮ್ಮಂದಿರ ಪಾತ್ರ ಗಿಟ್ಟಿಸಿಕೊಂಡ್ರು ಇವರು..! | Filmibeat Kannada

  ನಿರ್ದೇಶಕ ಎಸ್ ನಾರಾಯಣ್ ಅನೇಕ ಸ್ಟಾರ್ ನಟರ ಜೊತೆಗೆ ಕೆಲಸ ಮಾಡಿದ್ದಾರೆ. ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಅದೇ ರೀತಿ ನಾರಾಯಣ್ ಬಳಿಕ ಅವರ ಪರಂಪರೆಯನ್ನು ಮುಂದುವರೆಸಲು ಬಂದವರು ಅವರ ಮಗ ಪಂಕಜ್.

  ಪಂಕಜ್ ಈಗಾಗಲೇ ನಾಯಕನಾಗಿ ಕೆಲವು ಸಿನಿಮಾ ಮಾಡಿದ್ದಾರೆ. ಆಗಿದ್ದರೂ, ಪಂಕಜ್ ಗೆ ಈವರೆಗೆ ದೊಡ್ಡ ಸಕ್ಸಸ್ ಸಿಕ್ಕಿಲ್ಲ. ಅದೇ ಕಾರಣಕ್ಕೋ ಏನೋ ಅವರ ಯಾವುದೇ ಸಿನಿಮಾಗಳು ಇತ್ತೀಚಿಗೆ ಬಿಡುಗಡೆಯಾಗಿಲ್ಲ. ಹೀಗಿದ್ದ ಪಂಕಜ್ ಪಾಲಿಗೆ ಈಗ ಅದೃಷ್ಟ ಬಂದಿದೆ.

  'ಒಡೆಯ'ನಾದ ದರ್ಶನ್ ಗೆ ಬಲ ನೀಡಿದ ಅಂಬಿ 'ಒಡೆಯ'ನಾದ ದರ್ಶನ್ ಗೆ ಬಲ ನೀಡಿದ ಅಂಬಿ

  ನಟ ದರ್ಶನ್ ಅವರ ಸಿನಿಮಾದಲ್ಲಿ ಪಂಕಜ್ ನಟಿಸುತ್ತಿದ್ದಾರೆ. ಅದ್ಯಾವ ಸಿನಿಮಾ ಎನ್ನುವ ವಿವರ ಮುಂದಿದೆ ಓದಿ...

  'ಒಡೆಯ' ಸಿನಿಮಾದಲ್ಲಿ ನಟನೆ

  'ಒಡೆಯ' ಸಿನಿಮಾದಲ್ಲಿ ನಟನೆ

  ಎಸ್ ನಾರಾಯಣ್ ಪುತ್ರನಿಗೆ ಈಗ ದೊಡ್ಡ ಅವಕಾಶ ಸಿಕ್ಕಿದೆ ದರ್ಶನ್ ನಟನೆಯ 'ಒಡೆಯ' ಸಿನಿಮಾದಲ್ಲಿ ಪಂಕಜ್ ನಟಿಸುತ್ತಿದ್ದಾರೆ. ಡಿ ಬಾಸ್ ಅವರ ಬಹು ನಿರೀಕ್ಷಿತ ಸಿನಿಮಾ ಇದಾಗಿದ್ದು, ಇದರಲ್ಲಿ ಪಂಕಜ್ ಕಾಣಿಸಿಕೊಳ್ಳುವ ಅವಕಾಶ ಪಡೆದಿದ್ದಾರೆ.

  ತಮ್ಮನ ಪಾತ್ರ

  ತಮ್ಮನ ಪಾತ್ರ

  ವಿಶೇಷ ಅಂದರೆ, ದರ್ಶನ್ ಅವರ ತಮ್ಮನ ಪಾತ್ರದಲ್ಲಿ ಪಂಕಜ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ದರ್ಶನ್ ಅವರಿಗೆ ನಾಲ್ಕು ಜನ ಸಹೋದರರು ಇರುತ್ತಾರೆ. ಇವರಲ್ಲಿ ಒಬ್ಬರಾಗಿ ಪಂಕಜ್ ಕಾಣಿಸಿಕೊಳ್ಳುತ್ತಿದ್ದಾರೆ. 'ಒಡೆಯ' ತಮಿಳಿನ 'ಮೀರಂ' ಸಿನಿಮಾದ ರಿಮೇಕ್ ಆಗಿದೆ.

  ಮತ್ತೊಂದು ಮಹತ್ವದ ಪಾತ್ರದಲ್ಲಿ ಡಿ ಬಾಸ್ : ಭಗತ್ ಸಿಂಗ್ ಆದ ದರ್ಶನ್! ಮತ್ತೊಂದು ಮಹತ್ವದ ಪಾತ್ರದಲ್ಲಿ ಡಿ ಬಾಸ್ : ಭಗತ್ ಸಿಂಗ್ ಆದ ದರ್ಶನ್!

  ಉಳಿದ ತಮ್ಮಂದಿರು

  ಉಳಿದ ತಮ್ಮಂದಿರು

  ಪಂಕಜ್ ರನ್ನು ಹೊರತು ಪಡಿಸಿ ಯಶಸ್, ನಿರಂಜನ್ ಹಾಗೂ ಸಮರ್ಥ್ ಸಿನಿಮಾದಲ್ಲಿ ದರ್ಶನ್ ಸಹೋದರರಾಗಿದ್ದಾರೆ. ನಟ ಯಶಸ್ ಸೂರ್ಯ ದರ್ಶನ್ ಆಪ್ತರಾಗಿದ್ದು, 'ಕುರುಕ್ಷೇತ್ರ' ಚಿತ್ರದಲ್ಲಿ ಸಹ ಅವರ ಜೊತೆಗೆ ನಟಿಸಿದ್ದಾರೆ. ಸಮರ್ಥ್ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ತಮ್ಮನ ಮಗ.

  ನಾಯಕಿ ಆಯ್ಕೆ ಆಗಿಲ್ಲ

  ನಾಯಕಿ ಆಯ್ಕೆ ಆಗಿಲ್ಲ

  'ಒಡೆಯ' ಸಿನಿಮಾದಲ್ಲಿ ದರ್ಶನ್ ಜೋಡಿ ಯಾರು ಎಂಬ ನಿರೀಕ್ಷೆ ಇದೆ. ಆದರೆ, ಅದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಸಿನಿಮಾದ ಪಾತ್ರಕ್ಕೆ ತಕ್ಕಂತೆ ಇರುವ ನಾಯಕಿಯನ್ನು ಸದ್ಯ ಚಿತ್ರತಂಡ ಹುಡುಕುತ್ತಿದೆ. ತಮಿಳಿನಲ್ಲಿ ಈ ಪಾತ್ರವನ್ನು ತಮನ್ನಾ ನಿರ್ವಹಿಸಿದ್ದರು.

  ಸಪ್ಟೆಂಬರ್ 10 ರಿಂದ ಶೂಟಿಂಗ್

  ಸಪ್ಟೆಂಬರ್ 10 ರಿಂದ ಶೂಟಿಂಗ್

  ಈಗಾಗಲೇ 'ಒಡೆಯ' ಸಿನಿಮಾ ಅದ್ದೂರಿಯಾಗಿ ಲಾಂಚ್ ಆಗಿದೆ. ಚಿತ್ರದ ಶೂಟಿಂಗ್ ಸಪ್ಟೆಂಬರ್ 10 ರಿಂದ ಪ್ರಾರಂಭ ಆಗಲಿದೆ. ಮೈಸೂರು, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.

  English summary
  Director S Narayan son, kannada actor Pankaj playing Challenging Star Darshan's brother role in 'Odeya' kannada movie. The movie is directed by MD Sridhar and producing by Sandesh Nagaraj.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X