For Quick Alerts
  ALLOW NOTIFICATIONS  
  For Daily Alerts

  'ದೊಡ್ಮನೆ ಹುಡುಗ'ನಿಗೆ ನಂಜನಗೂಡಿನಲ್ಲಿ ಆಗಿದ್ದೇನು?

  By Suneetha
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ 'ದೊಡ್ಮನೆ ಹುಡುಗ' ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದ್ದು, ಈಗಾಗಲೇ ವಿದೇಶವೆಲ್ಲಾ ಸುತ್ತಿ ಶೂಟಿಂಗ್ ನಡೆಸಿರುವ ಚಿತ್ರತಂಡ ಇದೀಗ ನಂಜನಗೂಡಿನಲ್ಲಿ ಚಿತ್ರೀಕರಣ ಪೂರ್ತಿಗೊಳಿಸಿದೆ.

  ಅಂದಹಾಗೆ 'ದೊಡ್ಮನೆ ಹುಡುಗ' ಚಿತ್ರಕ್ಕೆ ನಂಜನಗೂಡಿನ ಜಾತ್ರೆ ಪ್ರಮುಖವಾದದ್ದು. ಆದ್ದರಿಂದ ನಂಜನಗೂಡಿನ ಜಾತ್ರೆಗಾಗಿಯೇ ಕಾಯುತ್ತಿದ್ದ ಚಿತ್ರತಂಡ ಕೊನೆಗೂ ನಂಜನಗೂಡಿನ ಜಾತ್ರೆಯ ಸುತ್ತ-ಮುತ್ತ ಶೂಟಿಂಗ್ ನಡೆಸಿದೆ.[ದೊಡ್ಮನೆಯಿಂದ ಅಭಿಮಾನಿಗಳಿಗೆ ಸಂತಸದ ಸುದ್ದಿ]

  ಇನ್ನು 'ನಂಜನಗೂಡಿನಲ್ಲಿ ಜಾತ್ರೆಯಲ್ಲಿ ಚಿತ್ರೀಕರಣ ನಡೆಸಲು ಪರವಾನಗಿ ಪಡೆಯುವುದು ಅಂದರೆ ಸ್ವಿರ್ಜರ್ಲ್ಯಾಂಡ್ ಗಿಂತಲೂ ಕಷ್ಟ'. ಅಲ್ಲಿ ಶೂಟಿಂಗ್ ನಡೆಸಲು ನಮಗೆ ಬಹಳ ಕಷ್ಟ ಆಯಿತು ಎನ್ನುತ್ತಾರೆ ನಿರ್ದೇಶಕ ಸೂರಿ ಅವರು.

  'ನಮ್ಮ ಚಿತ್ರಕ್ಕೆ ನಂಜನಗೂಡಿನ ಜಾತ್ರೆ ಪ್ರಮುಖವಾಗಿ ಬೇಕಾಗಿದ್ದರಿಂದ ಜಾತ್ರೆ ಸಂದರ್ಭದಲ್ಲೇ ಚಿತ್ರೀಕರಣ ನಡೆಸಿದೆವು. ಆದರೆ ರಥ ಎಳೆಯಲು ಮಾತ್ರ ನಮಗೆ ಅವಕಾಶ ನೀಡಲಿಲ್ಲ. ಅದಕ್ಕೆ ಅವರದ್ದೇ ಆದ ಜನ ಇದ್ದರು'.[ಪವರ್ ಸ್ಟಾರ್ 'ದೊಡ್ಮನೆ ಹುಡುಗ' ಪಕ್ಕಾ ಲೋಕಲ್ ಫ್ಲೇವರ್ ಕಣ್ರೀ]

  'ಆದರೆ ನಾವು ಗ್ರಾಫಿಕ್ಸ್ ನಲ್ಲಿ ರಥದ ಚಕ್ರಗಳನ್ನು ಮರು ಸೃಷ್ಟಿಸಿದೆವು. ಜೊತೆಗೆ ನಮಗೆ ಬೇಕಾದ ಕೆಲವು ಜಾತ್ರೆಯ ದೃಶ್ಯಗಳನ್ನು ಕೂಡ ಗ್ರಾಫಿಕ್ಸ್ ನಲ್ಲಿ ಸೃಷ್ಟಿ ಮಾಡಿದೆವು. ಎಲ್ಲವೂ ಬಹಳ ಅದ್ಭುತವಾಗಿ ಮೂಡಿ ಬಂದಿದೆ' ಎಂದಿದ್ದಾರೆ ನಿರ್ದೇಶಕ ದುನಿಯಾ ಸೂರಿ ಅವರು.[ಅಪ್ಪು ಅಭಿಮಾನಿಗಳಿಗೆ, ಇಲ್ಲಿದೆ ಒಂದು ಗುಡ್ ನ್ಯೂಸ್]

  ಈಗಾಗಲೇ ಚಿತ್ರದ ಡಬ್ಬಿಂಗ್ ಕಾರ್ಯಗಳು ಪೂರ್ಣಗೊಂಡಿದ್ದು, ಇನ್ನೇನು ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಚಿತ್ರದಲ್ಲಿ ನಟಿ ರಾಧಿಕಾ ಪಂಡಿತ್ ಅವರು ಪುನೀತ್ ಅವರಿಗೆ ಸಾಥ್ ನೀಡಿದ್ದಾರೆ. ಉಳಿದಂತೆ ಅಂಬರೀಶ್, ಸುಮಲತಾ ಅಂಬರೀಶ್, ರವಿಶಂಕರ್, ಭಾರತಿ ವಿಷ್ಣುವರ್ಧನ್, ರಂಗಾಯಣ ರಘು, ಕೃಷ್ಣ, ಚಿಕ್ಕಣ್ಣ ಸೇರಿದಂತೆ ಹಲವರು ಪ್ರಮುಖವಾಗಿ ಕಾಣಿಸಿಕೊಂಡಿದ್ದಾರೆ.

  English summary
  Kannada Movie 'Dodmane Huduga' shooting completed in Nanjangud. Kannada Actor Puneeth Rajkumar, Kannada Actress Radhika Pandith, Actor Ambareesh, Actress Bharathi Vishnuvardhan in the lead role. The movie is directed by Duniya Suri.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X