»   » ಟ್ವಿಟ್ಟರ್ ಗೆ ಗ್ರ್ಯಾಂಡ್ ಎಂಟ್ರಿ ಕೊಡಲಿರುವ ಪುನೀತ್

ಟ್ವಿಟ್ಟರ್ ಗೆ ಗ್ರ್ಯಾಂಡ್ ಎಂಟ್ರಿ ಕೊಡಲಿರುವ ಪುನೀತ್

Posted By:
Subscribe to Filmibeat Kannada

ಕಡೆಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮನಸ್ಸು ಬದಲಾಯಿಸಿದ್ದಾರೆ. ಅಭಿಮಾನಿಗಳೊಂದಿಗೆ ನೇರ ಸಂವಹನ ನಡೆಸುವುದರಿಂದ ಕೊಂಚ ದೂರ ಉಳಿದಿದ್ದ ಅಪ್ಪು ಈಗ ಎಲ್ಲರಂತೆ ಟ್ವಿಟ್ಟರ್ ಪಕ್ಷಿ ಆಗುವುದಕ್ಕೆ ನಿರ್ಧರಿಸಿದ್ದಾರೆ.

ಇಷ್ಟು ದಿನ ಪುನೀತ್ ರಾಜ್ ಕುಮಾರ್ ಸಾಮಾಜಿಕ ಜಾಲತಾಣಗಳಿಂದ ಕೊಂಚ ದೂರ ಉಳಿದಿದ್ದರು. ಫೇಸ್ ಬುಕ್ ನಲ್ಲಿ ಅವರ ಅಫೀಶಿಯಲ್ ಅಕೌಂಟ್ ಇದೇ ಆದರೂ, ದಿನನಿತ್ಯ ಅಪ್ಪು ಅಪ್ ಡೇಟ್ಸ್ ನೀಡುತ್ತಿರಲಿಲ್ಲ.


puneeth rajkumar

ಇತ್ತೀಚೆಗಷ್ಟೇ 'ರಣವಿಕ್ರಮ' ರಿಲೀಸ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ 'ರಣವಿಕ್ರಮ'ನ ಪರಾಕ್ರಮ ಜೋರಾಗಿರುವುದರಿಂದ ಟ್ವಿಟ್ಟರ್ ಲೋಕಕ್ಕೆ ಅಧಿಕೃತ ಎಂಟ್ರಿಕೊಡುವುದಕ್ಕೆ ಅಪ್ಪು ಸಜ್ಜಾಗುತ್ತಿದ್ದಾರೆ. [ಚಿತ್ರ ವಿಮರ್ಶೆ: 'ರಣವಿಕ್ರಮ' ಪವನ್ ಇನ್ನೊಂದು ಗೂಗ್ಲಿ]


ಸದ್ಯದಲ್ಲೇ ತಮ್ಮ ಟ್ವಿಟ್ಟರ್ ಅಕೌಂಟ್ ಓಪನ್ ಮಾಡಲಿದ್ದಾರೆ ಪುನೀತ್ ರಾಜ್ ಕುಮಾರ್. ಈ ವಿಷಯವನ್ನ ಮೊದಲು ಬಹಿರಂಗ ಪಡಿಸಿದ್ದು 'ರಣವಿಕ್ರಮ' ನಿರ್ದೇಶಕ ಪವನ್ ಒಡೆಯರ್.''ಬಹುಬೇಗ ಅಪ್ಪು ಸರ್ ಟ್ವಿಟ್ಟರ್ ಗೆ ಕಾಲಿಡುತ್ತಿದ್ದಾರೆ. ಅವರನ್ನ ಸ್ವಾಗತಿಸುವುದಕ್ಕೆ ರೆಡಿಯಾಗಿ'' ಅಂತ ಪವನ್ ಒಡೆಯರ್ ಟ್ವೀಟ್ ಮಾಡಿದ್ದರು. ಇನ್ನೂ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಅಪ್ಪು ಟ್ವೀಟ್ ಬರ್ಡ್ ಆಗುತ್ತಿರುವ ಬಗ್ಗೆ #AppuOnTwitter ಟಾಪ್ ಟ್ರೆಂಡಿಂಗ್ ನಲ್ಲಿದೆ. [ಟ್ವಿಟ್ಟರ್ ಗೆ ಅಡಿಯಿಟ್ಟ 'ಅಣ್ತಮ್ಮ' ರಾಕಿಂಗ್ ಸ್ಟಾರ್]


ಅಲ್ಲಿಗೆ, ಅಭಿಮಾನಿಗಳೆಲ್ಲರೂ ಪುನೀತ್ ರನ್ನ ಅದ್ಧೂರಿಯಾಗಿ ಟ್ವಿಟ್ಟರ್ ಗೆ ವೆಲ್ ಕಮ್ ಮಾಡುವುದಕ್ಕೆ ಅಣಿಯಾಗುತ್ತಿದ್ದಾರೆ. ಅಂದ್ಹಾಗೆ, ಅಪ್ಪು ಟ್ವಿಟ್ಟರ್ ಗೆ ಸೈನ್ ಇನ್ ಆಗುವ ಮುಹೂರ್ತ ಇನ್ನೂ ಗುಟ್ಟಾಗಿದೆ. (ಫಿಲ್ಮಿಬೀಟ್ ಕನ್ನಡ)


English summary
Kannada Actor Puneeth Rajkumar is all set to enter Twitter world shortly. #AppuOnTwitter is trending in both Facebook and Twitter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada