Just In
Don't Miss!
- News
ವಿಮಾನಯಾನ ಸಿಬ್ಬಂದಿಗೆ ಆದ್ಯತೆ ಮೇರೆಗೆ ಕೊರೊನಾ ಲಸಿಕೆ ನೀಡಲು ಮನವಿ
- Sports
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪ್ರೇಕ್ಷಕರಿಗೆ ಅವಕಾಶ ನೀಡಲು ಬಿಸಿಸಿಐ ಉತ್ಸಾಹ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Finance
ಈ 4 ಕಂಪೆನಿಗಳ ಮಾರುಕಟ್ಟೆ ಮೌಲ್ಯ ರು. 1,15,758.53 ಕೋಟಿ ಹೆಚ್ಚಳ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದವರ ವಿರುದ್ಧ ಗರಂ ಆದ ನಿರ್ದೇಶಕ ರಘುರಾಮ್
ನಟ ಮತ್ತು ನಿರ್ದೇಶಕ ರಘುರಾಮ್ ಸಖತ್ ಗರಂ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಾಯಿಯ ಬಗ್ಗೆ ಮತ್ತು ಕುಟುಂಬದವರ ಬಗ್ಗೆ ಕೆಟ್ಟದಾಗಿ ಮಾತನಾಡುವವರ ಮತ್ತು ಬಾಯಿಗೆ ಬಂದಹಾಗೆ ಕಮೆಂಟ್ ಮಾಡುವವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಖಡಕ್ ವಾರ್ನಿಂಗ್ ಮಾಡಿದ್ದಾರೆ.
"ನನಗೆ ಏನು ಬೇಕಾದರು ಹೇಳಿ. ಆದ್ರೆ ತಾಯಿಯ ಬಗ್ಗೆ ಮಾತನಾಡಬೇಡಿ, ಕುಟುಂಬದ ತಂಟೆಗೆ ಬರಬೇಡಿ, ಹೀಗೆ ಕೆಟ್ಟಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದರೆ ಕಾನೂನಿನ ಮೊರೆ ಹೋಗಬೇಕಾಗುತ್ತೆ" ಎಂದು ವಿಡಿಯೋ ಮೂಲಕ ಎಚ್ಚರಿಕೆ ನೀಜಿದ್ದಾರೆ. ಅಷ್ಟಕ್ಕು ರಘುರಾಮ್ ದಿಢೀರನೆ ಸಿಟ್ಟಾಗಲು ಕಾರಣವೇನು? ಅವರ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡುವರು ಯಾರು? ಸಾಮಾಜಿಕ ಜಾಲತಾಣದಲ್ಲಿ ರಘುರಾಮ್ ಮಾಡಿದ ಪೋಸ್ಟ್ ಯಾವುದು? ಮುಂದೆ ಓದಿ..
SSLCಯಲ್ಲಿ ಮಗಳ ಸಾಧನೆ: ನಿರ್ದೇಶಕ ರಘುರಾಮ್ ಸಂತೋಷಕ್ಕೆ ಪಾರವೇ ಇಲ್ಲ

'ಯುವರತ್ನ' ಬಗ್ಗೆ ಪೋಸ್ಟ್ ಮಾಡಿದ್ದ ರಘುರಾಮ್
ನಟ ರಘುರಾಮ್ ಇತ್ತೀಚಿಗೆ ಯುವರತ್ನ ಟೀಸರ್ ರಿಲೀಸ್ ನ ಪೋಸ್ಟರನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು. ಆ ಪೋಸ್ಟ್ ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ರೆ, ಇನ್ನು ಕೆಲವರು ತೀರ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ರಘು ವಿರುದ್ಧ ಕೆಲವರು ಕೆಟ್ಟದಾಗಿ ಕಮೆಂಟ್ ಮಾಡುವ ಜೊತೆಗೆ ಅವರ ತಾಯಿ ಹಾಗೂ ಕುಟುಂಬದವರನ್ನು ಮಧ್ಯೆ ಎಳೆದು ತರುತ್ತಿದ್ದಾರೆ.

ಬಕೆಟ್ ಹಿಡಿಯುವುದನ್ನು ಬಿಡಿ
ರಘುರಾಮ್ ಮಾಡಿದ ಪೋಸ್ಟ್ ಗೆ ಕೆಲವರು ಕೆಟ್ಟದಾಗಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. "ಮೊದಲು ಬೇರೆ ನಟರಿಗೆ ಬಕೆಟ್ ಹಿಡಿವುದನ್ನು ಬಿಡಿ, ಶಿವಣ್ಣ, ಅಪ್ಪು, ಸುದೀಪ್ ಅವರಿಗೆ ಬಕೆಟ್ ಹಿಡಿದು ಲೈಕ್ಸ್ ತಗೊಳ್ಳುವ ವ್ಯಕ್ತಿ ನೀನು". "ಟ್ಯಾಲೆಂಟ್ ಇದ್ದರೆ ಕೆಲಸ ಮಾಡಿ ಲೈಕ್ಸ್, ಹೊಗಳಿಕೆ ತಗೊಳ್ಳಿ. ಅದು ಬಿಟ್ಟು ಬರೀ ಬಕೆಟ್ ಇಡಿತಾರೆ" ಎಂದು ಕಮೆಂಟ್ ಮಾಡುತ್ತಿದ್ದಾರೆ. ಈ ಕಿತ್ತಾಟದಲ್ಲಿ ಮತ್ತೆ 'ಡಿ' ಹುಡುಗರ ಹೆಸರು ಸದ್ದು ಮಾಡುತ್ತಿದೆ.
ಪ್ರೇಮ್ ಅವರಿಗೇ ಟಾಂಗ್ ಕೊಟ್ಟ 'ಜೋಗಿ' ಯೋಗೇಶ

ರಘುರಾಮ್ ಪ್ರತಿಕ್ರಿಯೆ
"ಯುವರತ್ನ ಟೀಸರ್ ರಿಲೀಸ್ ಗೆ ಸಂಬಂಧಿಸಿದ ಹಾಗೆ ಪೋಸ್ಟ್ ಮಾಡಿದ್ದೆ. ಆದ್ರೆ ಕೆಲವು ಪ್ರೀತಿ ತೋರಿಸಿದ್ರು. ಇನ್ನೂ ಕೆಲವರು ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಬೈಯುತ್ತಿದ್ದಾರೆ. ರಘುರಾಮ್ ಗೆ ಬೈಯುವ ಎಲ್ಲಾ ಹಕ್ಕು ನಿಮಗೆ ಇದೆ. ಆದ್ರೆ ತಾಯಿ ಬಗ್ಗೆ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ. ನನಗೂ ನಿಮಗಿಂತ ಕೆಟ್ಟದಾಗಿ ಮಾತನಾಡಲು ಬರುತ್ತೆ. ಆದ್ರೆ ಅದೂ ನನ್ನ ಸಂಸ್ಕೃತಿ ಅಲ್ಲ. ರಿಪ್ಲೈ ಮಾಡಬಾರದು ಅಂತ ಇದ್ದೆ, ಆದ್ರೆ ಮತ್ತಷ್ಟು ಜಾಸ್ತಿ ಮಾಡುತ್ತಿದ್ದೀರಿ" ಎಂದು ಹೇಳಿದ್ದಾರೆ.
'ಮಿಸ್ಸಿಂಗ್ ಬಾಯ್' ಬೆನ್ನು ತಟ್ಟಿದ ಕಿಚ್ಚ, ಸಂತೋಷ್, ಕಾರ್ತಿಕ್

ಕಾನೂನಿನ ಮೊರೆ ಹೋಗುವೆ
ನನ್ನ ಮತ್ತು ನಿಮ್ಮಲ್ಲಿ ಏನೆ ನಡೀಲಿ. ಆದ್ರೆ ಇದೂ ಮನೆತನಕ, ಕುಟುಂಬದ ತನಕ ಬಂದರೆ ನಾನು ಸುಮ್ಮನಿರಲ್ಲ. ಕಾನೂನಿನ ಮೂಲಕ ಕ್ರಮ ಕೈಗೊಳ್ಳಬೇಕುಗುತ್ತೆ. ಇದರ ಪರಿಣಾಮ ನೀವೆ ಎದುರಿಸಬೇಕಾಗುತ್ತೆ. ಮನೆಯವರೆಗೂ ಬಂದು ಹೊಡಿತೀನಿ ಅಂತ ಬೆದರಿಕೆ ಹಾಕುತ್ತಿದ್ದೀರಾ. ಮನೆ ವಿಳಾಸ ಬೇಕಾದರೆ ಕೊಡುತ್ತೇನೆ, ಬನ್ನಿ ಆದ್ರೆ ಕುಟುಂಬದ ಸುದ್ದಿಗೆ ಬರಬೇಡಿ" ಎಂದು ಎಚ್ಚರಿಕೆ ನೀಡಿದ್ದಾರೆ.