For Quick Alerts
  ALLOW NOTIFICATIONS  
  For Daily Alerts

  ಸೂರ್ಯನೊಬ್ಬ, ಚಂದ್ರನೊಬ್ಬ, ರಾಜನೊಬ್ಬ : ಆಂಧ್ರಾವಾಲ ಕಂಡಂತೆ ರಾಜ್

  By Naveen
  |

  ರಾಜ್ ಕುಮಾರ್ ತನ್ನ ನಟನೆಯ ಮೂಲಕ ಬರಿ ಕನ್ನಡಿಗರನ್ನು ಮಾತ್ರವಲ್ಲ ಬೇರೆ ಭಾಷೆಯ ಸಿನಿರಸಿಕರನ್ನು ಕೂಡ ಆಕರ್ಷಣೆ ಮಾಡಿದ್ದಾರೆ. ರಾಜ್ ಕುಮಾರ್ ಬಗ್ಗೆ ಕನ್ನಡ ಜನರು ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿರುತ್ತಾರೆ. ಆದರೆ ಬೇರೆ ಭಾಷೆಯರಿಗೆ ರಾಜ್ ಕುಮಾರ್ ಬಗ್ಗೆ ಎಷ್ಟು ಗೊತ್ತು ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಅದೇ ಕುತೂಹಲ ನಮಗೂ ಇತ್ತು.

  ಅದೇ ಕಾರಣಕ್ಕೆ ರಾಜ್ ಕುಮಾರ್ ಹುಟ್ಟುಹಬ್ಬದ ದಿನವಾದ ಇಂದು ತೆಲುಗು ಹುಡುಗ ಭಾಸ್ಕರ್ ಎಂಬುವವರನ್ನು ರಾಜ್ ಕುಮಾರ್ ಬಗ್ಗೆ ಮಾತನಾಡಿಸಿದೆವು. ಅಣ್ಣಾವ್ರ ಬಗ್ಗೆ ನಿಮಗೆ ಯಾವ ಯಾವ ವಿಚಾರ ಗೊತ್ತು ಎಂದು ಕೇಳಿದೆವು. ಆಗ ಆ ಆಂಧ್ರ ಹೈದ ಈ ರೀತಿ ತನಗೆ ತಿಳಿದಿದ್ದ ರಾಜ್ ಕುಮಾರರನ್ನು ಬಣ್ಣಿಸಿದ.

  ''ರಾಜ್ ಕುಮಾರ್ ಕನ್ನಡದಲ್ಲಿ ಬಹಳ ದೊಡ್ಡ ನಟರು. ಅವರು ಐವತ್ತು ವರ್ಷ ಕನ್ನಡದಲ್ಲಿ ಸ್ಟಾರ್ ಆಗಿ ಮೆರೆದರು. ನಾನು ಅವರ ಸಿನಿಮಾವನ್ನು ನೋಡಿಲ್ಲ. ಆದರೆ ಅವರ ಹಾಡುಗಳನ್ನು ಟಿವಿಯಲ್ಲಿ ನೋಡಿದ್ದೇನೆ. ರಾಜ್ ಕುಮಾರ್ ಎನ್ ಟಿ ಆರ್ ಮತ್ತು ನಾಗೇಶ್ವರ್ ರಾವ್ ನಡುವೆ ಒಳ್ಳೆಯ ಸ್ನೇಹ ಹೊಂದಿದ್ದರು. ಅದು ಈಗಲೂ ಮುಂದುವರೆದಿದೆ. ಶಿವರಾಜ್ ಕುಮಾರ್ ಇತ್ತೀಚಿಗಷ್ಟೆ ಬಾಲಯ್ಯ ಸಿನಿಮಾದಲ್ಲಿ ನಟಿಸಿದ್ದರು.''

  ''ರಾಜ್ ಕುಮಾರ್ ಎಲ್ಲ ರೀತಿಯ ಸಿನಿಮಾ ಮಾಡುತ್ತಿದ್ದರು. ರಾಜ್ ಕುಮಾರ್ ಅವರನ್ನು ವೀರಪ್ಪನ್ ಅಪಹರಣ ಮಾಡಿದಾಗ ಆಂಧ್ರದಲ್ಲಿಯೂ ದೊಡ್ಡ ಸುದ್ದಿ ಆಗಿತ್ತು. ಜೊತೆಗೆ ರಾಜ್ ಕುಮಾರ್ ತಮ್ಮ ನೇತ್ರದಾನ ಮಾಡಿರುವುದು ನನಗೆ ಗೊತ್ತಿದೆ. ಇಡೀ ಕರ್ನಾಟಕದಲ್ಲಿ ಬಹಳ ಕಡೆ ರಾಜ್ ಕುಮಾರ್ ಅವರ ಫೋಟೋಗಳನ್ನು ನೋಡಿದೆ. ಆಗ ನನಗೆ ವೈಯಕ್ತಿಕವಾಗಿ ಅವರ ಬಗ್ಗೆ ಕುತೂಹಲ ಹುಟ್ಟಿತು. ರಾಜ್ ಕುಮಾರ್ ಒಳ್ಳೆಯ ಸಿಂಗರ್ ಕೂಡ ಆಗಿದ್ದರು.''

  English summary
  Bhaskar, who hails from Andra Pradesh explains to Filmibeat Kannada regarding his knowledge about Dr.Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X