For Quick Alerts
  ALLOW NOTIFICATIONS  
  For Daily Alerts

  ರಾಜ್ ಹುಟ್ಟುಹಬ್ಬದ ದಿನವೇ ಮದುವೆ ಆದ ಅಪ್ಪಟ್ಟ ಅಭಿಮಾನಿ ರುದ್ರ

  By Naveen
  |
  ಅಣ್ಣಾವ್ರ ಪಕ್ಕ ಅಭಿಮಾನಿ ಅಂದ್ರೆ ಇವ್ನೆ ನೋಡಿ | Filmibeat Kannada

  ಇಂದು ನಟ ಸಾರ್ವಭೌಮ, ಕನ್ನಡ ನಾಡಿನ ಹೆಮ್ಮೆಯ ಮಗ ಡಾ.ರಾಜ್ ಕುಮಾರ್ ಅವರ 90ನೇ ವರ್ಷದ ಹುಟ್ಟುಹಬ್ಬ. ಪ್ರತಿ ವರ್ಷ ಸಹ ಈ ದಿನ ಬಂತು ಅಂದರೆ ಅದು ಅಭಿಮಾನಿಗಳಿಗೆ ಹಬ್ಬ ಇದ್ದಂತೆ. ಹಾಗೆ ಹೇಳಬೇಕು ಅಂದರೆ ಅಣ್ಣವ್ರ ಹುಟ್ಟುಹಬ್ಬ ನಾಡಹಬ್ಬ ಇದ್ದಂತೆ.

  ಈ ಬಾರಿ ರಾಜ್ ಕುಮಾರ್ ಹುಟ್ಟುಹಬ್ಬದ ವಿಶೇಷವಾಗಿ ಅಣ್ಣವ್ರ ಮಕ್ಕಳು ಕಂಠೀರವ ಸ್ಟೂಡಿಯೋದಲ್ಲಿರುವ ರಾಜ್ ಸ್ಮಾರಕಕ್ಕೆ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಸಮಾಧಿಗೆ ಪೂಜೆ ಮಾಡಿದರು. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಸೇರಿದಂತೆ ಇಡೀ ಕುಟುಂಬ ಭಾಗಿಯಾಗಿತ್ತು. ನೂರಾರೂ ಅಭಿಮಾನಿಗಳು ರಾಜ್ ಸಮಾಧಿಗೆ ಕೈ ಮುಗಿದು ನಮನ ಸಲ್ಲಿಸಿದರು. ಪ್ರತಿ ವರ್ಷ ಸಹ ರಾಜ್ ಹುಟ್ಟುಹಬ್ಬದ ವಿಶೇಷವಾಗಿ ಅನ್ನದಾನ, ರಕ್ತದಾನ, ನೇತ್ರದಾನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಚುನಾವಣೆಯ ನೀತಿ ಸಂಹಿತೆ ಜಾರಿ ಇರುವುದರಿಂದ ಈ ಯಾವುದೇ ಕಾರ್ಯಕ್ರಮ ನಡೆಯುತ್ತಿಲ್ಲ.

  ಇನ್ನು ಹುಟ್ಟುಹಬ್ಬದ ವಿಶೇಷವಾಗಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಿವರಾಜ್ ಕುಮಾರ್ ''ಅಭಿಮಾನಿಗಳು ನಡೆಸುವಂತಹ ಹುಟ್ಟುಹಬ್ಬ ತುಂಬಾ ಚೆನ್ನಾಗಿ ನಡೆಸಿಕೊಂಡು ಬರುತ್ತಿದೆ.

  ಡಾ.ರಾಜ್ ಬಗ್ಗೆ ಗೊತ್ತಿರಬೇಕಾದ ವಿಚಾರ: ನೀವು ತಿಳಿಯಿರಿ, ಬೇರೆಯವರಿಗೂ ಹೇಳಿರಿ ಡಾ.ರಾಜ್ ಬಗ್ಗೆ ಗೊತ್ತಿರಬೇಕಾದ ವಿಚಾರ: ನೀವು ತಿಳಿಯಿರಿ, ಬೇರೆಯವರಿಗೂ ಹೇಳಿರಿ

  ಇವತ್ತು ಹುಟ್ಟುಹಬ್ಬದ ದಿನದಂದೇ 'ರುಸ್ತುಂ' ಸಿನಿಮಾ ಸೆಟ್ಟೇರಿದೆ. ಆಗ 'ಎಕೆ 47' ಸಿನಿಮಾ ಕೂಡ ಅಪ್ಪಾಜಿ ಬರ್ತಡೇ ದಿನ ಶುರು ಆಗಿತ್ತು. ಹಿಂದಿನ‌ ವರ್ಷ 'ಟಗರು' ಸಿನಿಮಾ ಟೀಸರ್ ಲಾಂಚ್ ಆಗಿತ್ತು. ಆ ಸಿನಿಮಾ ಈಗ 9 ನೇ ವಾರ ಓಡುತ್ತಿದೆ. ಇಂದು ಸಿನಿಮಾ ನೋಡುವವರಿಗೆ ಶೇಖಡ 50% ರಿಯಾಯಿತಿ ಸಿಗ್ತಿದೆ. ಇದೆಲ್ಲ ತುಂಬಾ ಖುಷಿ ಕೊಡುತ್ತಿದೆ.'' ಎಂದರು ಶಿವಣ್ಣ.

  ಇನ್ನೊಂದು ವಿಶೇಷ ಅಂದರೆ, ಇಂದು ರಾಜ್ ಅವರ ಪಟ್ಟ ಅಭಿಮಾನಿಯಾದ ರುದ್ರ ಎಂಬುವವರು ಇದೇ ದಿನ ಮದುವೆ ಆಗುತ್ತಿದ್ದಾರೆ. ಅಣ್ಣವ್ರ ಹುಟ್ಟುಹಬ್ಬದ ದಿನವೇ ರುದ್ರ ಮತ್ತು ಶಿಲ್ಪಾ ಜೋಡಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕುರುಬರಳ್ಳಿ ಬಳಿ ಇರುವ ರಾಜ್ ಪುತ್ಥಳಿ ಬಳಿ ಇವರ ವಿವಾಹ ನಡೆಯಲಿದೆ. ಅಂದಹಾಗೆ, ರಾಜ್ ಅಗಲಿ 12 ವರ್ಷವಾದರೂ ಸಹ ಹುಟ್ಟುಹಬ್ಬಕ್ಕೆ ಬರುವ ರಾಜ್ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆ ಆಗಿಲ್ಲ.

  English summary
  Rudra a die heart fans of kannada actor Rajkumar getting married today on the occasional of Rajkumar's 90th birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X