»   » 'ರಾಜ್-ವಿಷ್ಣು'ಗೆ ಸಲಾಂ ಹೊಡೆಯುತ್ತಿದ್ದಾರೆ ತುಂಡು ಹೈಕಳು

'ರಾಜ್-ವಿಷ್ಣು'ಗೆ ಸಲಾಂ ಹೊಡೆಯುತ್ತಿದ್ದಾರೆ ತುಂಡು ಹೈಕಳು

Posted By:
Subscribe to Filmibeat Kannada

ಕಾಮಿಡಿ ಕಿಂಗ್ ಶರಣ್ ಅವರು ತಮಿಳು ಸಿನಿಮಾ 'ರಜಿನಿ-ಮುರುಗನ್' ರೀಮೇಕ್ ಮಾಡುತ್ತಾರೆ ಎಂದು ನಾವು ನಿಮಗೆ ಈ ಮೊದಲು ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ಅಲ್ವಾ.

ಇದೀಗ ಆ ರೀಮೇಕ್ ಚಿತ್ರಕ್ಕೆ 'ರಾಜ್-ವಿಷ್ಣು' ಎಂದು ಹೆಸರಿಡಲಾಗಿದ್ದು, ಚಿತ್ರದಲ್ಲಿ ಮತ್ತೆ ಚಿಕ್ಕಣ್ಣ ಮತ್ತು ಶರಣ್ ಅವರ ದರ್ಬಾರ್ ನಡೆಯಲಿದೆ. ಈ ಮೊದಲು ಶರಣ್ ಮತ್ತು ಚಿಕ್ಕಣ್ಣ ಅವರು 'ಅಧ್ಯಕ್ಷ' ['ಅಧ್ಯಕ್ಷ' ವಿಮರ್ಶೆ: ಕಡ್ಡಾಯವಾಗಿ ನಗುವವರಿಗೆ ಮಾತ್ರ] ಚಿತ್ರದಲ್ಲಿ ಮಿಂಚಿದ್ದರು.

Kannada Actor Sharan's Raj-Vishnu in the Making

ಈಗಾಗಲೇ ತಮಿಳಿನ 'ರಜಿನಿ-ಮುರುಗನ್' ಸಿನಿಮಾ ಹಕ್ಕನ್ನು ಖರೀದಿಸಿರುವ ಸಿನಿಮಾ ನಿರ್ಮಾಪಕ ರಾಮು ಕನ್ನಡದ ನೇಟಿವಿಟಿಗೆ ಹೊಂದಿಕೊಳ್ಳುವಂತೆ ಸಿನಿಮಾ ತಯಾರು ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ಕ್ಷೇತ್ರದ ಲೆಜೆಂಡರಿ ನಟರಾದ ಡಾ.ರಾಜ್ ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಅವರ ಹೆಸರನ್ನು ಈ ಚಿತ್ರಕ್ಕೆ ಇಡಲಾಗಿದ್ದು ವಿಶೇಷ.[ಮತ್ತೆ ರಿಮೇಕ್ ಚಿತ್ರದತ್ತ ಕಾಮಿಡಿ ಕಿಂಗ್ ಶರಣ್ ಚಿತ್ತ]

Kannada Actor Sharan's Raj-Vishnu in the Making

ಪಕ್ಕಾ ಕಾಮಿಡಿ ಹಾಗೂ ಫ್ಯಾಮಿಲಿ ಎಂರ್ಟಟೈನರ್ ಸಿನಿಮಾದಲ್ಲಿ ತಮಿಳು ನಟ ಕಾರ್ತಿಕೇಯ ಮಾಡಿದ್ದ ಪಾತ್ರವನ್ನು ಶರಣ್ ಅವರು ಮಾಡಿದರೆ, ನಟ ಸೂರಿ ಮಾಡಿದ್ದ ಪಾತ್ರವನ್ನು ಚಿಕ್ಕಣ್ಣ ಅವರು ಪೋಷಿಸಲಿದ್ದಾರೆ.

ಅಂದಹಾಗೆ ಚಿತ್ರದ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಚಿತ್ರದಲ್ಲಿ ನಟ ಶರಣ್ ಅವರ ತಾತಾನ ಪಾತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ಗೌಡ್ರ ಗೆಟಪ್ ನಲ್ಲಿ ಜಬರ್ದಸ್ತ್ ಆಗಿ ಅಭಿನಯಿಸಲಿದ್ದಾರೆ.['ನಟರಾಜ ಸರ್ವಿಸ್' ಸ್ಟೇಷನ್ ನಲ್ಲಿ ಭರ್ಜರಿ ಟಪ್ಪಾಂಗುಚ್ಚಿ, ಡಾನ್ಸ್.!]

Kannada Actor Sharan's Raj-Vishnu in the Making

ಇನ್ನು ನಟಿ ರಚಿತಾ ರಾಮ್ ಅವರ ಕಾಲ್ ಶೀಟ್ ಸಿಕ್ಕರೆ ಆಕೆಯೇ ಈ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ. ಇನ್ನುಳಿದಂತೆ ಕಾಮಿಡಿ ಕಿಂಗ್ ಶರಣ್, ಚಿಕ್ಕಣ್ಣ, ಸಾಧು ಕೋಕಿಲಾ ಹಾಗೂ ರವಿಶಂಕರ್ ಅವರು ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ಮಿಂಚಲಿದ್ದಾರೆ.[ರಕ್ತದಲ್ಲಿ ಪತ್ರ ಬರೆದ ಕಾಮಿಡಿ ಕಿಂಗ್ ಶರಣ್]

Kannada Actor Sharan's Raj-Vishnu in the Making

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರು ಚಿತ್ರದ ಹಾಡುಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಸದ್ಯಕ್ಕೆ ಶರಣ್ ಅವರು 'ಮಾರುತಿ 800' ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಅದಾದ ಕೂಡಲೇ 'ರಾಜ್-ವಿಷ್ಣು' ಶೂಟಿಂಗ್ ಆರಂಭವಾಗಲಿದೆ.

English summary
Producer and distributor Ramu, who has taken the rights of the Tamil film, Rajini Murugan has given a very interesting title, 'Raj-Vishnu', a combination of Sandalwood legends — Rajkumar and Vishnuvardhan.Actor Sharan and Chikkanna in the lead role.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada