For Quick Alerts
  ALLOW NOTIFICATIONS  
  For Daily Alerts

  ರಕ್ತದಲ್ಲಿ ಪತ್ರ ಬರೆದ ಕಾಮಿಡಿ ಕಿಂಗ್ ಶರಣ್

  By Suneetha
  |

  ಇದು ಸಿನಿಮಾ ಕಥೆಯಲ್ಲ, ಬದ್ಲಾಗಿ ನಿಜವಾಗ್ಲೂ ನಡೆದ ಘಟನೆ. ಚಂದನವನದ ಕಾಮಿಡಿ ಕಿಂಗ್ ಶರಣ್ ಅವರು ತಮ್ಮ ರಕ್ತದಲ್ಲಿ ಪತ್ರ ಬರೆದರಂತೆ. ಹೌದು ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆಯ ಹೋರಾಟದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ನಟ ಶರಣ್ ತಮ್ಮ ರಕ್ತದಲ್ಲಿ ಮನವಿ ಪತ್ರ ಬರೆದಿದ್ದಾರೆ.

  ಬೆಳಗ್ಗಿನ ಹೊತ್ತು ಸುಮಾರು 10 ಘಂಟೆಯಿಂದ ಸಂಜೆ 5 ಘಂಟೆಯವರೆಗೆ ನವಲಗುಂದದಲ್ಲಿ ಹೋರಾಟಗಾರರೊಂದಿಗೆ ಧರಣಿ ಕುಳಿತಿದ್ದ ನಟ ಶರಣ್ ಅವರು ತಾವು ಉಪವಾಸ ಸತ್ಯಾಗ್ರಹ ಕೈಗೊಂಡು, ನಂತರ ತಮ್ಮ ರಕ್ತದಲ್ಲಿ ಮನವಿ ಪತ್ರ ಬರೆದು ಅಲ್ಲಿನ ತಹಶೀಲ್ದಾರರಿಗೆ ನೀಡುವ ಮೂಲಕ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಮನವಿ ಮಾಡಿದ್ದಾರೆ.[ಕಳಸಾ-ಬಂಡೂರಿಗೆ ಸ್ಯಾಂಡಲ್ ವುಡ್ ಕಿಚ್ಚು ; ಯಾರು ಏನು ಹೇಳಿದರು?]

  ಈ ಮೊದಲು ಸ್ಯಾಂಡಲ್ ವುಡ್ ನ ಎಲ್ಲಾ ತಾರೆಯರು ಕಳಸಾ-ಬಂಡೂರಿ ಹೋರಾಟದಲ್ಲಿ ಭಾಗವಹಿಸಿದ್ದು, ನಟಿ ಪೂಜಾ ಗಾಂಧಿ ಅವರು ಈ ಯೋಜನೆಯ ಬಗ್ಗೆ ಸಾಕ್ಷ್ಯಚಿತ್ರವನ್ನು ಕೂಡ ನಿರ್ಮಾಣ ಮಾಡಿದ್ದಾರೆ.[ನರೇಂದ್ರ ಮೋದಿಗೆ ಕರ್ನಾಟಕದ ಕೂಗು ಕೇಳಿಸಲಿ: ಚಿತ್ರರಂಗ ]

  ಜೊತೆಗೆ ಕಾಮಿಡಿ ಕಿಂಗ್ ಶರಣ್ ಅವರು ಈ ಮೊದಲು ಕೂಡ ಈ ಹೋರಾಟದಲ್ಲಿ ಭಾಗವಹಿಸಿದ್ದು, ಇದೀಗ ಮತ್ತೊಮ್ಮೆ ಧರಣಿ ಕುಳಿತು, ರಕ್ತದಲ್ಲಿ ಪ್ರಧಾನಿ ಮೋದಿ ಅವರಿಗೆ ಮನವಿ ಪತ್ರ ಬರೆಯುವ ಮೂಲಕ ಅಲ್ಲಿನ ಜನರ ಬಗ್ಗೆ ತಮ್ಮ ತಳಮಳ ವ್ಯಕ್ತಪಡಿಸಿದ್ದಾರೆ.

  English summary
  Actor Sharan is going back to take part in the Kalasa-Banduri drinking water protest today. He will sit on a dharna between 10 am and 5 pm at Navalgund. After that he is writing a letter in his blood and hand it over to the Thasildar demanding implementation of the project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X