»   » ವಿಭಿನ್ನವಾಗಿ ಮೂಡಿ ಬರಲಿದೆ ಶಿವಣ್ಣನ 'ಶಿವಲಿಂಗ ಭಾಗ 2'

ವಿಭಿನ್ನವಾಗಿ ಮೂಡಿ ಬರಲಿದೆ ಶಿವಣ್ಣನ 'ಶಿವಲಿಂಗ ಭಾಗ 2'

Posted By:
Subscribe to Filmibeat Kannada

ಹಾರರ್-ಥ್ರಿಲ್ಲರ್ ಸಿನಿಮಾಗಳನ್ನು ಮಾಡುವಲ್ಲಿ ಖ್ಯಾತಿ ಪಡೆದಿರುವ ನಿರ್ದೇಶಕ ಪಿ.ವಾಸು ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆಗೂಡಿ 'ಶಿವಲಿಂಗ' ['ಶಿವಲಿಂಗ' ವಿಮರ್ಶೆ; ಪಿ.ವಾಸು ನಿರ್ದೇಶನದ ಮತ್ತೊಂದು 'ಆಪ್ತಮಿತ್ರ'] ಸಿನಿಮಾ ಮಾಡಿ ಗೆದ್ದಿದ್ದಾರೆ.

50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿರುವ 'ಶಿವಲಿಂಗ' ಸಿನಿಮಾದ ಭಾಗ 2 ಕೂಡ ತೆರೆ ಮೇಲೆ ತರಲು ನಿರ್ದೇಶಕ ಪಿ.ವಾಸು ಅವರು ಯೋಜನೆ ಹಾಕಿಕೊಂಡಿದ್ದಾರೆ. ಈ ಮೊದಲು 'ರಾಬಿನ್ ಹುಡ್' ಎಂಬ ಸಿನಿಮಾದಲ್ಲಿ ಇವರಿಬ್ಬರು ಒಂದಾಗುತ್ತಿದ್ದಾರೆ ಎಂದು ಸುದ್ದಿಯಾಗಿತ್ತು.[ಬಯಲಾಯಿತು ಶಿವಣ್ಣ & ವಾಸು ಅವರ ಮತ್ತೊಂದು ರಹಸ್ಯ]


ಇದೀಗ ಬರೀ 'ರಾಬಿನ್ ಹುಡ್' ಮಾತ್ರವಲ್ಲದೇ 'ಶಿವಲಿಂಗ 2' ಚಿತ್ರದಲ್ಲಿ ಮತ್ತೆ ಶಿವಣ್ಣ ಅವರನ್ನೇ ಹಾಕಿಕೊಂಡು ಸಿನಿಮಾ ಮಾಡುತ್ತಿದ್ದು, ಅದಕ್ಕಾಗಿ ಸ್ಕ್ರಿಪ್ಟ್ ಕೂಡ ಈಗಾಗಲೇ ತಯಾರಾಗಿದ್ದು, ನಿರ್ದೇಶಕರು ಸ್ಕ್ರೀನ್ ಪ್ಲೇ ಕೆಲಸದಲ್ಲಿ ನಿರತರಾಗಿದ್ದಾರೆ.


ಈಗಾಗಲೇ ನಿರ್ದೇಶಕ ವಾಸು ಅವರ 'ಆಪ್ತಮಿತ್ರ' ಚಿತ್ರದ ನಂತರ ಅದರ ಮುಂದುವರಿದ ಭಾಗ 'ಆಪ್ತರಕ್ಷಕ' ಕೂಡ ಮುಂದುವರಿದಿತ್ತು. ಅದು ಇಡೀ ಸಿನಿ ಪ್ರೇಕ್ಷಕರ ಮೆಚ್ಚುಗೆ ಗಳಿಸುವಲ್ಲಿ ಯಶಸ್ವಿಯಾಗಿತ್ತು.[ಲಂಡನ್ ಗೆ ಹಾರಿದ ಶಿವಣ್ಣ: ಪುನೀತ್, ಯಶ್ ಏನಂದ್ರು ಗೊತ್ತಾ?]


'ಶಿವಲಿಂಗ ಭಾಗ 2' ರಲ್ಲೂ ಹಳೇ ಟೀಮ್ ಮುಂದುವರಿಯುತ್ತಾ?, ನಾಯಕಿಯಾಗಿ ವೇದಿಕಾ ಅವರೇ ಮುಂದುವರೆಯಲಿದ್ದಾರಾ? ಅನ್ನೋದು ಇನ್ನೂ ಸರಿಯಾಗಿ ನಿರ್ಧಾರವಾಗಿಲ್ಲ. ಆದರೆ ವಾಸು ಅವರ ಈ ಪ್ಲ್ಯಾನ್ ಗೆ ಶಿವಣ್ಣ ಏನಂತಾರೇ ಅನ್ನೋದನ್ನ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...


ಶಿವಣ್ಣ ಜೊತೆ ಉತ್ತಮ ಅನುಬಂಧ

'ತಮಿಳು ನಟ ಪ್ರಭು ಗಣೇಶ್ ಅವರ ಜೊತೆ 11 ಸಿನಿಮಾ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೊತೆ 5, ಸತ್ಯರಾಜ್ ಅವರ ಜೊತೆ 10 ಹಾಗೂ ಡಾ.ವಿಷ್ಣುವರ್ಧನ್ ಅವರ ಜೊತೆ 7 ಸಿನಿಮಾಗಳನ್ನು ಮಾಡಿದ್ದೇನೆ. ಒಳ್ಳೆಯ ಗೆಳೆತನ ಇದ್ದುದ್ದರಿಂದ ಇದು ಸಾಧ್ಯವಾಯಿತು. ಇದೀಗ ಅಂತಹದೇ ಭಾವನೆ ಶಿವಣ್ಣ ಅವರ ಜೊತೆ ಬೆಳೆದಿದೆ' ಎನ್ನುತ್ತಾರೆ ನಿರ್ದೇಶಕ ಪಿ.ವಾಸು ಅವರು.[ಅಮೆರಿಕದಲ್ಲೂ 'ಶಿವಲಿಂಗ' ಅಬ್ಬರ ಶುರು ಆಯ್ತು]


ಶಿವಣ್ಣ ಅವರ ಹಾರ್ಡ್ ವರ್ಕ್ ಶ್ಲಾಘನೀಯ

ಕೇವಲ 'ಶಿವಲಿಂಗ' ಒಂದು ಸಿನಿಮಾದಿಂದ ನಮ್ಮಿಬ್ಬರಲ್ಲಿ ಒಳ್ಳೆ ಅನುಬಂಧ ಏರ್ಪಟ್ಟಿದೆ. ಸಿನಿಮಾಗಳ ಬಗ್ಗೆ ಹಾಗೂ ಅದರ ಕೆಲಸಗಳ ಬಗ್ಗೆ ಶಿವಣ್ಣ ಅವರಿಗಿರುವ ಬದ್ಧತೆ ಬಹಳ ಶ್ಲಾಘನೀಯವಾಗಿದೆ. ಎಂದು ಸೆಂಚುರಿ ಸ್ಟಾರ್ ಶಿವಣ್ಣ ಅವರನ್ನು ಮನಸಾರೆ ಕೊಂಡಾಡುತ್ತಾರೆ ವಾಸು ಅವರು.['ಶಿವಲಿಂಗ' ಚಿತ್ರದ ಬಗ್ಗೆ ಏನೇನು ಮಾತುಗಳು ಕೇಳಿಬರುತ್ತಿವೆ ಗೊತ್ತೇ?]


ಖುಷ್ ಆದ ಶಿವಣ್ಣ

'ಶಿವಣ್ಣ ಅವರಿಗೆ ಚಿತ್ರದ ಭಾಗ 2ರ ಕಥೆ ಹೇಳಿದ್ದೇನೆ. ಅವರೂ ಬಹಳ ಸಂತೋಷದಿಂದ ಒಪ್ಪಿಕೊಂಡಿದ್ದು ಮಾತ್ರವಲ್ಲದೇ, ಈ ಐಡಿಯಾ ಹೊಸದು ಎಂದಿದ್ದಾರೆ. ಭಾಗ 2 ರಲ್ಲಿ ಶಿವಣ್ಣ ಅವರ ಪಾತ್ರ ತುಂಬಾ ಸವಾಲನ್ನು ತಂದೊಡ್ಡುತ್ತದೆ. ಎಂದು ವಾಸು ಹೇಳಿದ್ದಾರೆ.


ಮತ್ತೆ ಶಿವಣ್ಣ 'ಸಿಐಡಿ'

'ಶಿವಲಿಂಗ ಭಾಗ 2'ರಲ್ಲೂ ಸೆಂಚುರಿ ಸ್ಟಾರ್ ಶಿವಣ್ಣ ಅವರು ಸಿಐಡಿ ಪಾತ್ರದಲ್ಲಿ ಮುಂದುವರಿಯಲಿದ್ದಾರೆ. ವೇದಿಕಾ ಇರುತ್ತಾರಾ? ಅನ್ನೋದು ಇನ್ನೂ ನಿರ್ಧಾರವಾಗಬೇಕಿದೆ.


ತಮಿಳು-ತೆಲುಗಿಗೆ 'ಶಿವಲಿಂಗ'

'ಶಿವಲಿಂಗ' ಸಿನಿಮಾ ತಮಿಳು-ತೆಲುಗಿಗೂ ರಿಮೇಕ್ ಆಗುತ್ತಿದ್ದು, ಅಲ್ಲಿ ತಮಿಳು ನಟ ರಾಘವ ಲಾರೆನ್ಸ್ ಅವರು ಶಿವಣ್ಣ ಅವರ ಪಾತ್ರವನ್ನು ನಿಭಾಯಿಸಲಿದ್ದಾರೆ. ತಮಿಳು ತೆಲುಗಿನಲ್ಲೂ ವಾಸು ಅವರೇ ನಿರ್ದೇಶನ ಮಾಡಲಿದ್ದು, ಜೂನ್ ತಿಂಗಳಿನಿಂದ ಶೂಟಿಂಗ್ ಆರಂಭವಾಗಲಿದೆ.[ತಮಿಳು ನಟ ರಾಘವ ಲಾರೆನ್ಸ್ 'ಶಿವಲಿಂಗ' ರೀಮೇಕ್ ಮಾಡ್ತಾರಾ?]


ಸಾಧು ಕೋಕಿಲಾ ಪಾತ್ರದಲ್ಲಿ ಯಾರು?

ಕನ್ನಡದಲ್ಲಿ ಸಾಧು ಕೋಕಿಲಾ ಮಾಡಿದ್ದ ಪಾತ್ರವನ್ನು ತಮಿಳಿನಲ್ಲಿ ಖ್ಯಾತ ಹಾಸ್ಯನಟ ವಡಿವೇಲು ಅವರು ಮಾಡುವ ಮೂಲಕ ಮತ್ತೆ ಸಿನಿಮಾ ಕ್ಷೇತ್ರಕ್ಕೆ ಹಿಂತಿರುಗಲಿದ್ದಾರೆ. ತೆಲುಗಿನಲ್ಲಿ ಕಾಮಿಡಿ ಕಿಂಗ್ ಬ್ರಹ್ಮಾನಂದ್ ಅವರು ಮಾಡಲಿದ್ದಾರೆ.


ಸುದೀಪ್-ಪುನೀತ್ ಅವರಿಗೂ ಸಿನಿಮಾ

ಈ ನಡುವೆ ಸ್ಟಾರ್ ನಟರಾದ ಕಿಚ್ಚ ಸುದೀಪ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೂ ಸಿನಿಮಾ ಮಾಡುವ ಯೋಜನೆ ಹಾಕಿಕೊಂಡಿರುವ ನಿರ್ದೇಶಕ ವಾಸು ಅವರು ಈಗಾಗಲೇ ಅವರಿಬ್ಬರನ್ನು ಭೇಟಿ ಮಾಡಿ ಚರ್ಚಿಸಿದ್ದಾರಂತೆ. ಒಳ್ಳೆ ಕಥೆ ಸಿಕ್ಕ ತಕ್ಷಣ ಅಧೀಕೃತವಾಗಿ ಘೋಷಣೆ ಮಾಡುವುದಾಗಿ ವಾಸು ತಿಳಿಸಿದ್ದಾರೆ.


English summary
Director P Vasu and Kannada actor Shiva Rajkumar, both with a successful career spanning three decades, the friendship clicked working together in just one film, Shivalinga. And now, having built their strong foundation with solid filmmaking 'Shivalinga Part 2'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada