»   » 'ಅಪ್ಪ' ಆಗಲು ಸಿದ್ಧರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

'ಅಪ್ಪ' ಆಗಲು ಸಿದ್ಧರಾದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

Posted By:
Subscribe to Filmibeat Kannada

ನಮ್ಮ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಇಲ್ಲಿಯವರೆಗೆ ಹೀರೋ ಆಧಾರಿತ ಚಿತ್ರಗಳಲ್ಲಿ ಮಿಂಚಿ ಎಲ್ಲರ ಮನೆ-ಮನ ಗೆದ್ದು ನೆಚ್ಚಿನ ನಟ ಎನಿಸಿಕೊಂಡಿದ್ದರು.

ಇದೀಗ ತಮಿಳಿನಲ್ಲಿ ಬಿಡುಗಡೆಗೆ ತಯಾರಾಗಿ ನಿಂತಿರುವ 'ಅಪ್ಪ' ಎಂಬ ಚಿತ್ರದಲ್ಲಿ ನಟಿಸಲು ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರಿಗೆ ಆಫರ್ ಬಂದಿದ್ದು, ಶಿವಣ್ಣ ಅವರು ಕೂಡ ನಟಿಸಲು ಒಪ್ಪಿಕೊಂಡಿದ್ದಾರಂತೆ.[ಶಿವಣ್ಣ ಕಡೆಯಿಂದ ದಿಢೀರ್ ನಿರ್ಣಯ.! ಇಡೀ ಸ್ಯಾಂಡಲ್ ವುಡ್ ಗೆ ಹೆಮ್ಮೆ.!]

Kannada Actor Shiva Rajkumar ready to play Father role

ತಮಿಳು ನಟ ಕಮ್ ನಿರ್ದೇಶಕ ಸಮುದ್ರಕಣಿ ನಟಿಸಿ-ನಿರ್ದೇಶನ ಮಾಡುತ್ತಿರುವ 'ಅಪ್ಪ' ಚಿತ್ರವನ್ನು ಕನ್ನಡ, ತೆಲುಗು ಮತ್ತು ಹಿಂದಿಯಲ್ಲೂ ಮಾಡಲು ನಿರ್ಧರಿಸಿದ್ದು, ಕನ್ನಡದಲ್ಲಿ ಶಿವರಾಜ್ ಕುಮಾರ್ ಅವರಿಗೆ ನಟಿಸಲು ಸಮುದ್ರಕಣಿ ಕೇಳಿಕೊಂಡಿದ್ದಾರೆ.

ಕನ್ನಡದಲ್ಲಿ 'ತಂದೆ' ತೆಲುಗಿನಲ್ಲಿ 'ನಾನಾ' ಮತ್ತು ಹಿಂದಿಯಲ್ಲಿ 'ಪಾಪಾ' ಎಂಬ ಹೆಸರಿನಲ್ಲಿ ತೆರೆಗೆ ತರಲು ಯೋಜನೆ ಹಾಕಿಕೊಂಡಿದ್ದು, ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್ ಮತ್ತು ಹಿಂದಿಯಲ್ಲಿ ಅನಿಲ್ ಕಪೂರ್ ಅವರಿಗೆ ನಟಿಸಲು 'ಯಾರೇ ಕೂಗಾಡಲಿ' [ಪುನೀತ್ ಅಭಿನಯದ ಯಾರೇ ಕೂಗಾಡಲಿ ವಿಮರ್ಶೆ] ಖ್ಯಾತಿಯ ನಿರ್ದೇಶಕ ಆಗ್ರಹಿಸಿದ್ದಾರೆ.

Kannada Actor Shiva Rajkumar ready to play Father role

''ಅಪ್ಪ' ಚಿತ್ರ ತಂದೆ-ಮಗನ ಸಂಬಂಧದ ಜೊತೆಗೆ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆಯೂ ಚರ್ಚಿಸುತ್ತದೆ. ಅವಕಾಶ ಸಿಕ್ಕರೆ ಇದನ್ನು ಸುಮಾರು 15 ಭಾಷೆಗಳಲ್ಲಿ ಮಾಡುವ ಆಸೆ ನನಗೆ. ಸದ್ಯಕ್ಕೆ 3 ಭಾಷೆಗಳಲ್ಲಿ ಮಾಡಲು ತಯಾರಿ ಮಾಡುತ್ತಿದ್ದೇನೆ' ಎಂದಿದ್ದಾರೆ ರಾಷ್ಟ್ರಪ್ರಶಸ್ತಿ ವಿಜೇತ ನಟ ಕಮ್ ನಿರ್ದೇಶಕ ಸಮುದ್ರಕಣಿ ಅವರು.

Kannada Actor Shiva Rajkumar ready to play Father role

ಸಮುದ್ರಕಣಿ ಅವರೇ ನಟಿಸಿದ್ದ 'ಸಾತ್ತೈ' ಚಿತ್ರದ ಮುಂದಿನ ಭಾಗವಾಗಿರುವ 'ಅಪ್ಪ' ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಸುಮಾರು 3 ಲಕ್ಷ ಜನರ ವೀಕ್ಷಣೆಗೆ ಒಳಪಟ್ಟು ಉತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.['ರಥಾವರ' ಚಂದ್ರಶೇಖರ್ ರ ಜೊತೆ ಶಿವರಾಜ್ ಕುಮಾರ್ ಕಮಾಲ್]

Kannada Actor Shiva Rajkumar ready to play Father role

'ಕನ್ನಡಕ್ಕೆ ಶಿವರಾಜ್ ಕುಮಾರ್ ಅವರು ನನ್ನ ಮೊದಲ ಅದ್ಯತೆ ಎಂದಿರುವ ನಿರ್ದೇಶಕರು ಈಗಾಗಲೇ ಚಿತ್ರದ ಬಗ್ಗೆ ಶಿವಣ್ಣ ಅವರಲ್ಲಿ ಚರ್ಚಿಸಿದ್ದು, ಅವರು ಕೂಡ ಆಸಕ್ತಿ ವಹಿಸಿದ್ದಾರೆ. ಈ ಪಾತ್ರಕ್ಕೆ ಶಿವಣ್ಣರನ್ನು ಬಿಟ್ಟರೆ ನನ್ನ ಮನಸ್ಸಿಗೆ ಬೇರೆ ಯಾರು ಬರುತ್ತಿಲ್ಲ' ಎನ್ನುತ್ತಾರೆ ನಿರ್ದೇಶಕರು.

Kannada Actor Shiva Rajkumar ready to play Father role

'ಇನ್ನೇನು ಎರಡು ವಾರದಲ್ಲಿ ಶಿವಣ್ಣ ಅವರಿಗೆ 'ಅಪ್ಪ' ಸಿನಿಮಾ ತೋರಿಸಿ ಚಿತ್ರದ ಬಗ್ಗೆ ಅವರ ಅನಿಸಿಕೆ ಬೇಕು. ಆನಂತರ ಅವರು ಡೇಟ್ ಕೊಟ್ಟ ನಂತರ ಕನ್ನಡದಲ್ಲಿ ಚಿತ್ರೀಕರಣ ಆರಂಭ ಮಾಡುತ್ತೇನೆ. ಆನಂತರ ಇಡೀ ಕರ್ನಾಟಕದ ಮಕ್ಕಳೆಲ್ಲಾ ಅವರನ್ನು 'ಅಪ್ಪ' ಎಂದು ಕರೆಯುತ್ತಾರೆ' ಎಂದಿದ್ದಾರೆ ನಿರ್ದೇಶಕ ಸಮುದ್ರಕಣಿ. 'ಅಪ್ಪ' ಚಿತ್ರದ ತಮಿಳು ಟ್ರೈಲರ್ ಇಲ್ಲಿದೆ ನೋಡಿ...

    English summary
    Tamil Actor-Director Samuthirakani is working on Kannada, Telugu and Hindi versions of his Tamil film 'Appa', which he has written, directed and produced. In these films, to be titled as 'Thande' in Kannada, 'Nana' in Telugu and 'Papa' in Hindi. He hopes to feature Kannada Actor Shivarajkumar, Telugu Actor Venkatesh and Anil Kapoor in the lead.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada