For Quick Alerts
  ALLOW NOTIFICATIONS  
  For Daily Alerts

  ರಿಲೀಸ್ ಗೂ ಮುನ್ನವೇ ಶಿವಣ್ಣ ಚಿತ್ರದ ಡಬ್ಬಿಂಗ್ ರೈಟ್ಸ್ ಸೇಲ್

  By Suneetha
  |

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಮತ್ತು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಜುಗಲ್ ಬಂದಿಯಲ್ಲಿ ಮೂಡಿಬಂದಿದ್ದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಕಿಲ್ಲಿಂಗ್ ವೀರಪ್ಪನ್' ತೆಲುಗಿನಲ್ಲೂ ಭಾರಿ ಸದ್ದು ಮಾಡುತ್ತಿದೆ.

  ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಭಾಷೆಯಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾ ಟಾಲಿವುಡ್ ಕ್ಷೇತ್ರದಲ್ಲಿ ಬಹಳ ಜೋರಾಗೇ ಕಲೆಕ್ಷನ್ ಮಾಡುತ್ತಿದೆ.[ವರ್ಮಾ ಅವರ 'ವೀರಪ್ಪನ್' 10 ದಿನದಲ್ಲಿ ಮಾಡಿದ ಕಲೆಕ್ಷನ್ ಎಷ್ಟು?]

  ಇದೀಗ 'ವೀರಪ್ಪನ್' ಪ್ರಭಾವ ಶಿವಣ್ಣ ಅವರ ಮುಂದಿನ ಸಿನಿಮಾಗಳ ಮೇಲೂ ಬೀರಲಿದೆ ಎನ್ನುವ ಲೆಕ್ಕಾಚಾರ ಈಗಲೇ ಶುರುವಾದಂತಿದೆ. ಆದ್ದರಿಂದ ಸದ್ಯಕ್ಕೆ ಬಿಡುಗಡೆಗೆ ತಯಾರಾಗಿ ನಿಂತಿರುವ ಶಿವರಾಜ್ ಕುಮಾರ್ ಮತ್ತು ನಟಿ ವೇದಿಕಾ ಅಭಿನಯದ 'ಶಿವಲಿಂಗ' ಸಿನಿಮಾದ ಡಬ್ಬಿಂಗ್ ಹಕ್ಕುಗಳಿಗೆ ಭಾರಿ ಬೇಡಿಕೆ ಹೆಚ್ಚಿದೆ.

  ಈಗಾಗಲೇ ಆಂಧ್ರದ ಕೆಲವು ಚಿತ್ರ ನಿರ್ಮಾಪಕರು 'ಶಿವಲಿಂಗ' ಸಿನಿಮಾದ ಡಬ್ಬಿಂಗ್ ಹಕ್ಕುಗಳನ್ನು ಖರೀದಿ ಮಾಡಲು ಮುಂದೆ ಬಂದಿದ್ದಾರೆ. ನಿರ್ದೇಶಕ ಪಿ.ವಾಸು ಆಕ್ಷನ್-ಕಟ್ ಹೇಳಿರುವ ಈ ಸಿನಿಮಾದಲ್ಲಿ ಶಿವಣ್ಣ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.['ಶಿವಲಿಂಗ'ಕ್ಕೆ ಪೂಜೆ ಸಲ್ಲಿಸಿದ ನಂತರ 'ವೀರಪ್ಪನ್' ಬೇಟೆ ಶುರು.!]

  ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರದ ಡಬ್ಬಿಂಗ್ ಹಕ್ಕುಗಳಿಗೆ ಈ ಮಟ್ಟಿನ ಬೇಡಿಕೆ ಹೆಚ್ಚಿರುವುದರಿಂದ ನಿರ್ಮಾಪಕ ಕೆ.ಎ ಸುರೇಶ್ ಅವರು ಫುಲ್ ಖುಷ್ ಆಗಿದ್ದಾರಂತೆ. ಫೆಬ್ರವರಿ ತಿಂಗಳಿನಲ್ಲಿ ಚಿತ್ರ ಇಡೀ ಕರ್ನಾಟಕದಾದ್ಯಂತ ತೆರೆ ಕಾಣಲಿದೆ.

  ಹಾಗೆ ನೋಡಿದರೆ, ತೆಲುಗಿನಲ್ಲಿ' ನಟ ಕಿಚ್ಚ ಸುದೀಪ್ ಅಭಿನಯಿಸಿದ್ದ 'ಈಗ' ಸಿನಿಮಾ ಯಶಸ್ವಿಯಾಗುತ್ತಿದ್ದಂತೆ, ಸುದೀಪ್ ಅವರ ಇನ್ನುಳಿದ ಸಿನಿಮಾಗಳು ತೆಲುಗಿಗೆ ಡಬ್ ಆಗಿದ್ದವು. ಇದೀಗ 'ವೀರಪ್ಪನ್' ಬೇಟೆಗಾರ ಶಿವಣ್ಣ ಅವರ ಸರದಿ.[ಸ್ಟೈಲಿಂಗ್ ಸ್ಟಾರ್ ಶಿವಣ್ಣನ, ಭರ್ಜರಿ 'ಶಿವಲಿಂಗ' ಟ್ರೈಲರ್ ಲೀಕ್..!]

  'ಕಿಲ್ಲಿಂಗ್ ವೀರಪ್ಪನ್' ಇಡೀ ಆಂಧ್ರ ಮತ್ತು ತೆಲಂಗಾಂಣದಾದ್ಯಂತ, ತೆಲುಗು ಭಾಷೆಯಲ್ಲಿ ತೆರೆಕಂಡ ಒಂದೇ ವಾರದಲ್ಲಿ ಸುಮಾರು 7 ರಿಂದ 8 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಬಾಕ್ಸಾಫೀಸ್ ಉಡೀಸ್ ಮಾಡಿದೆ.

  English summary
  The success of Killing Veerappan in Telugu has opened up the market for Shivarajkumar there. His next film 'Shivalinga' has been picked up by Andhra producers to be released there in Telugu. Kannada Actor Shiva Rajkumar, Actress Vedika in the lead role. The movie is directed by P.Vasu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X