»   » ಶಿವಣ್ಣ ಆರೋಗ್ಯದ ಬಗ್ಗೆ ಪತ್ನಿ ಗೀತಾ ಉವಾಚ

ಶಿವಣ್ಣ ಆರೋಗ್ಯದ ಬಗ್ಗೆ ಪತ್ನಿ ಗೀತಾ ಉವಾಚ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಜಾನೆ ವ್ಯಾಯಾಮ ಮಾಡುವ ವೇಳೆ ಬಲ ಭುಜ ಭಾಗದಲ್ಲಿ ನೋವು ಕಾಣಿಸಿಕೊಂಡ ಪರಿಣಾಮ ಶಿವಣ್ಣನಿಗೆ ECG ಮತ್ತು ಆಂಜಿಯೋಗ್ರಾಮ್ ಮಾಡಲಾಯ್ತು.

ಶಿವಣ್ಣನ ಹೃದಯದಲ್ಲಿ ರಕ್ತನಾಳ ಬ್ಲಾಕ್ ಆಗಿಲ್ಲ. ಶಸ್ತ್ರ ಚಿಕಿತ್ಸೆ ಅಗತ್ಯವಿಲ್ಲ ಅಂತ ಮಲ್ಯ ಆಸ್ಪತ್ರೆ ವೈದ್ಯ ವಿ.ಕೆ.ಶ್ರೀನಿವಾಸ್ ಸ್ಪಷ್ಟ ಪಡಿಸಿದ್ದಾರೆ. ಶಿವಣ್ಣನ ಆರೋಗ್ಯ ಸ್ಥಿತಿ ಬಗ್ಗೆ ಪತ್ನಿ ಗೀತಾ ಶಿವರಾಜ್ ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. [ಶಿವಣ್ಣನಿಗೆ ಹಾರ್ಟ್ ಅಟ್ಯಾಕ್.! ಮಲ್ಯ ವೈದ್ಯರು ಹೇಳಿದ್ದೇನು?]

Kannada Actor Shivarajkumar hospitalized : Wife Geetha Shivarajkumar reaction

''ಬೆಳಗ್ಗೆ ವ್ಯಾಯಾಮ ಮಾಡುವ ಹೊತ್ತಿಗೆ ಬಲಗಡೆ ನೋವು ಅಂತಂದ್ರು. ತಕ್ಷಣ ಕೊಲಂಬಿಯಾ ಏಷ್ಯ ಆಸ್ಪತ್ರೆಗೆ ಕರೆದುಕೊಂಡು ಹೋದ್ವಿ. ಅಲ್ಲಿ ECGನಲ್ಲಿ ಚೇಂಜಸ್ ಬಂತು. ಹೀಗಾಗಿ ಮಲ್ಯ ಆಸ್ಪತ್ರೆಗೆ ಕರೆದುಕೊಂಡು ಬಂದ್ವಿ. ನಮ್ಮ ಫ್ಯಾಮಿಲಿ ಡಾಕ್ಟರ್ ಇಲ್ಲೇ ಇರೋದು. ಆಂಜಿಯೋಗ್ರಾಮ್ ನಲ್ಲಿ ಎಲ್ಲಾ ಕ್ಲಿಯರ್ ಆಗಿದೆ. ಹೀ ಈಸ್ ವೆಲ್.'' [ಶಿವಣ್ಣ ಅಸ್ವಸ್ಥ : ರಾಘಣ್ಣ, ಪುನೀತ್, ಮಧು ಬಂಗಾರಪ್ಪ ಏನಂತಾರೆ?]

''ಅವರು ಈಗಲೇ ಕೆಳಗಡೆ ಬರಬಹುದು. ಆದ್ರೆ, ಡಾಕ್ಟರ್ ಪರ್ಮಿಷನ್ ಇಲ್ಲ. ಅಭಿಮಾನಿಗಳ ಆಶೀರ್ವಾದದಿಂದ ಅವರು ಚೆನ್ನಾಗಿದ್ದಾರೆ. ಇಲ್ಲಿ ಟ್ರೀಟ್ಮೆಂಟ್ ಚೆನ್ನಾಗಿ ಸಿಗುತ್ತಿದೆ. ಏನೂ ತೊಂದರೆ ಇಲ್ಲ.''

''ಈ ಹಿಂದೆ ಅವರಿಗೆ ಹೀಗಾಗಿರಲಿಲ್ಲ. ಸ್ಟ್ರೆಸ್ ರಿಲೇಟೆಡ್ ಇರಬಹುದು ಅಂತಾರೆ ಡಾಕ್ಟರ್ಸ್. ನಾವು ಮೊನ್ನೆಯಷ್ಟೆ ಚೆನ್ನೈ ಇಂದ ಬಂದ್ವಿ. ನಾಳೆ ಅಥವ ನಾಡಿದ್ದು ನಿಮ್ಮ ಮುಂದೆ ಬರ್ತಾರೆ. ಈಗಷ್ಟೆ ಊಟ ಮಾಡಿದ್ದಾರೆ. ಅವರು ಚೆನ್ನಾಗಿದ್ದಾರೆ.'' ಅಂತ ಗೀತಾ ಶಿವರಾಜ್ ಕುಮಾರ್ ಹೇಳಿದರು.

    English summary
    Kannada Actor Shivarajkumar has suffered a mild heart attack and has been admitted to Mallya Hospital, Bengaluru today (October 6th). Wife Geetha Shivarajkumar's reaction is here.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada