For Quick Alerts
  ALLOW NOTIFICATIONS  
  For Daily Alerts

  ಪ್ರಣಯ ರಾಜ ಶ್ರೀನಾಥ್ 'ಸುಳಿ' ಚಿತ್ರಕ್ಕೆ ಸಿಕ್ಕ ಪ್ರಶಸ್ತಿಯ ಗರಿ

  By Harshitha
  |

  ಪ್ರಣಯ ರಾಜ ಶ್ರೀನಾಥ್ ಅಭಿನಯದ, ಸದಭಿರುಚಿಯ ಚಿತ್ರಗಳಿಗೆ ಹೆಸರಾಗಿರುವ ಪಿ.ಎಚ್.ವಿಶ್ವನಾಥ್ ನಿರ್ದೇಶನದ 'ಸುಳಿ' ಚಿತ್ರಕ್ಕೆ ಎಲ್ಲಾ ವಿಮರ್ಶಕರು ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಬೆನ್ನಲ್ಲೇ ಚಿತ್ರಕ್ಕೆ ಹಿರಿಮೆಯ ಗರಿ ಸೇರಿದೆ.

  ಅಮೇರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಅಕಾಲೇಡ್ ಗ್ಲೋಬಲ್ ಫಿಲಂ ಫೆಸ್ಟಿವಲ್ ನಲ್ಲಿ 2016 ನೇ ಸಾಲಿನ 'ಅವಾರ್ಡ್ ಆಫ್ ಮೆರಿಟ್' ಪ್ರಶಸ್ತಿಯನ್ನು 'ಸುಳಿ' ಚಿತ್ರ ತನ್ನದಾಗಿಸಿಕೊಂಡಿದೆ. [ಸುಳಿಯಲ್ಲಿ ಸಿಲುಕಿದರೂ ನಸುನಗುವ ನಿರ್ದೇಶಕ ವಿಶ್ವನಾಥ್]

  ಅಕಾಲೇಡ್ ಗ್ಲೋಬಲ್ ಫಿಲಂ ಫೆಸ್ಟಿವಲ್ ನಲ್ಲಿ ಪ್ರಶಸ್ತಿಗೊಳಗಾದ ಅನೇಕ ಚಿತ್ರಗಳು ಆಸ್ಕರ್ ಮತ್ತಿತರ ಪ್ರಶಸ್ತಿಗಳಿಗೆ ಭಾಜನವಾಗಿರುವುದಲ್ಲದೇ ಇತರೆ ಪ್ರತಿಷ್ಟಿತ ಅಂತರ ರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಸಹ ಪಾಲ್ಗೊಳ್ಳುವುದು ವಿಶೇಷ. [ಸುಳಿ-ಭಾವನೆ, ಬದುಕು- ಬವಣೆ, ಬೆಸುಗೆ :ಶ್ರೀನಾಥ್]

  ತಮ್ಮ ವಿಭಿನ್ನ ಪ್ರಯತ್ನಕ್ಕೆ ಪ್ರಶಸ್ತಿ ಸಿಕ್ಕಿರುವುದರಿಂದ ನಟ ಶ್ರೀನಾಥ್, ಪತ್ನಿ - ನಿರ್ಮಾಪಕಿ ಗೀತಾ ಶ್ರೀನಾಥ್ ಹಾಗೂ ಪಿ.ಎಚ್.ವಿಶ್ವನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.

  English summary
  Kannada Actor Srinath starrer, P.H.Vishwanath directorial 'Suli' film wins 'Award of Merit-2016' in Accolade Global Film Festival, which was held in California, America.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X