For Quick Alerts
  ALLOW NOTIFICATIONS  
  For Daily Alerts

  ಉಸಿರಿಗೆ ಉಸಿರಾಗಿದ್ದ ಸಂಗಾತಿ ಕೈಬಿಟ್ಟ ಕಿಚ್ಚ ಸುದೀಪ್

  By ಉದಯರವಿ
  |

  ತನ್ನ ಉಸಿರಿನ ಜೊತೆ ಉಸಿರಾಗಿದ್ದ ಬಹುದಿನಗಳ ಸಂಗಾತಿಯನ್ನು 'ಅಭಿನಯ ಚಕ್ರವರ್ತಿ' ಬಿರುದಾಂಕಿತ ಸುದೀಪ್ ಕೈಬಿಟ್ಟಿದ್ದಾರೆ. ಈ ಸಂಗಾತಿಯನ್ನು ಸುದೀಪ್ ಅವರು ಅಮಿತವಾಗಿ ಪ್ರೀತಿಸುತ್ತಿದ್ದರು. ಇದಿಷ್ಟೇ ಅಲ್ಲದೆ ತನ್ನ ಸಂಗಾತಿ ಜೊತೆ ತುಟಿಗೆ ತುಟಿ ಬೆರೆಸುತ್ತಿದ್ದರು. ಅಂತಹ ಸಂಗಾತಿಯನ್ನು ಅವರು ಇದ್ದಕ್ಕಿದಂತೆ ಕೈಬಿಟ್ಟಿದ್ದಾರೆ!

  ನಮ್ಮ ಕಿಚ್ಚನಿಗೆ 'ಸಂಗಾತಿ'ಯೇ ಎಂದು ಹುಬ್ಬೇರಿಸಬೇಡಿ. ಆ ಸಂಗಾತಿ ಬೇರಾರು ಅಲ್ಲ. ಅವರು ತುಟಿಗೆ ತುಟಿ ಬೆರೆಸುತ್ತಿದ್ದದ್ದು, ಉಸಿರಿಗೆ ಉಸಿರಾಗಿದ್ದದ್ದ ಸಂಗಾತಿ ಸಿಗರೇಟ್. ಈಗ ಅವರು ಸಿಗರೇಟನ್ನು ಬಿಟ್ಟಿದ್ದಾರೆ. ಸುದೀಪ್ ಅವರ ಈ ಕೆಟ್ಟ ದುರಭ್ಯಾಸವನ್ನು ಬಿಡಿಸಿರುವುದು ಸ್ವತಃ ಅವರ ಮಗಳು ಸಾನ್ವಿ.

  "ಅಪ್ಪಾ ನೀನು ಸಿಗರೇಟು ಬಿಡಬೇಕು" ಎಂದು ಬಹು ದಿನಗಳಿಂದ ಸುದೀಪ್ ಮಗಳು ಸಾನ್ವಿ ಒತ್ತಾಯಿಸುತ್ತಿದ್ದರಂತೆ. ಆದರೆ ಸುದೀಪ್ ಮಾತ್ರ ನಾಳೆ ಖಂಡಿತ ಸಿಗರೇಟ್ ಸೇದಲ್ಲ ಎಂದು ಸಬೂಬು ಹೇಳುತ್ತಾ ಬರುತ್ತಿದ್ದರಂತೆ. ಕಡೆಗೆ ರೋಸಿಹೋದ ಸಾನ್ವಿ ಒಂದು ದಿನ ಖಡಗ್ ಆಗಿ ಹೇಳಿದಂತೆ. ಅಷ್ಟೇ ಸುದೀಪ್ ತಮ್ಮ ಹಳೆಯ ಸಂಗಾತಿಗೆ ಗುಡ್ ಬೈ ಹೇಳಿದ್ದಾರೆ.

  ಸಡನ್ ಆಗಿ ಸಿಗರೇಟ್ ಬಿಟ್ಟ ಕಾರಣ ಒಂದೆರಡು ದಿನ ಸುದೀಪ್ ಚಡಪಡಿಸಬೇಕಾಯಿತಂತೆ. ಆದರೆ ಸಿಗರೇಟ್ ಕೈಗೆ ಎತ್ತಿಕೊಂಡಾಗಲೆಲ್ಲಾ ಮಗಳು ಸಾನ್ವಿಗೆ ಕೊಟ್ಟ ಮಾತು ನೆನಪಾಗಿ ಸಿಗರೇಟನ್ನು ಹಾಗೆಯೇ ಒಸಕಿಹಾಕುತ್ತಿದ್ದರಂತೆ. ಒಂದೆರಡು ವಾರಗಳಲ್ಲಿ ಸಿಗರೇಟ್ ಇಲ್ಲದೇನು ಹಾಯಾಗಿ ಇರಬಹುದು ಎಂಬುದು ಸುದೀಪ್ ಗೆ ಮನದಟ್ಟಾಗಿದೆ.

  ಇದಿಷ್ಟೇ ಅಲ್ಲದೆ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ನಿರ್ದೇಶಕ ಯೋಗರಾಜ್ ಭಟ್ ಹಾಗೂ ದುನಿಯಾ ಸೂರಿ ಸಹ ಸಿಗರೇಟನ್ನು ಕೈಬಿಟ್ಟಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇನ್ನೂ ಈ ಬಗ್ಗೆ ಗಂಭೀರವಾಗಿ ಯೋಚಿಸಿಲ್ಲ. (ಏಜೆನ್ಸೀಸ್)

  English summary
  Kannada actor Kichcha Sudeep has reportedly stubbed out her cigarettes for good in a bid to please her daughter Sanvi. Sudeep took a strong decision about a fortnight to give away the habit of smoking.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X