For Quick Alerts
  ALLOW NOTIFICATIONS  
  For Daily Alerts

  'ನಾವು ಬಿಸಿಲಿನಲ್ಲಿ ಆಡಿ ಬಂದವರು' ಸಿಎಂ ಹೇಳಿಕೆಗೆ ರಾಕಿ ಭಾಯ್ ಪಂಚ್

  |
  CM ವಿರುದ್ಧ ನೇರವಾಗಿ ತಿರುಗಿಬಿದ್ದ ರಾಕಿಂಗ್ ಸ್ಟಾರ್ ಯಶ್..! | FILMIBEAT KANNADA

  ಬೆಳಿಗ್ಗೆ ಚನ್ನರಾಯಪಟ್ಟಣದಲ್ಲಿ ಸಿಎಂ ಕುಮಾರಸ್ವಾಮಿ ನಟ ದರ್ಶನ್ ಮತ್ತು ಯಶ್ ಅವರ ಪ್ರಚಾರದ ಬಗ್ಗೆ ಹೇಳಿಕೆಯೊಂದು ನೀಡಿದ್ದರು. 'ಇಷ್ಟು ದಿನ ಛತ್ರಿ ಹಿಡ್ಕೊಂಡು ನೆರಳಿನಲ್ಲಿದ್ದವರು ಈಗ ಬಿಸಿಲಿಗೆ ಬಂದಿದ್ದಾರೆ. ರೈತರ ಕಷ್ಟ ತಿಳಿದುಕೊಳ್ಳಲಿ ಬಿಡಿ' ಎಂದಿದ್ದರು.

  ಇದೀಗ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಈ ಹೇಳಿಕೆ ರಾಕಿಂಗ್ ಸ್ಟಾರ್ ಯಶ್ ತಿರುಗೇಟು ನೀಡಿದ್ದಾರೆ. ಸಿಎಂ ಮಾತಿಗೆ ತಮ್ಮದೇ ಸ್ಟೈಲ್ ನಲ್ಲಿ ತಿರುಗೇಟು ನೀಡಿದ ಯಶ್, ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

  ಮತ್ತೆ 'ಜೋಡೆತ್ತುಗಳ' ಕಾಲೆಳೆದ ಸಿಎಂ ಕುಮಾರಸ್ವಾಮಿ

  ಕುಮಾರ ಸ್ವಾಮಿ ಅವರ ಹೇಳಿಕೆಯನ್ನ ಸೂಕ್ಷ್ಮವಾಗಿ ಗಮನಿಸಿದ್ರೆ ಆ ಹೇಳಿಕೆ ಯಾರಿಗೆ ಹೇಳಿದ್ದು ಅಂತ ಗೊತ್ತಾಗುತ್ತೆ ಎಂದು ನಿಖಿಲ್ ಕುಮಾರ್ ವಿರುದ್ಧ ಚಾಟಿ ಬೀಸಿದರು. ಅಷ್ಟಕ್ಕೂ, ರಾಜಾಹುಲಿ ಯಶ್ ಸಿಎಂ ಹೇಳಿಕೆ ಬಗ್ಗೆ ಬೇರೇನೂ ಹೇಳಿದ್ರು? ಮುಂದೆ ಓದಿ.....

  ಸೂಕ್ಷ್ಮವಾಗಿ ಗಮನಿಸಿ ಯಾರ ಬಗ್ಗೆ ಎಂದು

  ಸೂಕ್ಷ್ಮವಾಗಿ ಗಮನಿಸಿ ಯಾರ ಬಗ್ಗೆ ಎಂದು

  ''ಅವರು ಮುಖ್ಯಮಂತ್ರಿ. ಆರೂವರೆ ಕೋಟಿ ಜನ ಅವರೇ ಬೇಕು ಅವರೇ ಬೇಕು ಅಂತ ಆ ಸ್ಥಾನದಲ್ಲಿ ಕೂರಿಸಿದ್ದಾರೆ. ಅಂತಹ ವ್ಯಕ್ತಿ ಮಾತಾಡಿದ್ರೆ ನೂರು ಅರ್ಥಗಳಿರುತ್ತೆ. ಅವರು ಹೇಳಿದ್ದು ನಮಗಲ್ಲ. ಎಲ್ಲರೂ ಅಪರ್ಥ ಮಾಡಿಕೊಂಡಿದ್ದಾರೆ. ಸೂಕ್ಷ್ಮವಾಗಿ ಗಮನಿಸಿದ್ರೆ ಅದೂ ಯಾರಿಗೆ ಅಂತ ಗೊತ್ತಾಗುತ್ತೆ'' ಎಂದು ಯಶ್ ಟಾಂಗ್ ನೀಡಿದರು.

  ದರ್ಶನ್ ಪ್ರಚಾರ ಮಾಡುತ್ತಿರುವುದರ ಬಗ್ಗೆ ಪ್ರಶ್ನಿಸಿದ್ದಕ್ಕೆ ನಿಖಿಲ್ ಹೇಳಿದ್ದು ಹೀಗೆ

  ನಾವು ಬಿಸಿಲಿನಲ್ಲಿ ಆಡಿ ಬಂದವರು

  ನಾವು ಬಿಸಿಲಿನಲ್ಲಿ ಆಡಿ ಬಂದವರು

  ''ನಾವು ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ್ದು. ಬಿಸಿನಲ್ಲೇ ಬೆಳೆದುಕೊಂಡು, ಆಟವಾಡಿ, ಗಿಲ್ಲಿ ದಾಂಡು ಆಡ್ಕೊಂಡು, ಬಹಳ ಕಷ್ಟಪಟ್ಟು ಒದ್ದಾಡಿ ಸ್ವಂತ ದುಡಿಮೆಯಲ್ಲಿ ಒಂದು ನೆರಳು ನೋಡಿರುವ ವ್ಯಕ್ತಿ. ನೆರಳು ಬಿಸಿಲು ಆಟ ನಮಗೆ ಹೊಸದಲ್ಲ'' ಎಂದು ತಿರುಗೇಟು ನೀಡಿದ್ದಾರೆ.

  'ಡಿ ಬಾಸ್' ಒಬ್ಬರೇ ಯಾಕೆ ಸಿಎಂಗೆ ಟಾರ್ಗೆಟ್, ಅದರ ಹಿಂದಿರುವ ಕಾರಣಗಳೇ ಬೇರೆ.!

  ಅವರ ಅಭ್ಯರ್ಥಿ ಬಗ್ಗೆನೇ ಹೇಳಿದ್ದಾರೆ

  ಅವರ ಅಭ್ಯರ್ಥಿ ಬಗ್ಗೆನೇ ಹೇಳಿದ್ದಾರೆ

  ''ಅವರು ಹೇಳಿರುವುದು ಅವರ ಅಭ್ಯರ್ಥಿ ಪರ. ಹುಟ್ಟಿದಾಗನಿಂದಲೂ ನೆರಳಲಿದ್ದು ಈಗ ಬಿಸಿಲಿನಲ್ಲಿ ಬಂದು ಕೂತಿರುವುದು ಯಾರು ಎಂದು ಗಮನಿಸಬೇಕು. ಅವರ ಅಭ್ಯರ್ಥಿಯೂ ಸಿನಿಮಾದವರೇ, ಅವರ ಬಗ್ಗೆ ಹೇಳುತ್ತಿದ್ದಾರೆ. ಆದ್ರೆ, ನೀವು ಅಪರ್ಥ ಮಾಡಿಕೊಳ್ಳುತ್ತಿದ್ದಾರೆ'' ಎಂದು ಮಾಧ್ಯಮದವರನ್ನ ಪ್ರಶ್ನಿಸಿದರು.

  ದರ್ಶನ್ ಬಂದ್ರು ಅಂತ ವೋಟ್ ಬರಲ್ಲ: 'ದಾಸ'ನಿಗೆ ಜಿಟಿ ದೇವೇಗೌಡ ಟಾಂಗ್

  ಸಿಎಂ ಏನು ಹೇಳಿದ್ದರು?

  ಸಿಎಂ ಏನು ಹೇಳಿದ್ದರು?

  ''ಸ್ವಲ್ಪ ಕಷ್ಟ ಪಡಲಿ. ದಿನನಿತ್ಯ ಛತ್ರಿ ಹಿಡ್ಕೊಂಡು ಸಿನಿಮಾ ಶೂಟಿಂಗ್ ನಲ್ಲಿ ಇರೋರು. ಈಗ ಛತ್ರಿ ಬಿಟ್ಟು ಬಿಸಿಲಿಗೆ ಬಂದಿದ್ದಾರೆ. ಹಳ್ಳಿ ಕಡೆ ಓಡಾಡಿ, ನಮ್ಮ ರೈತರ ಕಷ್ಟ ಏನು ಅಂತ ಸ್ವಲ್ಪ ತಿಳಿದುಕೊಳ್ಳಲಿ'' ಎಂದು ಸಿಎಂ ಕುಮಾರಸ್ವಾಮಿ ಚನ್ನರಾಯಪಟ್ಟಣದಲ್ಲಿ ಹೇಳಿದ್ದಾರೆ.

  English summary
  Kannada actor yash has react about CM hd kumaraswamy. Today Morning Hdk made statement on darshan and yash campaign.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X