For Quick Alerts
  ALLOW NOTIFICATIONS  
  For Daily Alerts

  ಯಶ್ v/s ಕನ್ನಡ ಮಾಧ್ಯಮ: ಕಥೆ ಶುರು ಆಗಿದ್ದು ಎಲ್ಲಿಂದ?

  By Suneetha
  |

  ಕನ್ನಡ ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ಕನ್ನಡ ಮಾಧ್ಯಮಗಳ ನಡುವೆ ಓಪನ್ ಸವಾಲ್ ಗಳ ಮಾರಾ-ಮಾರಿ ನಡೆಯುತ್ತಿದೆ. ಯಶ್ ಅವರು ಹಾಕಿದ ಸವಾಲನ್ನು ತೆಗೆದುಕೊಂಡ ಖಾಸಗಿ ನ್ಯೂಸ್ ಚಾನೆಲ್ ಪಬ್ಲಿಕ್ ಟಿವಿಯವರು, ರೈತರಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಮಾಡಲು ನಾವು ತಯಾರಿದ್ದೇವೆ ಅಂತ ತಿರುಗಿ ಸವಾಲ್ ಹಾಕಿದ್ದಾರೆ.

  ಅಷ್ಟಕ್ಕೂ ಯಶ್ ಮತ್ತು ಖಾಸಗಿ ನ್ಯೂಸ್ ಚಾನೆಲ್ ಗಳ ನಡುವೆ ಈ ತೊಡೆ ತಟ್ಟೋ ಕಾರ್ಯಕ್ರಮ ಆರಂಭವಾಗಲು ಪ್ರಮುಖ ಕಾರಣ, ಯಶ್ ಬಗ್ಗೆ ಮಾಧ್ಯಮದ ಮಾಡಿದ ವರದಿ.[ಖಾಸಗಿ ನ್ಯೂಸ್ ಚಾನೆಲ್ ವಿರುದ್ಧ ತೊಡೆ ತಟ್ಟಿ ನಿಂತ ಯಶ್]

  "ಕಾವೇರಿ ನೀರು ವಿವಾದದ ಕುರಿತಾಗಿ ಗಲಾಟೆ ನಡೆಯುತ್ತಿದ್ದಾಗ ಯಶ್ ಅವರು ವಿದೇಶದಲ್ಲಿ ಇದ್ದರು. ಪ್ರತಿಭಟನೆಗೆ ಬರೋದಿಲ್ಲ, ಮಂಡ್ಯವನ್ನು ಮತ್ತು ಮಂಡ್ಯದ ಭಾಷೆಯನ್ನು ಸಿನಿಮಾಕ್ಕೋಸ್ಕರ ಬಳಸಿಕೊಳ್ಳುತ್ತಾರೆ. ಹಾಗೆ ಹೀಗೆ ಅಂತ ಯಶ್ ಅವರನ್ನು ಖಾಸಗಿ ನ್ಯೂಸ್ ಚಾನೆಲ್ ಗಳು ದೂರಿದ್ದವು.

  ಇದನ್ನು ಸಹಿಸದ ಯಶ್ ಅವರು, ಸಿಟ್ಟಿನಿಂದ ಖಾಸಗಿ ನ್ಯೂಸ್ ಚಾನೆಲ್ ಮೇಲೆ ಸವಾಲ್ ಹಾಕಿದ್ದರು. ಯಶ್ ಅವರು ಹಾಕಿದ ಸವಾಲೇನು?, ಈ ವಿವಾದ ಉಂಟಾಗಲು ಯಶ್ ಕೊಟ್ಟ ಹೇಳಿಕೆ ಏನು? ಎಂಬುದನ್ನು ನೋಡಲು ಮುಂದೆ ಓದಿ....

  'ಅಕ್ಕ' ಸಮ್ಮೇಳನದಲ್ಲಿ ಯಶ್

  'ಅಕ್ಕ' ಸಮ್ಮೇಳನದಲ್ಲಿ ಯಶ್

  ಕಾವೇರಿ ವಿವಾದದ ಬಗ್ಗೆ ಕರ್ನಾಟಕ ಹೊತ್ತಿ ಉರಿಯುತ್ತಿದ್ದ ಸಂದರ್ಭದಲ್ಲಿ ನಟ ಯಶ್ ಅವರು, ಭಾವಿ ಪತ್ನಿ ರಾಧಿಕಾ ಪಂಡಿತ್ ಅವರ ಜೊತೆ 'ಅಕ್ಕ' ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅಲ್ಲಿಂದ ನೇರವಾಗಿ 'ಸಂತು Straight Forward' ಚಿತ್ರದ ಹಾಡಿನ ಶೂಟಿಂಗ್ ಗಾಗಿ ಯುರೋಪ್ ಗೆ ಹಾರಿದ್ರು. ಶೂಟಿಂಗ್ ಭರಾಟೆಯಲ್ಲಿ ವಿದೇಶದಿಂದ ಬಂದು ಪ್ರತಿಭಟನೆಯಲ್ಲಿ ಪಾಲ್ಗೊಳ್ಳೋದು ಯಶ್ ಅವರಿಗೆ ಕಷ್ಟವಾಯ್ತು.[ಕಡೆಗೂ ಕಾವೇರಿ ಹೋರಾಟದ ಬಗ್ಗೆ ತುಟ್ಟಿ ಬಿಚ್ಚಿದ ಮಂಡ್ಯದ 'ಅಣ್ತಮ್ಮ' ಯಶ್]

  ಕಾವೇರಿ ಬಗ್ಗೆ ಅಣ್ತಮ್ಮ ಯಶ್ ಮಾತಾಡಿದ್ದರು

  ಕಾವೇರಿ ಬಗ್ಗೆ ಅಣ್ತಮ್ಮ ಯಶ್ ಮಾತಾಡಿದ್ದರು

  ವಿದೇಶದಲ್ಲಿ ಇದ್ರೂ ಕೂಡ, ಅಲ್ಲಿಂದಲೇ ಯಶ್ ಅವರು ವಿಡಿಯೋ ಸಂದೇಶ ಕಳುಹಿಸಿದ್ದರು. ಯಾರು ಕೂಡ ದುಡುಕು ನಿರ್ಧಾರ ತೆಗೆದುಕೊಳ್ಳಬೇಡಿ, ಎಲ್ಲರೂ ಶಾಂತಿ ಕಾಪಾಡಿ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ನೀಡಿದ್ದರು. ಇದು ಮಾತ್ರವಲ್ಲದೇ ಇದಕ್ಕಿಂತ ಮುನ್ನ ನಡೆದ ಎಲ್ಲಾ ಹೋರಾಟ, ಪ್ರತಿಭಟನೆಗಳಲ್ಲಿ ಯಶ್ ಅವರು ಭಾಗವಹಿಸಿ ರೈತರ ಪರ ಮಾತಾಡಿದ್ದರು.

  ಯಶ್ ನೀಡಿದ ಹೇಳಿಕೆ

  ಯಶ್ ನೀಡಿದ ಹೇಳಿಕೆ

  'ನನ್ನ ಆಡು ಭಾಷೆಯನ್ನು ನಾನು ಜನಪ್ರಿಯತೆಗೆ ಯಾಕೆ ಬಳಸಿಕೊಳ್ಳಲಿ' ಅಂತ ಯಶ್ ಅವರು ಪ್ರಶ್ನೆ ಮಾಡುತ್ತಾರೆ. 'ಪ್ರತಿಭಟನೆ ಮಾಡಿದ ಮಾತ್ರಕ್ಕೆ ನಾವು ರೈತರ ಪರ ಇದ್ದೇವೆ ಅಂತ ಆಗುವುದಿಲ್ಲ. ಪ್ರತಿಭಟನೆ ಮಾಡಿ, ಹೇಳಿಕೆ ಕೊಟ್ಟು, ಘೋಷಣೆ ಕೂಗಿದ ತಕ್ಷಣ ನಮ್ಮ ಕೆಲಸ ಮುಗಿಯುವುದಿಲ್ಲ. ಒಬ್ಬ ಸ್ಟಾರ್ ಅಥವಾ ಒಬ್ಬ ನಟನನ್ನು, ನೀವ್ಯಾಕೆ ಇಂತಹ ವಿಚಾರಗಳು ಸಂಭವಿಸಿದ್ದಾಗ ಬರೋದಿಲ್ಲ, ಅಂತ ಮಾಧ್ಯಮದವರು ಪ್ರಶ್ನೆ ಮಾಡುತ್ತಾರೋ ಅರ್ಥವಾಗುತ್ತಿಲ್ಲ" ಎಂದು ಯಶ್ ಬೇಸರದಿಂದ 'ರೂಪತಾರಕ್ಕೆ' ನೀಡಿದ ಸಂದರ್ಶನದಲ್ಲಿ ನುಡಿಯುತ್ತಾರೆ.

  ಕಿಡಿಕಾರಿದ ಯಶ್

  ಕಿಡಿಕಾರಿದ ಯಶ್

  'ರೈತರ ಸಮಸ್ಯೆ ತುಂಬಾ ಇದೆ. ಇದರ ಬಗ್ಗೆ ವಸ್ತುನಿಷ್ಠವಾಗಿ ತಿಳಿದು ಅಧ್ಯಯನ ನಡೆಸಿ ಮುಂದೇನು ಮಾಡಬಹುದು ಅಂತ ಯೋಚನೆ ಮಾಡಬೇಕು. ಆದರೆ ನಾವು ಇಂತಹ ಸೂಕ್ಷ್ಮ ವಿಚಾರಗಳನ್ನು ರಾಜಕೀಯಕ್ಕೋಸ್ಕರ, ವೈಯಕ್ತಿಕ ಹಿತಾಸಕ್ತಿಗೋಸ್ಕರ ಮತ್ತು ಬರೀ ಪ್ರಚಾರಕ್ಕಾಗಿ ಬಳಸುತ್ತಿದ್ದೇವೆ. ಇದು ಖಂಡಿತ ಸರಿ ಅಲ್ಲ' ಎಂದು ಯಶ್ ಅವರು ರೈತರ ಬಗ್ಗೆ ಕಾಳಜಿ ವ್ಯಕ್ತಪಡಿಸಿ, ತಮ್ಮನ್ನು ದೂರಿದವರ ಮೇಲೆ ಕಿಡಿಕಾರಿದ್ದಾರೆ.

  ಯಶ್ ಹಾಕಿದ ಓಪನ್ ಚಾಲೆಂಜ್

  ಯಶ್ ಹಾಕಿದ ಓಪನ್ ಚಾಲೆಂಜ್

  "ಇದೇ ವಿಚಾರದಲ್ಲಿ ನನ್ನನ್ನು ಪದೇ-ಪದೇ ಎಳೆಯುವುದಾಗಲಿ ಅಥವಾ ಪ್ರಶ್ನೆ ಮಾಡುವುದಾದರೆ ಅಂತವರಿಗೆ ನಾನು ಒಂದು ಓಪನ್ ಚಾಲೆಂಜ್ ಹಾಕುತ್ತೇನೆ. ಯಾವುದೇ ನ್ಯೂಸ್ ಚಾನೆಲ್ ನವರು ಆಗಬಹುದು, ಅವರ ಪ್ರೈಮ್ ಟೈಮ್ ನಲ್ಲಿ ಕೇವಲ ರೈತರಿಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಿ. ಈ ಮೂಲಕ ಮಾಧ್ಯಮದವರು ಕೂಡ ರೈತರ ಬಗ್ಗೆ ತಮ್ಮ ಕಳಕಳಿಯನ್ನು ಈ ಮೂಲಕ ತೋರಿಸಿದರೆ, ನಾನು ಕೂಡ ಬಂದು ಉಚಿತವಾಗಿ ಅಂತಹ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತೇನೆ" ಹೀಗಂತ ಯಶ್ ಅವರು ಮಾಧ್ಯಮಕ್ಕೆ ಸವಾಲೆಸೆಯುತ್ತಾರೆ.

  ಯಾವುದೋ ಜವಾಬ್ದಾರಿಯನ್ನು ಇನ್ನೊಬ್ಬರ ತೆಲೆಗೆ ಕಟ್ಟುವುದು ಸರಿಯಲ್ಲ: ಯಶ್

  ಯಾವುದೋ ಜವಾಬ್ದಾರಿಯನ್ನು ಇನ್ನೊಬ್ಬರ ತೆಲೆಗೆ ಕಟ್ಟುವುದು ಸರಿಯಲ್ಲ: ಯಶ್

  'ನಾವು ಪ್ರತಿಯೊಬ್ಬರು ನಮ್ಮ-ನಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಬೇಕು. ಪ್ರತಿಯೊಬ್ಬರಿಗೂ ಅವರದೇ ಆದ ಕೆಲವು ಜವಾಬ್ದಾರಿಗಳು ಇರುತ್ತವೆ. ಅದನ್ನು ಸರಿಯಾಗಿ ನಾವೆಲ್ಲರೂ ಸರಿಯಾಗಿ ನಿರ್ವಹಿಸದೇ ಇದ್ದಾಗ, ಅದನ್ನು ಪ್ರಶ್ನೆ ಮಾಡಬಹುದು. ಇದರ ಹೊರತಾಗಿ ಯಾವುದೋ ಜವಾಬ್ದಾರಿಯನ್ನು ಯಾರದೋ ತಲೆಗೆ ಕಟ್ಟುವುದರಲ್ಲಿ ಖಂಡಿತ ಅರ್ಥವಿಲ್ಲ' ಎಂದು ಯಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.

  English summary
  Kannada Actor Yash v/s Kannada Media, the genesis of controversy. Yash claims that he did not take part in Pro-Cauvery Protest since he was not in the Country, India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X