»   » ಬಾಲಿವುಡ್ ಲೋಕಕ್ಕೆ ಜಿಗಿದ ಐಂದ್ರಿತಾ ರೈ!

ಬಾಲಿವುಡ್ ಲೋಕಕ್ಕೆ ಜಿಗಿದ ಐಂದ್ರಿತಾ ರೈ!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಡ್ರೀಮ್ ಗರ್ಲ್ ಐಂದ್ರಿತಾ ರೈ, ಎಲ್ಲೂ ಕಾಣಿಸುತ್ತಿಲ್ಲ ಅಲ್ವಾ....! ಅಲ್ಲೊಂದು ಇಲ್ಲೊಂದು ಚಿತ್ರದಲ್ಲಿ ಪ್ರತ್ಯಕ್ಷವಾಗಿದ್ದು ಬಿಟ್ರೆ, ಸದ್ಯ, ಹೆಚ್ಚೇನೂ ಸಿನಿಮಾ ಮಾಡ್ತಿಲ್ಲ ಅಲ್ವಾ ಎಂಬ ಅನುಮಾನ ಎಲ್ಲರನ್ನೂ ಕಾಡುತಿದೆ.

ಆದ್ರೆ, ಸದ್ದು ಸುದ್ದಿಯಿಲ್ಲದೆ ಬಾಲಿವುಡ್ ಚಿತ್ರದಲ್ಲಿ ಐಂದ್ರಿತಾ ರೈ ಬ್ಯುಸಿಯಾಗಿದ್ದಾರೆ ಎಂಬುದು ಯಾರಿಗೂ ಗೊತ್ತೆ ಆಗಲೇ ಇಲ್ಲ. ಹೌದು, ಇಷ್ಟು ದಿನ ಐಂದ್ರಿತಾ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಇದೀಗ ಅದು ಕನ್‌ ಫರ್ಮ್ ಆಗಿದೆ.[ದಿಗಂತ್-ಐಂದ್ರಿತಾ ಬಗ್ಗೆ ಕಾಡ್ಗಿಚ್ಚಿನಂತೆ ಹಬ್ಬಿದ ಸುದ್ದಿ ನಿಜವೋ? ಸುಳ್ಳೋ?]

ಈಗಾಗಲೇ ಹಿಂದಿ ಚಿತ್ರದಲ್ಲಿ ಐಂದ್ರಿತಾ ರೈ ನಟಿಸುತ್ತಿದ್ದು, ಚಿತ್ರೀಕರಣದಲ್ಲೂ ಕೂಡ ಪಾಲ್ಗೊಂಡಿದ್ದಾರೆ.

ಬಾಲಿವುಡ್ ಚಿತ್ರದಲ್ಲಿ 'ಐಂದ್ರಿತಾ ರೈ'!

ಇದೇ ಮೊದಲ ಬಾರಿಗೆ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಿರುವ ಐಂದ್ರಿತಾ ರೈ, ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.[ಮಗದೊಮ್ಮೆ 'ಐಟಂ ಗರ್ಲ್' ಆದ 'ಬಸಂತಿ' ಐಂದ್ರಿತಾ ರೇ.!]

ಸಲ್ಮಾನ್ ಖಾನ್ ಸಹೋದರ ನಾಯಕ!

ಇನ್ನೂ ಹೆಸರಿಡದ ಈ ಚಿತ್ರಕ್ಕೆ ಇಬ್ಬರು ನಾಯಕರು. ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಮತ್ತು 'ಶಾಂದರ್' ಖ್ಯಾತಿಯ ವಿಕಾಸ್ ಶರ್ಮಾ ಚಿತ್ರದಲ್ಲಿ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಬಾಜ್ ಖಾನ್ ಗೆ ಐಂದ್ರಿತಾ ಜೋಡಿಯಾಗಿದ್ದಾರೆ.[ಸ್ಯಾಂಡಲ್ ವುಡ್ ಕಹಿಸತ್ಯಗಳನ್ನು ಬಿಚ್ಚಿಟ್ಟ ಐಂದ್ರಿತಾ ರೇ]

ಸ್ವಿಟ್ಜರ್ಲ್ಯಾಂಡ್ ನಲ್ಲಿ ಶೂಟಿಂಗ್!

ಈಗಾಗಲೇ ಈ ಚಿತ್ರದ ಶೂಟಿಂಗ್ ಆರಂಭವಾಗಿದ್ದು, ಬಹುತೇಕ ಚಿತ್ರೀಕರಣ ಸ್ವಿಸ್ ನ ಆರೋರ ನಗರದಲ್ಲಿ ನಡೆಯಲಿದೆ. ಸದ್ಯ, ಸ್ವಿಟ್ಜರ್ಲ್ಯಾಂಡ್ ನಲ್ಲಿ ನಡೆಯುತ್ತಿರುವ ಶೂಟಿಂಗ್ ನಲ್ಲಿ ಐಂದ್ರಿತಾ ರೈ ಭಾಗಿಯಾಗಿದ್ದಾರೆ.

'ಬೆಂಗಾಲಿ' ಚಿತ್ರದಲ್ಲೂ ಬ್ಯುಸಿ!

ಕನ್ನಡದಲ್ಲಿ ಇತ್ತೀಚೆಗೆ 'ನಿರುತ್ತುರ' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಐಂದ್ರಿತಾ ರೈ, ಕೇವಲ ಬಾಲಿವುಡ್ ಮಾತ್ರವಲ್ಲ, ಬೆಂಗಾಲಿಯ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹಿಂದಿ ಚಿತ್ರದ ಶೂಟಿಂಗ್ ಮುಗಿದ ನಂತರ 'ಬೆಂಗಾಲಿ' ಚಿತ್ರವೊಂದನ್ನ ಮುಗಿಸಿಲಿದ್ದಾರಂತೆ.

English summary
Kannada Kannada Actress Aindrita Ray will be Making her debut in Bollywood playing the lead role Against Salman Khan's brother Arbaaz Khan. Khan will be seen playing a double role for the first time in a thriller in the film yet untitled. The film will be shot in Switzerland.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada