»   » ಶಿವರಾಜ್ ಕುಮಾರ್ ತಂಗಿಯಾಗಿ ಗೋಲ್ಡನ್ ಕ್ವೀನ್ ಅಮೂಲ್ಯ?

ಶಿವರಾಜ್ ಕುಮಾರ್ ತಂಗಿಯಾಗಿ ಗೋಲ್ಡನ್ ಕ್ವೀನ್ ಅಮೂಲ್ಯ?

Posted By: Super Admin
Subscribe to Filmibeat Kannada

'ರೋಸ್' ಸಿನಿಮಾ ಮಾಡಿದ್ದ ನಿರ್ದೇಶಕ ಸಹನಾ ಮೂರ್ತಿ ಅವರು ಮತ್ತೊಂದು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇವರ ಮುಂದಿನ ಹೊಸ ಪ್ರಾಜೆಕ್ಟ್ 'ಮಾಸ್ ಲೀಡರ್' ಅನ್ನು ನಿರ್ಮಾಪಕರಾದ ತರುಣ್ ಶಿವಪ್ಪ ಮತ್ತು ಹಾರ್ದಿಕ್ ಗೌಡ ನಿರ್ಮಿಸುತ್ತಿದ್ದು ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯಿಸುತ್ತಿದ್ದಾರೆ. ಚಿತ್ರದ ಚಿತ್ರೀಕರಣ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿದೆ.

ಅಂದಹಾಗೆ ಶಿವರಾಜ್ ಕುಮಾರ್ ಅವರ ಜೊತೆ ತಂಗಿಯಾಗಿ ನಟಿಸಿ ಗಾಂಧಿನಗರದ 'ಅಣ್ಣತಂಗಿ' ಅಂತ ಫೇಮಸ್ ಆದವರು ನಟಿ ರಾಧಿಕಾ ಕುಮಾರಸ್ವಾಮಿ. ಇನ್ನು ಶಿವರಾಜ್ ಕುಮಾರ್ ಅವರ ಜೊತೆ ಯಾರೆಲ್ಲಾ ತಂಗಿಯಾಗಿ ನಟಿಸುತ್ತಾರೋ ಅವರೆಲ್ಲರ ಲಕ್ಕು ಕುದುರುತ್ತದೆ ಎಂಬ ಮಾತು ಚಂದನವನದಲ್ಲಿದೆ.[ವಿಮರ್ಶೆ: ಕವಿರಾಜರ ಕಲ್ಪನೆಯ ಮದುವೆ ಹೇಗಿದೆ ಗೊತ್ತಾ?]

Kannada Actress Amoolya the new On-Screen Sister for Shivanna

ಇದೀಗ ಎಲ್ಲಾ ಅಂದುಕೊಂಡಂತೆ ನಡೆದರೆ ಸ್ಯಾಂಡಲ್ ವುಡ್ ನ ಬೇಬಿ ಡಾಲ್ ನಟಿ ಅಮೂಲ್ಯ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ತಂಗಿಯಾಗಿ ಕಾಣಿಸಿಕೊಳ್ಳುವುದು ಪಕ್ಕಾ.[ಗೋಲ್ಡನ್ ಕ್ವೀನ್ ಮದುವೆಗೆ ನೀವೂ ಬರ್ತಿರಾ ಅಲ್ವಾ?]

ಹೌದು ಗೋಲ್ಡನ್ ಕ್ವೀನ್ ಅಮ್ಮು ಅವರಿಗೆ ಈ ಅಮೂಲ್ಯ ಆಫರ್ ಕೊಟ್ಟವರು ನಿರ್ಮಾಪಕ ತರುಣ್ ಶಿವಪ್ಪ. ನಿರ್ಮಾಪಕರು ಅಮೂಲ್ಯ ಅವರನ್ನು ಶಿವಣ್ಣ ಅವರ ಜೊತೆ ತಂಗಿಯಾಗಿ ನಟಿಸಲು ಕೇಳಿಕೊಂಡಿದ್ದು, ಇದಕ್ಕೆ ಅಮೂಲ್ಯ ಅವರು ಆಸಕ್ತಿ ವಹಿಸಿದ್ದಾರೆ. ಈ ವಾರದ ಅಂತ್ಯದೊಳಗೆ ಅಧಿಕೃತ ಹೇಳಿಕೆ ಹೊರಬೀಳಲಿದೆ.[ಮದುವೆಯ ಹುಡುಗಿ ಅಣ್ಣಮ್ಮನ ಸ್ಟೆಪ್ ಹಾಕಿದ್ರೆ ಹೇಗಿರಬಹುದು?]

ಈ ಮೊದಲು ಶಿವಣ್ಣ ಮತ್ತು ರಾಧಿಕಾ ಅವರು ಅಣ್ಣ ತಂಗಿಯಾಗಿ ನಟಿಸಿದ್ದ 'ತವರಿಗೆ ಬಾ ತಂಗಿ', 'ಅಣ್ಣ ತಂಗಿ' ಮತ್ತು 'ರಿಷಿ' ಚಿತ್ರಗಳು ಯಶಸ್ವಿಯಾಗಿದ್ದವು. ಇದೀಗ ಹೊಸ ಅಣ್ಣ-ತಂಗಿ ಜೋಡಿ ಸ್ಯಾಂಡಲ್ ವುಡ್ ನಲ್ಲಿ ಯಾವ ರೀತಿ ಮೋಡಿ ಮಾಡುತ್ತೆ ಅಂತ ಕಾದು ನೋಡಬೇಕು.

    English summary
    Sahana Murthy's second film after Rose is 'Mass Leader', produced by Tharun Shivappa and Hardik Gowda, with Shivarajkumar essaying the lead. As the plan is to go on floors in April, the makers are creating a buzz with its star cast. If everything goes as per plan, they will be finalising Amulya, who will for the first time play sister to Shivarajkumar's character.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada