twitter
    For Quick Alerts
    ALLOW NOTIFICATIONS  
    For Daily Alerts

    ಗೋಡ್ಸೆ ಮತ್ತು ಬ್ರಾಹ್ಮಣ್ಯ: ನಟಿ ಅನಿತಾ ಭಟ್ ಟ್ವೀಟ್‌ಗಳಿಗೆ ಮಿಶ್ರ ಪ್ರತಿಕ್ರಿಯೆ

    |

    ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ರಾಜಕೀಯದ ಚರ್ಚೆ ಮಾಡುವುದು ಬಹಳ ಅಪರೂಪ. ಇಂಥಹವರ ಸಂಖ್ಯೆ ಬೆರಳೆಣಿಕೆ. ಅದರಲ್ಲೂ ಜಾತಿಯಂಥಹಾ ಸೂಕ್ಷ್ಮ ವಿಚಾರಗಳಿಂದ ದೂರವೇ ಇರುತ್ತಾರೆ. ಇದು ಅವರವರ ಆಯ್ಕೆ ಸಹ.

    ಆದರೆ ಕನ್ನಡದ ನಟಿ ಅನಿತಾ ಭಟ್ ಇಂದು ಟ್ವಿಟ್ಟರ್‌ನಲ್ಲಿ ಕೆಲವು ಸೂಕ್ಷ್ಮ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಅಭಿಪ್ರಾಯಗಳಿಗೆ ವಿರುದ್ಧ ಅಭಿಪ್ರಾಯ ವ್ಯಕ್ತ ಪಡಿಸಿ ಕಮೆಂಟ್ ಮಾಡಿದವರಿಗೆ ತೀಕ್ಷ್ಣ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

    ಗೋಡ್ಸೆ ಹೊಗಳಿಕೆಯಿಂದ ಆರಂಭಿಸಿ ಬ್ರಾಹ್ಮಣ, ಬ್ರಾಹ್ಮಣ್ಯ ಇತರೆ ವಿಷಯಗಳ ಕುರಿತು ಸರಣಿ ಟ್ವೀಟ್ ಮಾಡಿದ್ದಾರೆ ಅನಿತಾ ಭಟ್. ''ಗಾಂಧಿಯನ್ನು ಕೊಂದು ಎಂತ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಅಂತ ಗೊತ್ತಿದ್ರೂ, ಅದನ್ನ ಮಾಡಿದ ಗೋಡ್ಸೆಯ ದೇಶಪ್ರೇಮಕ್ಕೆ ಜೈ. ದೇಶಕ್ಕಿಂತ ಏನೂ ದೊಡ್ಡದಲ್ಲ. ಇನ್ನೆಷ್ಟು ಚೂರಾಗ್ತಾ ಇತ್ತೋ ನಮ್ಮ ಭಾರತ'' ಎಂದಿದ್ದಾರೆ ನಟಿ.

    ಗೋಡ್ಸೆ ದೇಶಭಕ್ತ: ಅನಿತಾ ಭಟ್

    ಗೋಡ್ಸೆ ದೇಶಭಕ್ತ: ಅನಿತಾ ಭಟ್

    ''ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡಿದ್ದ ಗೋಡ್ಸೆ ಯವರು ದೇಶಭಕ್ತನೇ. ಅವರನ್ನ ಭಯೋತ್ಪಾದಕ ಅಂತ ಕರಿಯೋದು ನಿಮ್ಮಗಳ ಅಜ್ಞಾನ. ಯಾರೋ ಒಬ್ಬರಿನಿಂದ ದೇಶಕ್ಕೆ ಸ್ವಂತಂತ್ರ ಬಂದಿಲ್ಲ. ಕೋಟಿಗಟ್ಟಲೆ ವೀರರು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದಾರೆ ಅನ್ನೋದು ಅರಿತುಕೊಂಡರೆ ಸಾಕು'' ಎಂದಿರುವ ಅನಿತಾ ಭಟ್, ನಾಥೋರಾಮ್ ಗೋಡ್ಸೆ ರಚಿತ 'ವೈ ಐ ಅಸಾಸಿನೇಟೆಡ್ ಗಾಂಧಿ' ಹೆಸರಿನ ಪುಸ್ತಕವನ್ನು ಓದುವಂತೆ ಮತ್ತೊಂದು ಟ್ವೀಟ್‌ನಲ್ಲಿ ಸಲಹೆ ಕೊಟ್ಟಿದ್ದಾರೆ.

    ದಲಿತರಲ್ಲೂ ಒಳ ಜಾತಿ ಇದೆ ಅಂತ ತಿಳ್ಕೊಂಡಿದ್ದೀನಿ: ಅನಿತಾ ಭಟ್

    ದಲಿತರಲ್ಲೂ ಒಳ ಜಾತಿ ಇದೆ ಅಂತ ತಿಳ್ಕೊಂಡಿದ್ದೀನಿ: ಅನಿತಾ ಭಟ್

    ''ಬ್ರಾಹ್ಮಣರು ತೋರಿಸೋದು ಬ್ರಾಹ್ಮಣ್ಯ , ಗೌಡ್ರು ತೋರ್ಸೋದು ಗೌಡತ್ವ, ದಲಿತರು ತೋರಸೋದು ದಲಿತತ್ವ , ಲಿಂಗಾಯತರು ತೋರ್ಸೋದು ಲಿಂಗಾಯತತ್ವ .. ಎಲ್ಲ ಜಾತಿಯವರೂ ಮೇಲು ಕೀಳು ಅನ್ನೋ ಅಸಮಾನತೆ ತೋರಿಸುವಾಗ ಬ್ರಾಹ್ಮಣ್ಯ ಅನ್ನೋ ಹಣೆಪಟ್ಟಿ ಯಾಕೆ ? ದಲಿತರಲ್ಲೂ ಒಳ ಜಾತಿ ಇದೆ ಅಂತ ಕೇಳಿಪಟ್ಟೆ. ಓದಿದಿನಿ ಕೂಡ. ಅದನ್ನ ಯಾವಾಗ ತೊಲಗಿಸೋದು'' ಎಂದು ಇನ್ನೊಂದು ಟ್ವೀಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ ಅನಿತಾ ಭಟ್. ''ನನ್ನ ಅಮ್ಮ ಎಷ್ಟೋ ವರ್ಷಗಳಿಂದ ಜಾತಿ ಪದ್ಧತಿಯನ್ನು ದೂರ ಇಟ್ಟಿದ್ದಾರೆ. ಒಂದು ಲಂಬಾಣಿ ಹುಡುಗಿ ನಮ್ಮ ಮನೆಯಲ್ಲಿ ಓದೋಕೆ ಅಂತ 4 ವರ್ಷ ಇದ್ದಳು. ನಮ್ಮನೆ ದೇವರಿಗೆ ಪೂಜೆ ಸಹ ಮಾಡಿದ್ದಾಳೆ ಆ ಹುಡುಗಿ. ನನಗೆ ಇದರಲ್ಲಿ ವಿಶೇಷತೆ ಏನೂ ಕಂಡಿಲ್ಲ'' ಎಂದು ಮತ್ತೊಂದು ಟ್ವೀಟ್‌ನಲ್ಲಿ ತಾವು ಜಾತೀವಾದಿಯಲ್ಲ ಎಂದುದಕ್ಕೆ ಸಾಕ್ಷ್ಯ ನೀಡಿದ್ದಾರೆ ನಟಿ.

    ಅದಕ್ಕೆ ಬ್ರಾಹ್ಮಣ್ಯ ಅನ್ನೋ ಹೆಸರು ಯಾಕ್ರೀ: ಅನಿತಾ ಭಟ್

    ಅದಕ್ಕೆ ಬ್ರಾಹ್ಮಣ್ಯ ಅನ್ನೋ ಹೆಸರು ಯಾಕ್ರೀ: ಅನಿತಾ ಭಟ್

    ತಾವೇ ಸರ್ವಶ್ರೇಷ್ಠರು ಅನ್ನೋ ವಾದ, ಮಡಿವಂತಿಕೆ ಆಚರಣೆಗಳಿಗೆ ಬ್ರಾಹ್ಮಣ್ಯ ಎಂದು ಕರೆಯುವ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ನಟಿ ಅನಿತಾ ಭಟ್ ''ಅದಕ್ಕೆ ಬ್ರಾಹ್ಮಣ್ಯ ಅನ್ನೋ ಹೆಸರು ಯಾಕ್ರೀ ? ಬೇರೆ ಜಾತಿಯವರೂ ಮಾಡ್ತಾರೆ ಅಂದ್ರೆ ಅವರವರ ಜಾತಿ ಹೆಸರು ಹಾಕಿ. ಬಡಪಾಯಿ ಬ್ರಾಹ್ಮಣರು ಮೂಗು ಮುಚ್ಕೊಂಡು ಕೂತಿದಾರೆ , ಅದಕ್ಕೆ ಬೇಕಾಬಿಟ್ಟಿ ಮಾತಾಡ್ತಾರೆ.. ಅಷ್ಟೇ'' ಎಂದಿದ್ದಾರೆ.

    ದೇವಸ್ಥಾನದ ಪ್ರಸಾದ ತಿಂದಾದ್ರು ಬದುಕುತ್ತೀನಿ: ಅನಿತಾ ಭಟ್

    ದೇವಸ್ಥಾನದ ಪ್ರಸಾದ ತಿಂದಾದ್ರು ಬದುಕುತ್ತೀನಿ: ಅನಿತಾ ಭಟ್

    'ನಿಮಗೆ ಓದಿನ ಕೊರೆ ಇದೆ' ಎಂಬ ಕಮೆಂಟ್ ಒಂದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅನಿತಾ ಭಟ್, ''ನಿಮ್ಮ ಟ್ವೀಟ್ ಗಳ ಬಗ್ಗೆ ನಮ್ಮಲ್ಲಿ ಇದೆ ಅಭಿಪ್ರಾಯ ಇದೆ'' ಎಂದಿದ್ದಾರೆ. ನಟಿಯನ್ನು ಅಸಫಲ ನಟಿ ಎಂದು ಜರಿದ ಮತ್ತೊಂದು ಟ್ವೀಟ್‌ಗೆ ತಾವು ನಟಿಸಿರುವ ಈ ವರೆಗಿನ ಸಿನಿಮಾಗಳ ಪಟ್ಟಿಯನ್ನು ನೀಡಿದ್ದಾರೆ. ಜೊತೆಗೆ ಸಿನಿಮಾಗಳಲ್ಲಿ ನಟಿಸುವುದು ಮತ್ತು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವುದು ನನ್ನ ಹಕ್ಕು ಎಂದು ಎಚ್ಚರಿಸಿದ್ದಾರೆ. ''ಬಿಜೆಪಿ ಅಜೆಂಡಗಳನ್ನು ಪ್ರಚಾರ ಮಾಡಿದ್ರೆ ಆ ಪಕ್ಷ ನಿಮಗೆ ಟಿಕೆಟ್ ಕೊಡಲ್ಲ'' ಎಂಬ ಕಮೆಂಟ್‌ಗೆ ''ನಾನೇನಾದ್ರೂ ಬ್ರಾಹ್ಮಣ ನಟಿ ಅಂತ ಹಾಕಿದಿನ? ಜಾತಿ ಹೆಸರು ಹೇಳಿ ಕೆಲಸ ಗಿಟ್ಟಿಸೋ ಗತಿ ಇನ್ನು ಬಂದಿಲ್ಲ. ದೇವಸ್ಥಾನದ ಪ್ರಸಾದ ತಿಂದು ಬದುಕಿದ್ರೂ ಸರಿ'' ಎಂದು ಖಾರವಾಗಿಯೇ ಪ್ರತಿಕಮೆಂಟ್ ಹಾಕಿದ್ದಾರೆ.

    ಹಲವು ಸಿನಿಮಾಗಳಲ್ಲಿ ನಟಿಸಿರುವ ಅನಿತಾ ಭಟ್

    ಹಲವು ಸಿನಿಮಾಗಳಲ್ಲಿ ನಟಿಸಿರುವ ಅನಿತಾ ಭಟ್

    ನಟಿ ಅನಿತಾ ಭಟ್, 2008ರಲ್ಲಿ ಬಿಡುಗಡೆ ಆದ 'ಸೈಕೊ' ಸಿನಿಮಾದಿಂದ ಆರಂಭಿಸಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಡರ್ಟಿ ಪಿಕ್ಚರ್; ಸಿಲ್ಕ್ ಸಖತ್ ಹಾಟ್ ಮಗಾ', 'ದೊಡ್ಮನೆ ಹುಡ್ಗಾ', 'ಟಗರು' (ಡಾಲಿ ಗರ್ಲ್‌ಫ್ರೆಂಡ್ ಪಾತ್ರ), 'ಹೊಸ ಕ್ಲೈಮ್ಯಾಕ್ಸ್', 'ಡಿಎನ್‌ಎ', 'ಕನ್ನೇರಿ', 'ಕಲಿವೀರ', 'ಬೆಂಗಳೂರು-69', 'ಬಳೆಪೇಟೆ', 'ಜೂಟಾಟ', ತೆಲುಗಿನ 'ಕೃಷ್ಣ ಲಂಕಾ' ಸಿನಿಮಾ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

    English summary
    Kannada actress Anita Bhatt tweets praising Nathuram Godse got mixed responses. Anita Bhatt acted in more than 20 Kannada movies.
    Wednesday, August 18, 2021, 12:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X