For Quick Alerts
  ALLOW NOTIFICATIONS  
  For Daily Alerts

  'ಗಾಳಿಪಟ' ಭಾವನ ಬಾಲಿವುಡ್ ಗೆ, ಯಾವ ಸಿನಿಮಾ?, ಯಾರು ಹೀರೋ?

  |

  ಸ್ಯಾಂಡಲ್ ವುಡ್ ಸಿನಿಮಾ 'ಕೆಜಿಎಫ್' ಬಾಲಿವುಡ್ ನಲ್ಲಿ ದೊಡ್ಡ ಕ್ರೇಜ್ ಸೃಷ್ಟಿ ಮಾಡಿದೆ. ಅದರ ಬಳಿಕ ಸ್ಯಾಂಡಲ್ ವುಡ್ ನಟಿಯೊಬ್ಬರು ಬಾಲಿವುಡ್ ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಆ ಚೆಲುವೆಯೇ ಭಾವನ ರಾವ್.

  ನಟಿ ಭಾವನ ರಾವ್ ಎನ್ನುವುದಕ್ಕಿಂತ 'ಗಾಳಿಪಟ' ಭಾವನ ಎಂದರೆ ಕನ್ನಡ ಸಿನಿಮಾ ಪ್ರೇಮಿಗಳಿಗೆ ಬಹಳ ಬೇಗ ಅರ್ಥವಾಗಿ ಬಿಡುತ್ತದೆ. 'ಗಾಳಿಪಟ' ಸಿನಿಮಾದಲ್ಲಿ ಪಾವನಿಯಾಗಿ ಕಾಣಿಸಿಕೊಂಡಿದ್ದ ಭಾವನ ಈಗ ಹಿಂದಿ ಸಿನಿಮಾದ ಅವಕಾಶ ಪಡೆದಿದ್ದಾರೆ.

  'ವಿಲನ್' ಬಳಗ ಸೇರಿದ ಮೂವರು 'ಸ್ಟಾರ್' ನಟಿಯರು.!

  ಕನ್ನಡದ ಹುಡುಗಿ ಭಾವನ ಹಿಂದಿ ಸಿನಿಮಾ ಮಾಡುತ್ತಿದ್ದಾರೆ ಎಂದಾಗ ಯಾವ ಸಿನಿಮಾ ಮತ್ತು ಆ ಚಿತ್ರದ ಹೀರೋ ಯಾರು ಎನ್ನುವ ಕುತೂಹಲ ಮೂಡುತ್ತದೆ. ಅಂದಹಾಗೆ, ಇದೀಗ ಭಾವನ ಅವರೇ ತಮ್ಮ ಮೊದಲ ಹಿಂದಿ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸಿನಿಮಾ ವಿವರವನ್ನು 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ...

  'ಬೈಪಾಸ್ ರೋಡ್' ಚಿತ್ರ

  'ಬೈಪಾಸ್ ರೋಡ್' ಚಿತ್ರ

  ನಟಿ ಭಾವನ ರಾವ್ ಅವರ ಮೊದಲ ಹಿಂದಿ ಸಿನಿಮಾದ ಹೆಸರು 'ಬೈಪಾಸ್ ರೋಡ್'. ಈ ಚಿತ್ರದ ಮೂಲಕ ಕನ್ನಡದ ನಟಿ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ಸಿನಿಮಾದ ಎರಡು ದಿನಗಳ ಚಿತ್ರೀಕರಣ ಮುಗಿದಿದ್ದು, ಮತ್ತೆ ಜನವರಿ 20ರ ಮೇಲೆ ಶೂಟಿಂಗ್ ಶುರು ಆಗಲಿದೆಯಂತೆ. ಚಿತ್ರತಂಡದ ಆಡಿಷನ್ ನಲ್ಲಿ ಭಾಗಿಯಾಗಿದ್ದ ಭಾವನ ಸಿನಿಮಾಗೆ ಆಯ್ಕೆ ಆಗಿದ್ದಾರೆ.

  ವಾವ್..! 'ಗಾಳಿಪಟ' ಹಾರಿಸಿದ ಭಾವನಾ ಈಗ ಮೊದಲಿನ ಹಾಗಿಲ್ಲ!

  ನೀಲ್ ನಿತೀಶ್ ಮುಕೇಶ್ ಗೆ ಜೋಡಿ

  ನೀಲ್ ನಿತೀಶ್ ಮುಕೇಶ್ ಗೆ ಜೋಡಿ

  ಬಾಲಿವುಡ್ ನಟ ನೀಲ್ ನಿತೀಶ್ ಮುಕೇಶ್ ಗೆ ಭಾವನ ಜೋಡಿಯಾಗಿದ್ದಾರೆ. 'ಬೈಪಾಸ್ ರೋಡ್' ಚಿತ್ರಕ್ಕೆ ನೀಲ್ ನಿತೀಶ್ ಅವರ ಸಹೋದರ ನಮನ್ ನಿತೀಶ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆಯಂತೆ. ಇನ್ನು, ನೀಲ್ ನಿತೀಶ್ ಮುಕೇಶ್ ಜೊತೆಗಿನ ಫೋಟೋವನ್ನು ಇನ್ಟಾಗ್ರಾಮ್ ಖಾತೆಯಲ್ಲಿ ಭಾವನ ಹಂಚಿಕೊಂಡಿದ್ದಾರೆ.

  ಭಾವನ ಪಾತ್ರ ಏನು?

  ಭಾವನ ಪಾತ್ರ ಏನು?

  ಈ ಸಿನಿಮಾದಲ್ಲಿ ಭಾವನ ಒಂದು ಫ್ಯಾಶನ್ ಕಂಪನಿಯಲ್ಲಿ ಕೆಲಸ ಮಾಡುವ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ. ಅವರ ಪಾತ್ರಕ್ಕೆ ಸ್ವಲ್ಪ ಗ್ರೇ ಶೇಡ್ ಕೂಡ ಇದೆಯಂತೆ. ಇದೊಂದು ಆಸಕ್ತಿದಾಯಕ ಪಾತ್ರವಾಗಿದ್ದು, ಭಾವನ ತಮ್ಮ ಪಾತ್ರದ ಬಗ್ಗೆ ಬಹಳ ಉತ್ಸುಕರಾಗಿದ್ದಾರಂತೆ. ಈ ಹಿಂದೆ ಮೂರು ತಮಿಳು ಸಿನಿಮಾವನ್ನು ಭಾವನ ಮಾಡಿದ್ದರು.

  ಜವಾಬ್ದಾರಿ ಜಾಸ್ತಿ ಇದೆ

  ಜವಾಬ್ದಾರಿ ಜಾಸ್ತಿ ಇದೆ

  ಚಿತ್ರದ ಬಗ್ಗೆ ಮಾತನಾಡುತ್ತ ಭಾವನ ''ನನಗೆ ನಟಿಯಾಗಿ ಎಲ್ಲ ಸಿನಿಮಾ ಕೂಡ ಒಂದೇ. ಆದರೆ, ಹಿಂದಿ ಸಿನಿಮಾ ಎಂದಾಗ ದೇಶ ಮಟ್ಟದಲ್ಲಿ ಗುರುತಿಸಿಕೊಳ್ಳಲು ದೊಡ್ಡ ಅವಕಾಶ ಇರುತ್ತದೆ. ಆ ಕಾರಣದಿಂದ ನನಗಿಗಾ ಜವಾಬ್ದಾರಿ ಜಾಸ್ತಿ ಇದೆ.'' ಎಂದಿದ್ದಾರೆ.

  ರಣಬೀರ್ ಕಪೂರ್ ಅಂದ್ರೆ ಇಷ್ಟ

  ರಣಬೀರ್ ಕಪೂರ್ ಅಂದ್ರೆ ಇಷ್ಟ

  ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಭಾವನಗೆ ನಿಮಗೆ ಹಿಂದಿಯಲ್ಲಿ ಯಾವ ನಟ, ನಟಿ ಇಷ್ಟ ಎಂದರೆ ಟಕ್ ಅಂತ ಬಂದೆ ಉತ್ತರ. ರಣಬೀರ್ ಕಪೂರ್. ''ರಣಬೀರ್ ನನ್ನ ಮೆಚ್ಚಿನ ಬಾಲಿವುಡ್ ನಟ. ಅವರು ಬ್ರಿಲಿಯಂಟ್. ಹೀರೋಯಿನ್ ಅಂದರೆ, ಅಲಿಯಾ ಭಟ್, ವಿದ್ಯಾ ಬಾಲನ್ ಹೀಗೆ ತುಂಬ ಜನ ಇದ್ದಾರೆ.'' ಎಂದರು ಭಾವನ.

  ಸದ್ಯದ ಸಿನಿಮಾಗಳು

  ಸದ್ಯದ ಸಿನಿಮಾಗಳು

  ಕನ್ನಡದಲ್ಲಿ ಪ್ರೇಮ್ ನಟನೆಯ 'ಗಾಂಧಿಗಿರಿ' ಸಿನಿಮಾದಲ್ಲಿ ಸಹ ಭಾವನ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್ ಇನ್ನು ಮುಗಿದಿಲ್ಲ. ಇದರ ಜೊತೆಗೆ ಸಂಕ್ರಾತಿ ಸಮಯದಲ್ಲಿ ಅವರ ಮತ್ತೊಂದು ಹೊಸ ಸಿನಿಮಾ ಅನೌನ್ಸ್ ಆಗಲಿದೆಯಂತೆ. ಇದೊಂದು ದೊಡ್ಡ ಸಿನಿಮಾವಂತೆ.

  English summary
  Kannada actress Bhavana Rao making her bollywood debut from 'Bypass Road' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X