»   » ಏನು... 'ಕೆಂಡಸಂಪಿಗೆ' ಬೆಡಗಿ ಮಾನ್ವಿತಾ ಹರೀಶ್ ಮದುವೆಯಾಗ್ಬಿಟ್ರಾ.?

ಏನು... 'ಕೆಂಡಸಂಪಿಗೆ' ಬೆಡಗಿ ಮಾನ್ವಿತಾ ಹರೀಶ್ ಮದುವೆಯಾಗ್ಬಿಟ್ರಾ.?

Posted By:
Subscribe to Filmibeat Kannada
Manvitha Harish got married? Is it true? Watch video | Filmibeat Kannada

ಕಳೆದ ಕೆಲವು ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ನಟಿಮಣಿಯರ ಮದುವೆಯದ್ದೇ ಸುದ್ದಿ ಆಗ್ಬಿಟ್ಟಿದೆ. ರಮ್ಯಾ ಬಾರ್ನಾ ರಹಸ್ಯವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡ್ಕೊಂಡಿದ್ದು... ನಟಿ ಸಿಂಧು ಲೋಕನಾಥ್ ಮಡಿಕೇರಿಯಲ್ಲಿ ಗುಟ್ಟಾಗಿ ಮದುವೆ ಆಗಿದ್ದು ನಿಮಗೆಲ್ಲ ಗೊತ್ತಾಗಿದೆ. ಇದೇ ಗ್ಯಾಪ್ ನಲ್ಲಿ ನಟಿ ಶ್ರುತಿ ಹರಿಹರನ್ ವಿವಾಹವಾದ ಗಾಸಿಪ್ ಕೂಡ ಕಿವಿಗೆ ಬಿದ್ದಿತ್ತು. ಈಗ 'ಕೆಂಡಸಂಪಿಗೆ' ಬೆಡಗಿ ಮಾನ್ವಿತಾ ಹರೀಶ್ ರವರ ಸರದಿ.

'ಕೆಂಡಸಂಪಿಗೆ' ಮಾನ್ವಿತಾ ಈಗ 'ನೀಲಿ ಕಣ್ಣುಗಳ' ಸುಂದರಿ.!

ಕೇಸರಿ ಬಣ್ಣದ ರೇಶ್ಮೆ ಸೀರೆ ಉಟ್ಟು, ಮಲ್ಲಿಗೆ ಹೂ ಮುಡಿದು, ಅಡಿಯಿಂದ ಮುಡಿವರೆಗೆ ಸಿಂಗರಿಸಿಕೊಂಡು ಮದುವಣಗಿತ್ತಿಯಾಗಿ ನಟಿ ಮಾನ್ವಿತಾ ಹರೀಶ್ ಕಂಗೊಳಿಸಿದ್ದಾರೆ.

''ನಟಿ ಮಾನ್ವಿತಾ ಹರೀಶ್ ಕೂಡ ಮದುವೆ ಆಗ್ಬಿಟ್ರಾ.?'' ಅಂತ ಕಣ್ಣು ಬಾಯಿ ಬಿಡುವ ಮೊದಲು ಇದು ಅಪ್ಪಟ ರೀಲ್ ಸುದ್ದಿ ಅನ್ನೋದು ನಿಮಗೆ ನೆನಪಿರಲಿ...

'ಮದುವಣಗಿತ್ತಿ'ಯಾದ ಮಾನ್ವಿತಾ ಹರೀಶ್

'ಮದುವಣಗಿತ್ತಿ'ಯಂತೆ ಸಿಂಗಾರ ಮಾಡಿಕೊಂಡಿರುವ ನಟಿ ಮಾನ್ವಿತಾ ಹರೀಶ್ ಮದುವೆ ಇಂದು ನೆರವೇರಿದೆ. ಆದ್ರೆ, ಅದು ರಿಯಲ್ ಮದುವೆ ಅಲ್ಲ, ಬದಲಾಗಿ ರೀಲ್ ಮದುವೆ.

ಹೊಸ ಕಾರ್ ಉದ್ಘಾಟನೆ ಮಾಡಿದ 'ಕೆಂಡಸಂಪಿಗೆ' ಮಾನ್ವಿತಾ

'ತಾರಕಾಸುರ' ಶೂಟಿಂಗ್

ರಾಜಶೇಖರ್ ಬಂಡಿಯಪ್ಪ ನಿರ್ದೇಶನ ಮಾಡುತ್ತಿರುವ 'ತಾರಕಾಸುರ' ಸಿನಿಮಾದಲ್ಲಿ ನಾಯಕಿ ಆಗಿ ಮಾನ್ವಿತಾ ಹರೀಶ್ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬರುವ ಮದುವೆ ಸನ್ನಿವೇಶದ ಚಿತ್ರೀಕರಣ ಇಂದು ಬೆಂಗಳೂರಿನ ಛತ್ರವೊಂದರಲ್ಲಿ ನಡೆದಿದೆ.

ಮೊದಲ ಬಾರಿಗೆ ಮದುಮಗಳು

ಇಲ್ಲಿಯವರೆಗೂ ನಟಿಸಿರುವ ಚಿತ್ರಗಳ ಪೈಕಿ ಇದೇ ಮೊದಲ ಬಾರಿಗೆ ಮದುಮಗಳಾಗಿ ಮಾನ್ವಿತಾ ಹರೀಶ್ ಕಾಣಿಸಿಕೊಂಡಿದ್ದಾರೆ. ಹೀಗಾಗಿ ''ರಿಯಲ್ ಮದುವೆಗೆ ಇದೊಂಥರಾ ತಯಾರಿ ಇದ್ದ ಹಾಗೆ'' ಎನ್ನುತ್ತಾರೆ ನಟಿ ಮಾನ್ವಿತಾ ಹರೀಶ್.

ನಿಜಜೀವನದಲ್ಲಿ ಮದುವೆ ಯಾವಾಗ.?

ಸದ್ಯಕ್ಕೆ ಚಿತ್ರರಂಗದಲ್ಲಿ ಬಿಜಿಯಾಗಿರುವ ಮಾನ್ವಿತಾ ಹರೀಶ್ ಗೆ ನಿಜವಾಗಿಯೂ ಮದುವೆ ಆಗುವ ಯೋಚನೆ ಸದ್ಯಕ್ಕಿಲ್ಲ. ಮದುವೆ ಮ್ಯಾಟರ್ ಎತ್ತಿದ ಕೂಡಲೆ ನಕ್ಕು ಸುಮ್ಮನ್ನಾಗುತ್ತಾರೆ ನಟಿ ಮಾನ್ವಿತಾ ಹರೀಶ್.

English summary
Kannada Actress Manvitha Harish is playing lead in Kannada Movie 'Taraksura'. Check out Manvitha Harish's marriage sequence shooting pics here.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada