»   » ಮೇಘನಾ ಗಾಂವ್ಕರ್ ಹೇಳಿಕೆಗೆ ಕೈ ಜೋಡಿಸಿದ ರಶ್ಮಿಕಾ.!

ಮೇಘನಾ ಗಾಂವ್ಕರ್ ಹೇಳಿಕೆಗೆ ಕೈ ಜೋಡಿಸಿದ ರಶ್ಮಿಕಾ.!

Posted By:
Subscribe to Filmibeat Kannada

ಬಾಲಿವುಡ್ ಮುದ್ದು ನಟಿ ಆಲಿಯಾ ಭಟ್ ಅಭಿನಯದ 'ರಾಝಿ' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇಂಡಿಯಾ-ಪಾಕಿಸ್ತಾನದ ಕುರಿತು ಸಿನಿಮಾ ಇದಾಗಿದ್ದು, ಬಹಳ ರೋಚಕವಾಗಿ ಚಿತ್ರಕಥೆ ಮಾಡಲಾಗಿದೆ. ರಾಝಿ' ಚಿತ್ರದಲ್ಲಿ ಆಲಿಯಾ ಅಭಿನಯದ ಝಲಕ್ ಕಂಡು ಇಡೀ ಬಾಲಿವುಡ್ ಪ್ರಶಂಸೆ ವ್ಯಕ್ತಪಡಿಸುತ್ತಿದೆ.

ಕೇವಲ ಬಾಲಿವುಡ್ ಮಾತ್ರವಲ್ಲ, ಇತ್ತ ಸ್ಯಾಂಡಲ್ ವುಡ್ ಮಂದಿ ಕೂಡ ಫಿದಾ ಆಗಿದ್ದಾರೆ. ಹೌದು, 'ರಾಝಿ' ಚಿತ್ರದ ಟ್ರೈಲರ್ ನೋಡಿ ಮೆಚ್ಚಿಕೊಂಡಿರುವ ನಟಿ ಮೇಘನಾ ಗಾಂವ್ಕರ್, ಇಂತಹ ಸಿನಿಮಾಗಳು ಕನ್ನಡದಲ್ಲಿ ಬರಲಿ ಎಂಬ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

ಹೌದು, ರಾಝಿ ಟ್ರೈಲರ್ ನೋಡಿ ಟ್ವೀಟ್ ಮಾಡಿರುವ ಮೇಘನಾ ''ನಮ್ಮ ಕನ್ನಡದಲ್ಲೂ ಕೂಡ ಅದ್ಭುತ ಕಥೆಗಳೊಂದಿಗೆ ಮಹಿಳಾ ಪ್ರಧಾನ ಸಿನಿಮಾಗಳನ್ನ ಮಾಡ್ತೀವಿ. ಆ ಭರವಸೆ ನನಗಿದೆ'' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅಪ್ಪ-ಅಮ್ಮನ ಕಣ್ಣಲ್ಲಿ ನೀರು ತರಿಸಿದ ನಟಿ 'ಆಲಿಯಾ ಭಟ್'

ಮೇಘನಾ ಗಾಂವ್ಕರ್ ಅವರ ಈ ಹೇಳಿಕೆಗೆ ಕನ್ನಡದ ಮತ್ತೊಬ್ಬ ನಟಿ ರಶ್ಮಿಕಾ ಮಂದಣ್ಣ ಕೂಡ ಕೈ ಜೋಡಿಸಿದ್ದು, ''ನಾನು ಕೂಡ ಇದಕ್ಕೆ ಒಪ್ಪುತ್ತೇನೆ'' ಎಂದಿದ್ದಾರೆ.

ಸದಾ ಸ್ಟಾರ್ ನಟರ ಕಮರ್ಷಿಯಲ್ ಚಿತ್ರಗಳಲ್ಲಿ ನಾಯಕಿಯರಾಗಿ ಹೀಗೆ ಬಂದು ಹಾಗೆ ಹೋಗುವ ಹೀರೋಯಿನ್ಸ್, ಪೂರ್ಣ ಪ್ರಮಾಣದ ಪಾತ್ರಗಳಿಗಾಗಿ ಕಾಯುತ್ತಿದ್ದಾರೆ. ಹಿಂದಿನಂತೆ ಈಗ ಸ್ಯಾಂಡಲ್ ವುಡ್ ನಲ್ಲಿ ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಿಲ್ಲ. ಇದಕ್ಕೆ ನಾನಾ ಕಾರಣಗಳಿರಬಹುದು. ಆದ್ರೆ, ನಮ್ಮ ನಟಿಯರಿಗೆ ಮಾತ್ರ ಅಂತಹ ಆಸೆ ಇದೆ ಎಂಬುದು ಈ ಟ್ವೀಟ್ ನಿಂದ ಗೊತ್ತಾಗುತ್ತಿದೆ. ಕಾದು ನೋಡೋಣ, ಮುಂದಿನ ದಿನಗಳಲ್ಲಿ ಇಂತಹ ಸಿನಿಮಾಗಳು ಕನ್ನಡದಲ್ಲಿ ಬಂದರು, ಬರಬಹುದು.

English summary
Kannada actress meghana gaonkar has taken her twitter account to appreciate alia bhat starrer raazi movie. raazi movie trailer released and get good response from audience.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X