twitter
    For Quick Alerts
    ALLOW NOTIFICATIONS  
    For Daily Alerts

    KPL ಫಿಕ್ಸಿಂಗ್ ಪ್ರಕರಣ: ನಟಿಯರಿಗೆ ಶಾಕ್ ನೀಡಿದ ಕಮಿಷನರ್ ಭಾಸ್ಕರ್ ರಾವ್

    |

    ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಸದ್ದು ಮಾಡ್ತಿರುವ ಕೆಪಿಎಲ್ ಫಿಕ್ಸಿಂಗ್ ಪ್ರಕರಣ ಸ್ಯಾಂಡಲ್ ವುಡ್ ಪಾಲಿಗೆ ಕಂಟಕವಾಗುವ ಸಾಧ್ಯತೆ ಇದೆ. ಕೆಪಿಎಲ್ ಪಂದ್ಯಗಳಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪದಲ್ಲಿ ಕೆಲವು ಸ್ಟಾರ್ ಆಟಗಾರರು ಮತ್ತು ಕೋಚ್ ಗಳನ್ನು ಬಂಧಿಸಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು.

    ಈ ಪ್ರಕರಣದಲ್ಲಿ ಕನ್ನಡದ ಕೆಲವು ಸ್ಟಾರ್ ನಟಿಯರ ಹೆಸರು ಅಂಟಿಕೊಂಡಿದ್ದು, ಅವರನ್ನು ವಿಚಾರಣೆ ನಡೆಸಬೇಕಾದ ಅಗತ್ಯವಿದೆ ಎಂದು ಸ್ವತಃ ಬೆಂಗಳೂರು ಪೊಲೀಸ್ ಕಮಿಷನರ್ ಈ ಹಿಂದೆ ಅಧಿಕೃತ ಹೇಳಿಕೆ ನೀಡಿದ್ದರು.

    ಕೆಪಿಎಲ್ ಮ್ಯಾಚ್ ಫಿಕ್ಸಿಂಗ್; ಬೆಳಗಾವಿ ಫ್ಯಾಂಥರ್ಸ್ ಕೋಚ್ ಬಂಧನ

    ಇದರಿಂದ ಆತಂಕಗೊಂಡಿರುವ ಆ ನಟಿಯರು ಪೋಲಿಸರನ್ನು ಸಂಪರ್ಕಿಸಿದ್ದು, ಗೌಪ್ಯ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದ್ರೀಗ, ಆ ನಟಿಯರಿಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಶಾಕ್ ನೀಡಿದ್ದಾರೆ. ಏನದು? ಮುಂದೆ ಓದಿ....

    ಗೌಪ್ಯ ವಿಚಾರಣೆ ಸಾಧ್ಯವಿಲ್ಲ

    ಗೌಪ್ಯ ವಿಚಾರಣೆ ಸಾಧ್ಯವಿಲ್ಲ

    ಕೆಪಿಎಲ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾರುವ ಅನುಮಾನದ ಮೇಲೆ ಕೆಲವು ಸಿನಿಮಾ ನಟಿಯರನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಕೆಲವು ನಟಿಯರು ಗೌಪ್ಯವಾಗಿ ವಿಚಾರಣೆ ಮಾಡಿ ಎಂದು ಪೋಲಿಸರನ್ನು ಸಂಪರ್ಕಿಸಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಭಾಸ್ಕರ್ ರಾವ್ ''ಈ ಪ್ರಕರಣದಲ್ಲಿ ಯಾರಿಗೂ ರಿಯಾಯಿತಿ ಇಲ್ಲ. ಸಿಸಿಬಿ ಕಚೇರಿಯಲ್ಲೇ ವಿಚಾರಣೆ ನಡೆಸುತ್ತೇವೆ'' ಎಂದಿದ್ದಾರೆ.

    ಕೆಪಿಎಲ್‌ನಲ್ಲಿ ಫಿಕ್ಸಿಂಗ್; ಇಬ್ಬರು ಆಟಗಾರರು ಸಿಸಿಬಿ ವಶಕ್ಕೆ

    ನೋಟಿಸ್ ಹೋಗಿದ್ಯಾ?

    ನೋಟಿಸ್ ಹೋಗಿದ್ಯಾ?

    ಫಿಕ್ಸಿಂಗ್ ಪ್ರಕರಣದಲ್ಲಿ ಕೆಲವು ಸಿನಿಮಾ ನಟಿಯರು ಭಾಗಿಯಾಗಿರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದರು. ಅಂತಹ ಕೆಲವರ ಅಗತ್ಯ ಬಿದ್ದರೆ ಅವರಿಗೆ ನೋಟಿಸ್ ನೀಡಿದ ವಿಚಾರಣೆ ಮಾಡ್ತೀವಿ ಅಥವಾ ಅವರೇ ತಪ್ಪು ಒಪ್ಪಿಕೊಂಡರೂ ಸ್ವಾಗತ'' ಎಂದು ಪೊಲೀಸರು ಹೇಳಿದ್ದರು. ಆದರೆ, ಆ ನಟಿಯರಿಗೆ ನೋಟಿಸ್ ನೀಡಲಾಗಿದ್ಯಾ? ವಿಚಾರಣೆಗೆ ಯಾರಾದರೂ ಸಿನಿಮಾ ನಟಿಯರು ಒಳಪಡ್ತಾರಾ ಎಂಬುದರ ಬಗ್ಗೆ ಮಾಹಿತಿ ನೀಡಿಲ್ಲ.

    ಯಾರಿರಬಹುದು ಆ ನಟಿಯರು?

    ಯಾರಿರಬಹುದು ಆ ನಟಿಯರು?

    ಕೆಪಿಎಲ್ ಪಂದ್ಯ ಟೂರ್ನಿಗೆ ಸಂಬಂಧಿಸಿದ ಪಾರ್ಟಿ, ಕಾರ್ಯಕ್ರಮಗಳಲ್ಲಿ ತಂಡಗಳ ಜೊತೆ ಗುರುತಿಸಿಕೊಂಡಿದ್ದಾರೆ. ಎರಡ್ಮೂರು ಸಿನಿಮಾ ಮಾಡಿದ್ರೂ ದುಬಾರಿ ಕಾರು ಖರೀದಿಸಿದ್ದಾರೆ. ಕೆಲವರು ರಾಯಭಾರಿಗಳೂ ಆಗಿದ್ದಾರೆ. ಅವರಿಗೂ ಈ ಫಿಕ್ಸಿಂಗ್ ಗೆ ಸಂಬಂಧವಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಆ ನಟಿಯರು ಯಾರು ಎಂದು ಹೇಳಿಲ್ಲ. ಆದರೆ, ಈ ಅಂಶಗಳನ್ನು ಪರಿಗಣಿಸಿದ್ರೆ ಕೆಲವು ನಟಿಯರ ಮೇಲೆ ಅನುಮಾನ ಮೂಡುತ್ತಿದೆ.

    ಕೆಪಿಎಲ್ ಫಿಕ್ಸಿಂಗ್: ಬೆಳಗಾವಿ ಪ್ಯಾಂಥರ್ಸ್ ಕೋಚ್ ಸುಧೀಂದ್ರ ಶಿಂಧೆ ಬಂಧನ

    ನಟಿಯರಿಗೆ ಹೆಚ್ಚಿದ ಆತಂಕ

    ನಟಿಯರಿಗೆ ಹೆಚ್ಚಿದ ಆತಂಕ

    ಒಂದು ವೇಳೆ ಈ ಪ್ರಕರಣದಲ್ಲಿ ನಟಿಯರು ವಿಚಾರಣೆಗೆ ಒಳಪಟ್ಟರೆ ಅಂತವರ ಗೌರವಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ. ಆರೋಪ ಸಾಬೀತಾದರೇ ಬಂಧಿಸುವ ಸಾಧ್ಯತೆಯನ್ನು ಅಲ್ಲೆಗಳೆಯುವಂತಿಲ್ಲ. ಹಾಗಾಗಿ, ಗೌಪ್ಯ ವಿಚಾರಣೆಗೆ ಮನವಿ ಮಾಡಿರಬಹುದು. ಆದರೆ, ಈ ಪ್ರಕರಣವನ್ನ ಪೊಲೀಸರು ಗಂಭೀರವಾಗಿ ಪರಿಗಣಿಸಿರುವುದರಿಂದ ಅನುಮಾನಾಸ್ಪದ ನಟಿಯರಿಗೆ ಸಹಜವಾಗಿ ಆತಂಕ ಹೆಚ್ಚಿದೆ.

    English summary
    Some of the Kannada actresses name noticed in KPL match fixing case. police commissioner bhaskar rao want to enquire that actresses, if necessary.
    Monday, December 16, 2019, 14:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X