»   » ನಟಿ ನಿಖಿತಾ ತುಕ್ರಾಲ್ ಗೆ ಮದುವೆ ಅಂತೆ.! ಗಂಡು ಯಾರು ಗೊತ್ತೇ.?

ನಟಿ ನಿಖಿತಾ ತುಕ್ರಾಲ್ ಗೆ ಮದುವೆ ಅಂತೆ.! ಗಂಡು ಯಾರು ಗೊತ್ತೇ.?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ದಾಂಪತ್ಯ ಕಲಹ ವಿಚಾರದಲ್ಲಿ ನಟಿ ನಿಖಿತಾ ತುಕ್ರಾಲ್ ಹೆಸರು ಗಾಸಿಪ್ ಪಂಡಿತರ ಬಾಯಲ್ಲಿ ನುಲಿದಾಡಿದ್ದು ಎಲ್ಲರಿಗೂ ಗೊತ್ತಿರೋದೇ. ಕಡೆಗೆ 'ನಾನೇನು ಮಾಡ್ಲಿಲ್ಲ' ಅಂತ ಪ್ರೆಸ್ ಮೀಟ್ ನಲ್ಲಿ ಕಣ್ಣೀರು ಹಾಕಿದ್ದ ನಿಖಿತಾ, ಬಳಿಕ ಸ್ಯಾಂಡಲ್ ವುಡ್ ಕಡೆ ಅಷ್ಟಾಗಿ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ.

'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು ಅರ್ಧಂಬರ್ಧ ಕನ್ನಡ ಮಾತಾಡುತ್ತಾ, ಕನ್ನಡ ಕಿರುತೆರೆ ವೀಕ್ಷಕರ ಮನ ಮುಟ್ಟಿದ್ದ ನಿಖಿತಾ ಈಗ ಸಿಹಿ ಸುದ್ದಿ ನೀಡಿದ್ದಾರೆ. [ಕೇಳ್ರಪ್ಪೋ ಕೇಳಿ...ನಟಿ ನಿಖಿತಾ ಜೊತೆ ದರ್ಶನ್ ದರ್ಶನ.!]

ದಸರಾ ಹಬ್ಬದ ಶುಭ ಸಂದರ್ಭದಲ್ಲಿ ನಟಿ ನಿಖಿತಾ ತುಕ್ರಾಲ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನಟಿ ನಿಖಿತಾ ತುಕ್ರಾಲ್ ಕೈ ಹಿಡಿಯುತ್ತಿರುವ ಗಂಡು ಯಾರು ಗೊತ್ತೇ.?

ನಿಖಿತಾ ಮದುವೆ ಆಗುತ್ತಿರುವ ಗಂಡು ಇವರೇ...

ನಟಿ ನಿಖಿತಾ ತುಕ್ರಾಲ್ ಹೊಸ ಬಾಳಿಗೆ ಜೊತೆ ಆಗುತ್ತಿರುವ ಮಧುಮಗ ಇವರೇ...ಹೆಸರು ಗಗನ್ ದೀಪ್ ಸಿಂಗ್ ಮಾಗೋ.

ಗಗನ್ ದೀಪ್ ಸಿಂಗ್ ಮಾಗೋ ಕುರಿತು....

ಮುಂಬೈ ಮೂಲದ ಖ್ಯಾತ ಉದ್ಯಮಿ ಹಾಗೂ ಯೂತ್ ಕಾಂಗ್ರೆಸ್ ನ ಮಾಜಿ ಉಪಾಧ್ಯಕ್ಷ ಮಹಿಂದರ್ ಸಿಂಗ್ ಮಾಗೋ ಪುತ್ರ ಗಗನ್ ದೀಪ್ ಸಿಂಗ್ ಮಾಗೋ.

ಇದು ಲವ್ ಕಮ್ ಅರೇಂಜ್ ಮ್ಯಾರೇಜ್

ನಟಿ ನಿಖಿತಾ ತುಕ್ರಾಲ್ ಹಾಗೂ ಗಗನ್ ದೀಪ್ ಸಿಂಗ್ ಮಾಗೋ ರವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್.

ಲವ್ @ ಫಸ್ಟ್ ಸೈಟ್

''ಕಳೆದ ಡಿಸೆಂಬರ್ ನಲ್ಲಿ ನಮ್ಮ ಸಂಬಂಧಿಯೊಬ್ಬರ ಮದುವೆಯಲ್ಲಿ ನಾನು ಗಗನ್ ದೀಪ್ ರವರನ್ನ ಭೇಟಿ ಮಾಡಿದ್ದು. ಅವರಿಗೆ ನನ್ನನ್ನ ನೋಡಿದ ಕೂಡಲೆ ಲವ್ @ ಫಸ್ಟ್ ಸೈಟ್ ಆಗಿದೆ. ನನ್ನ ಸಹೋದರಿ ಮೂಲಕ ನನ್ನನ್ನ ಮಾತನಾಡಿಸುವ ಪ್ರಯತ್ನ ಪಟ್ಟರು'' ಎನ್ನುತ್ತಾರೆ ನಟಿ ನಿಖಿತಾ ತುಕ್ರಾಲ್.

ಕಷ್ಟಕ್ಕೆ ನೆರವಾದ ಗಗನ್

''ಹಾಗೆ ಮದುವೆಯಲ್ಲಿ ಭೇಟಿ ಆದ ಮೂರು ದಿನಗಳ ನಂತರ ನನ್ನ ತಾಯಿ ಅನಾರೋಗ್ಯಕ್ಕೆ ತುತ್ತಾದರು. ಪಾರ್ಟಿಯೊಂದರಲ್ಲಿ ಇದ್ದ ನಾನು ಆಸ್ಪತ್ರೆಗೆ ಧಾವಿಸಿದೆ. ಆಗ ಗಗನ್ ಕೂಡ ಚೆನ್ನೈ ಇಂದ ನನಗಾಗಿ ವಾಪಸ್ ಬಂದರು. ನನ್ನ ಸಿಂಪಲ್ ನೇಚರ್ ಅವರಿಗೆ ತುಂಬಾ ಇಷ್ಟವಾಯ್ತು. ಹೀಗಾಗಿ, ಅಂದು ಬೆಳ್ಳಗೆ 6 ಗಂಟೆಗೆ ನನ್ನನ್ನು ಪ್ರಪೋಸ್ ಮಾಡಿದರು'' - ನಿಖಿತಾ ತುಕ್ರಾಲ್

ವಜ್ರದ ಉಂಗುರ ಉಡುಗೊರೆ

ಇದೆಲ್ಲ ಆದ ಬಳಿಕ ಮುಂಬೈ ರೆಸ್ಟೋರೆಂಟ್ ಒಂದರಲ್ಲಿ ವಜ್ರದ ಉಂಗುರವನ್ನು ಕಾಣಿಕೆಯಾಗಿ ಕೊಟ್ಟು, ನಿಖಿತಾ ತುಕ್ರಾಲ್ ರವರ ಬಳಿ ಗಗನ್ ದೀಪ್ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.

ಕುಟುಂಬದವರ ಸಮ್ಮತಿ ಇತ್ತು.!

ಇಬ್ಬರ ಜಾತಿ, ಧರ್ಮ ಒಂದೇ ಆದ್ದರಿಂದ ಮದುವೆಗೆ ಎರಡೂ ಕುಟುಂಬಗಳು ಸಮ್ಮತಿ ನೀಡಿದೆ.

ಮದುವೆ ಯಾವಾಗ?

ಮುಂಬೈನ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಇದೇ ಶನಿವಾರ ಹಾಗೂ ಭಾನುವಾರ ನಿಖಿತಾ-ಗಗನ್ ವಿವಾಹ ಮಹೋತ್ಸವ ನಡೆಯಲಿದೆ.

ಯಾರೆಲ್ಲಾ ಬರುತ್ತಾರೆ?

ಸ್ಯಾಂಡಲ್ ವುಡ್, ಟಾಲಿವುಡ್, ಬಾಲಿವುಡ್ ನ ಅನೇಕ ತಾರೆಯರು ನಿಖಿತಾ-ಗಗನ್ ವಿವಾಹಕ್ಕೆ ಸಾಕ್ಷಿಯಾಗಿರಲಿದ್ದಾರೆ.

ಮದುವೆ ನಂತರ ಸಿನಿಮಾ?

ಮದುವೆ ಬಳಿಕ ಆಕ್ಟಿಂಗ್ ಮುಂದುವರಿಸುವ ನಿರ್ಧಾರ ಮಾಡಿದ್ದಾರೆ ನಿಖಿತಾ ತುಕ್ರಾಲ್. ಕನ್ನಡದಲ್ಲಿ 'ರಾಜಾ ಸಿಂಹ' ಸೇರಿದಂತೆ ತೆಲುಗು ಹಾಗೂ ಮಲೆಯಾಳಂನ ಎರಡ್ಮೂರು ಚಿತ್ರಗಳು ನಿಖಿತಾ ಕೈಯಲ್ಲಿವೆ.

ಹನಿ ಮೂನ್ ಪ್ಲಾನ್?

ನಿಖಿತಾ ಮತ್ತು ಗಗನ್ ಹನಿಮೂನ್ ಗಾಗಿ ಬಹಮಾಸ್ ಗೆ ತೆರಳಲಿದ್ದಾರೆ.

English summary
Kannada Actress Nikhita Thukral is getting hitched to Mumbai based Industrialist Gagandeep Singh Mago this weekend. Its a Love cum Arranged marriage.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada