»   » ಚೊಚ್ಚಲ ಚಿತ್ರಕ್ಕೂ ಮುಂಚೆಯೇ 4 ಪ್ರಾಜೆಕ್ಟ್ ಗೆ ಬುಕ್ ಆದ ನಟಿ.!

ಚೊಚ್ಚಲ ಚಿತ್ರಕ್ಕೂ ಮುಂಚೆಯೇ 4 ಪ್ರಾಜೆಕ್ಟ್ ಗೆ ಬುಕ್ ಆದ ನಟಿ.!

Posted By:
Subscribe to Filmibeat Kannada

ಕೆಲವರಿಗೆ ಸಿನಿಮಾ ಮಾಡಿದ್ಮೇಲೆ ಅದೃಷ್ಟ ಬರುತ್ತೆ. ಇನ್ನು ಕೆಲವರಿಗೆ ಸಿನಿಮಾ ಮಾಡೋದಕ್ಕು ಮುಂಚೆಯೇ ಅದೃಷ್ಟ ಖುಲಾಯಿಸುತ್ತೆ. ಸಾಮಾನ್ಯವಾಗಿ ಮೊದಲ ಸಿನಿಮಾ ಸೂಪರ್ ಹಿಟ್ ಆದ್ಮೇಲೆ ಅವರಿಗೆ ಅವಕಾಶಗಳ ಮೇಲೆ ಅವಕಾಶಗಳು ಹುಡುಕಿಕೊಂಡು ಬರುತ್ತೆ.

ಆದ್ರೆ, ಇಲ್ಲೊಬ್ಬ ನಟಿಗೆ ಇನ್ನು ಮೊದಲ ಸಿನಿಮಾನೇ ತೆರೆಕಂಡಿಲ್ಲ. ಅಷ್ಟರಲ್ಲೇ ಮತ್ತೆರೆಡು ಚಿತ್ರಗಳಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದು ಸಹಜವಾಗಿ ಸ್ಯಾಂಡಲ್ ವುಡ್ ನಲ್ಲಿ ಸಂಚಲನ ಸೃಷ್ಠಿಸಿದೆ.

ಕನ್ನಡದ ರಶ್ಮಿಕಾ ಮಂದಣ್ಣ, ಮಲಯಾಳಂನ ಪ್ರಿಯಾ ಪ್ರಕಾಶ್ ವಾರಿಯರ್, 'ಟಗರು' ಚಿತ್ರದ ಕಾನ್ಸ್ ಟೇಬಲ್ ಸರೋಜ ನಂತರ ಸೋಶಿಯಲ್ ಮೀಡಿಯಾದಲ್ಲಿ ನಿಶ್ವಿಕಾ ಹವಾ ಜೋರಾದ್ರೂ ಅಚ್ಚರಿಯಿಲ್ಲ. ಅಷ್ಟಕ್ಕೂ ಯಾರು ಈ ನಿಶ್ವಿಕಾ.? ಯಾವೆಲ್ಲ ಸಿನಿಮಾಗಳಲ್ಲಿ ನಿಶ್ವಿಕಾ ನಟಿಸುತ್ತಿದ್ದಾರೆ. ಮುಂದೆ ಓದಿ....

'ಪಡ್ಡೆಹುಲಿ' ಚಿತ್ರಕ್ಕೆ ನಿಶ್ವಿಕ ನಾಯಕಿ

ಕನ್ನಡದ ಗಂಡುಗಲಿ ನಿರ್ಮಾಪಕ ಕೆ.ಮಂಜು ಅವರ ಪುತ್ರ ಅಭಿನಯದ ಚೊಚ್ಚಲ ಚಿತ್ರಕ್ಕೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಮೊದಲೆರೆಡು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಮುಂಚೆಯೇ ಶ್ರೇಯಸ್ ಅಭಿನಯದ 'ಪಡ್ಡೆಹುಲಿ' ಚಿತ್ರಕ್ಕೆ ನಿಶ್ವಿಕಾ ಎಂಟ್ರಿ ಕೊಟ್ಟಿದ್ದಾರೆ.

'ವಾಸು' ಜೊತೆಯಲ್ಲೂ ನಿಶ್ವಿಕಾ

ಇನ್ನು ನಿಶ್ವಿಕಾ ನಾಯ್ಡು ಅಭಿನಯಿಸುತ್ತಿರುವ ಮೊದಲ ಸಿನಿಮಾ 'ವಾಸು ನಾನ್ ಪಕ್ಕಾ ಕಮರ್ಷಿಯಲ್'. 'ಅಕಿರಾ' ಖ್ಯಾತಿಯ ಅನೀಶ್ ತೇಜಶ್ವರ್ ಅಭಿನಯದ ಈ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಪ್ರವೇಶ ಮಾಡುತ್ತಿದ್ದಾರೆ ನಿಶ್ವಿಕಾ.

ಚಿರು ಚಿತ್ರಕ್ಕೂ ಹೀರೋಯಿನ್

ಇನ್ನು ಚಿರಂಜೀವಿ ಸರ್ಜಾ ಅಭಿನಯಿಸುತ್ತಿರುವ ತಮಿಳಿನ 'ಪಿಚ್ಚಕಾರನ್' ಚಿತ್ರದ ರೀಮೇಕ್ 'ಅಮ್ಮ ಐ ಲವ್ ಯೂ' ಚಿತ್ರಕ್ಕೂ ಇದೇ ನಿಶ್ವಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದು ಇವರ ಎರಡನೇ ಸಿನಿಮಾ ಆಗಿದೆ.

ಚಂದನ್ ಶೆಟ್ಟಿಗೂ ನಾಯಕಿ.!

ಇನ್ನು ‘ಸಂಗಮ', ‘ಜೈ ಭಜರಂಗಬಲಿ' ಸಿನಿಮಾಗಳನ್ನು ನಿರ್ದೇಶಿಸಿದ್ದ ರವಿವರ್ವ ಗುಬ್ಬಿ ಅವರ ಹೊಸ ಪ್ರಾಜೆಕ್ಟ್ ಗೂ ಇದೇ ನಿಶ್ವಿಕಾ ಹೀರೋಯಿನ್ ಆಗಿದ್ದಾರಂತೆ. ಈ ಚಿತ್ರದಲ್ಲಿ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ನಾಯಕರಾಗುವ ಸಾಧ್ಯತೆ ಇದೆ.

ರಶ್ಮಿಕಾರಂತೆ ಮಿಂಚುವ ನಾಯಕಿ ಆಗ್ತಾರ.!

'ಕಿರಿಕ್ ಪಾರ್ಟಿ' ಸಿನಿಮಾದ ನಂತರ ರಶ್ಮಿಕಾ ಮಂದಣ್ಣಗೆ ಅದೃಷ್ಟ ಕೈಹಿಡಿದಿತ್ತು. 'ಅಂಜನಿಪುತ್ರ', 'ಚಮಕ್', ತೆಲುಗಿನ 'ಚಲೋ' ಸಿನಿಮಾಗಳು ತೆರೆಕಂಡವು. ಈಗ ದರ್ಶನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗೆ, ಚೊಚ್ಚಲ ಸಿನಿಮಾದ ನಂತರ ಸ್ಟಾರ್ ನಾಯಕಿಯಾದ ರಶ್ಮಿಕಾ ಅವರಂತೆ ನಿಶ್ವಿಕಾ ಕೂಡ ಮಿಂಚಲಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿದೆ.

ಯಾರು ಈ ನಿಶ್ವಿಕಾ.?

'ನಿಶ್ವಿಕಾ ನಾಯ್ಡು' ಕನ್ನಡದ ಹುಡುಗಿ. ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ಬೆಡಗಿ. ನೋಡಲು ಸಖತ್ ಕ್ಯೂಟ್ ಆಗಿರುವ ಈಕೆ ಈಗಾಗಲೇ ಅನೇಕ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಮುಂಬೈನಲ್ಲಿ ನಟನೆ ತರಬೇತಿ ಮುಗಿಸಿರುವ ನಿಶ್ವಿಕಾ ನಾಯ್ಡು ಅತಿ ಶೀಘ್ರದಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

English summary
She is yet to make her debut, but Nishvika Naidu is already on her third film. The young actress, who will soon be seen in Vasu Naan Pakka Local with Anish Tejeshwar and in Amma I Love You with Chiranjeevi Sarja, has been roped in as the lead in director Guru Deshpande's Paddehuli.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada