For Quick Alerts
  ALLOW NOTIFICATIONS  
  For Daily Alerts

  ಕಿಡಿಗೇಡಿಗಳಿಂದ ಕನ್ನಡ ನಟಿ ನಿವೇದಿತಾಗೆ ಗೋವಾದಲ್ಲಿ ಕೆಟ್ಟ ಅನುಭವ.!

  By Harshitha
  |

  ಕಣ್ಮನ ತಣಿಸುವ ಚೆಲುವಿನ ತಾಣ 'ಗೋವಾ'ಗೆ ಹೋಗಲು ಯಾರು ತಾನೆ ಇಷ್ಟ ಪಡಲ್ಲ ಹೇಳಿ...

  'ಪ್ರವಾಸಿಗರ ಸ್ವರ್ಗ' ಎಂದೇ ಕರೆಯಲ್ಪಡುವ ಗೋವಾದಲ್ಲಿ ಎರಡು ದಿನ ತಂಗಿದ್ದು ಮನಸ್ಸು ಹಗುರ ಮಾಡಿಕೊಳ್ಳಬೇಕು ಎಂದು ಹೊರಟ ಕನ್ನಡ ನಟಿ ನಿವೇದಿತಾಗೆ ಕೆಟ್ಟ ಅನುಭವ ಆಗಿದೆ. ಕಿಡಿಗೇಡಿಗಳ ಅನುಚಿತ ವರ್ತನೆಯಿಂದ ಕನ್ನಡತಿ ನಿವೇದಿತಾ ಮನಸ್ಸು ಘಾಸಿಗೊಂಡಿದೆ.

  ಗೋವಾದಲ್ಲಿ ನಿವೇದಿತಾಗೆ ಏನಾಯ್ತು.?

  ಗೋವಾದಲ್ಲಿ ನಿವೇದಿತಾಗೆ ಏನಾಯ್ತು.?

  ಶೂಟಿಂಗ್ ಮುಗಿಸಿದ ಮೇಲೆ ನಿವೇದಿತಾ ಗೋವಾಗೆ ತೆರಳಿದ್ದರು. ಅಲ್ಲಿ ಅವರು ತಮ್ಮ ಬಾಯ್ ಫ್ರೆಂಡ್ ನ ಮೀಟ್ ಮಾಡಬೇಕಿತ್ತು. ಆದ್ರೆ, ಏಕಾಂತದಲ್ಲಿ ಇರಲು ಬಯಸಿದ ನಿವೇದಿತಾ, ತಮ್ಮ ಬಾಯ್ ಫ್ರೆಂಡ್ ನ ಎರಡು ದಿನಗಳ ನಂತರ ಗೋವಾಗೆ ಬರಲು ಹೇಳಿದ್ದರಂತೆ.[ಗ್ಲಾಮರಸ್, ಡೀಗ್ಲಾಮರಸ್ ನಲ್ಲಿ ನಂಬಿಕೆ ಇಲ್ಲ: ನಿವೇದಿತಾ]

  ಗೋವಾಗೆ ಕಾಲಿಟ್ಟ ರಾತ್ರಿ...

  ಗೋವಾಗೆ ಕಾಲಿಟ್ಟ ರಾತ್ರಿ...

  ಅಂದು ರಾತ್ರಿ 9 ಗಂಟೆಗೆ ಬೀಚ್ ಸೈಡ್ ನಲ್ಲಿ ನಿವೇದಿತಾ ನಡೆದಾಡುತ್ತಿದ್ದರು. ಆಗ ನಿವೇದಿತಾ ಬಳಿ ಹುಡುಗರು ಅನುಚಿತವಾಗಿ ವರ್ತಿಸಿದ್ದಾರೆ. ಕೆಟ್ಟ ಕಾಮೆಂಟ್ಸ್ ಮಾಡುವುದರ ಜೊತೆಗೆ ಫಾಲೋ ಮಾಡಿ ಅಸಭ್ಯ ವರ್ತನೆ ತೋರಿದ್ದಾರೆ.[ಮೊನ್ನೆ ಹರಿಪ್ರಿಯಾ, ಇಂದು ಅನುಶ್ರೀ...ನಟಿಯರ ಪಾಡು ಯಾಕ್ ಕೇಳ್ತೀರಾ?]

  ನಿವೇದಿತಾ ಮಾಡಿದ್ದೇನು.?

  ನಿವೇದಿತಾ ಮಾಡಿದ್ದೇನು.?

  ಹುಡುಗರ ಗುಂಪೇ ಹಿಂದೆ ಬಿದ್ದಿದ್ರಿಂದ, ಪಕ್ಕದಲ್ಲೇ ಇದ್ದ ಹೋಟೆಲ್ ಒಂದರ ಒಳಕ್ಕೆ ನುಗ್ಗಿ, ಅಲ್ಲಿನ ಸರ್ವರ್ ಒಬ್ಬರ ಸಹಾಯ ಪಡೆದು ತಮ್ಮ ಹೋಟೆಲ್ ನತ್ತ ನಿವೇದಿತಾ ಹೆಜ್ಜೆ ಹಾಕಿದ್ರಂತೆ.

  ಘಟನೆ ಆದ ಬಳಿಕ...

  ಘಟನೆ ಆದ ಬಳಿಕ...

  ಈ ಘಟನೆ ಆದ ಕೂಡಲೆ ತಮ್ಮ ಬಾಯ್ ಫ್ರೆಂಡ್ ಗೆ ಫೋನ್ ಮಾಡಿ, ತಕ್ಷಣ ಗೋವಾಗೆ ಹೊರಟು ಬರುವಂತೆ ನಿವೇದಿತಾ ಕೇಳಿಕೊಂಡರಂತೆ.

  ನಿವೇದಿತಾ ಮನಸ್ಸಿಗೆ ಘಾಸಿ

  ನಿವೇದಿತಾ ಮನಸ್ಸಿಗೆ ಘಾಸಿ

  ಕಿಡಿಗೇಡಿಗಳ ದುರ್ವರ್ತನೆಯಿಂದ ನಿವೇದಿತಾ ಬೇಸರಗೊಂಡಿದ್ದಾರೆ.

  ನಿವೇದಿತಾ ಕುರಿತು...

  ನಿವೇದಿತಾ ಕುರಿತು...

  'ಅವ್ವ', 'ಡಿಸೆಂಬರ್ 1', 'ಕಿಲಾಡಿ ಕಿಟ್ಟಿ' ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ನಿವೇದಿತಾ ಅಭಿನಯಿಸಿದ್ದಾರೆ. 'ಅವ್ವ' ಚಿತ್ರದಲ್ಲಿನ ಅಭಿನಯಕ್ಕಾಗಿ (ಪೋಷಕ ಪಾತ್ರಕ್ಕೆ) ಹಾಗೂ 'ಡಿಸೆಂಬರ್ 1' ಚಿತ್ರದ ನಟನೆಗಾಗಿ (ನಾಯಕಿ) ನಿವೇದಿತಾ ರಾಜ್ಯ ಪ್ರಶಸ್ತಿ ಗಳಿಸಿಕೊಂಡಿದ್ದಾರೆ.

  English summary
  Kannada Actress Niveditha was harassed in Goa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X