»   » ಬೀದಿ ನಾಯಿಗಳ ದಾಳಿಯಿಂದ ಆಸ್ಪತ್ರೆ ಸೇರಿದ್ದ ಪಾರುಲ್ ಡಿಸ್ಚಾರ್ಜ್!

ಬೀದಿ ನಾಯಿಗಳ ದಾಳಿಯಿಂದ ಆಸ್ಪತ್ರೆ ಸೇರಿದ್ದ ಪಾರುಲ್ ಡಿಸ್ಚಾರ್ಜ್!

Posted By:
Subscribe to Filmibeat Kannada

ಕನ್ನಡ ನಟಿ ಪಾರುಲ್ ಯಾದವ್ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದ ಘಟನೆ ಇತ್ತಿಷೆಗಷ್ಟೇ ಮುಂಬೈನಲ್ಲಿ ನಡೆದಿತ್ತು. ವಾಕಿಂಗ್ ಮಾಡುತ್ತಿದ್ದ ವೇಳೆ ಏಕಕಾಲಕ್ಕೆ ಐದು ನಾಯಿಗಳು ದಾಳಿ ಮಾಡಿದ್ರಿಂದ ಪಾರುಲ್ ಅವರ ತಲೆ, ಕೈ ಮತ್ತು ಬಲಗಾಲಿಗೆ ಗಂಭೀರ ಪೆಟ್ಟಾಗಿತ್ತು. ನಂತರ ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಾಗಿದ್ದರು.['ಪ್ಯಾರ್ಗೆ' ಪಾರುಲ್ ಮೇಲೆ ಬೀದಿ ನಾಯಿಗಳ ಅಟ್ಟಹಾಸ.! ]

ಚಿಕಿತ್ಸೆ ನಂತರ ಚೇತರಿಸಿಕೊಂಡಿರುವ ನಟಿ ಪಾರುಲ್ ಯಾದವ್ ಇದೀಗ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ವಾಪಾಸ್ಸಾಗಿದ್ದಾರೆ. ವೈದ್ಯರು ತಲೆಗೆ 8 ಹೊಲಿಗೆ ಹಾಕಿದ್ದು, ಕೈ ಕಾಲಿಗೂ ಹೊಲಿಗೆ ಹಾಕಲಾಗಿದೆಯಂತೆ. ಕಾಲಿನಲ್ಲಿ ಮೂರು ಇಂಚು ಡೀಪ್ ಆಗಿ ಕಚ್ಚಿದ್ದವು. ಡಾಕ್ಟರ್ ತಲೆ ಕೂದಲನ್ನ ತೆಗೆಯದೆ ಹಾಗೆ ಸ್ಟಿಚ್ ಮಾಡಿದ್ದಾರಂತೆ. ಗಾಯದ ಕಲೆಗಳು ಕಾಣದ ಇರಲಿ ಎಂದು ಪ್ಲಾಸ್ಟಿಕ್ ಸರ್ಜರಿ ಕೂಡ ಮಾಡಲಾಗಿದೆಯಂತೆ.

Kannada Actress Parul Yadav Discharge From hospital

ಈ ಬಗ್ಗೆ ಸ್ವತಃ ಪಾರುಲ್ ಯಾದವ್ ಅವರೇ, ಟ್ವೀಟ್ ಮಾಡಿದ್ದು, ''ನಾನು ಆರೋಗ್ಯವಾಗಿದ್ದೀನಿ. ಆದಷ್ಟೂ ಬೇಗ ನನ್ನ ಕೆಲಸಗಳಲ್ಲಿ ತೊಡಗಿಕೊಳ್ಳುತ್ತೇನೆ. ನನ್ನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಆಗಮಿಸಿದ್ದ, ಹಾಗೂ ನನ್ನ ಆರೋಗ್ಯ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ಧನ್ಯವಾದಗಳು'' ಎಂದು ಟ್ವೀಟ್ ಮಾಡಿದ್ದಾರೆ.

ಘಟನೆ ಹಿನ್ನಲೆ: ಮುಂಬೈನ ಜೋಗೀಶ್ವರ್ ಬೀದಿಯಲ್ಲಿ ಇರುವ ತಮ್ಮ ಅಪಾರ್ಟ್ಮೆಂಟ್ ಸುತ್ತ ಮುತ್ತ ನಟಿ ಪಾರುಲ್ ಯಾದವ್ ಜನವರಿ 23 ರಂದು (ಸೋಮವಾರ) ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದರು. ಆಗ ಪಾರುಲ್ ಜೊತೆ ಅವರ ಸಾಕು ನಾಯಿ ಕೂಡ ಇತ್ತು. ಇದ್ದಕ್ಕಿದ್ದಂತೆ ಪಾರುಲ್ ಯಾದವ್ ಮೇಲೆ ಐದು ಬೀದಿ ನಾಯಿಗಳು ಎರಗಿವೆ. ಏಕಕಾಲಕ್ಕೆ ಐದು ನಾಯಿಗಳು ದಾಳಿ ಮಾಡಿತ್ತು.

English summary
Five Stray Dogs Attacked Kannada Actress Parul Yadav on Janauary 23 in Mumbai. Now She get Recovery and Discharge From hospital

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada