»   » ಸಾಹಸ ಮಾಡಲು ಹೋಗಿ ಪೆಟ್ಟು ಮಾಡಿಕೊಂಡ ಪಾರುಲ್

ಸಾಹಸ ಮಾಡಲು ಹೋಗಿ ಪೆಟ್ಟು ಮಾಡಿಕೊಂಡ ಪಾರುಲ್

Posted By:
Subscribe to Filmibeat Kannada

ಪ್ಯಾರ್ಗೆ ಆಗ್ಬುಟ್ಟೈತೆ ಹುಡುಗಿಗೆ ಕಾಲಿನ ಬೆರಳು ಫ್ರ್ಯಾಕ್ಚರ್ ಆಗಿಬಿಟ್ಟಿದೆಯಂತೆ. ಅಯ್ಯೋ ಪಾಪ ಅಲ್ವಾ.

ಯಾಕೆ ಏನಾಯ್ತು ಅನ್ಕೊಂಡ್ರ, ಅದೇ ರಾಮ್ ಗೋಪಾಲ್ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಶೂಟಿಂಗ್ ಸಮಯದಲ್ಲಿ ನಟಿ ಪಾರುಲ್ ಯಾದವ್ ಬಿದ್ದು ಕಾಲಿನ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ.

ಈಗಾಗಲೇ ಖ್ಯಾತ ತೆಲುಗು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆಯುತ್ತಿದ್ದು, ಸದ್ಯಕ್ಕೆ ವೈಜಾಗ್ ನಲ್ಲಿ ಚಿತ್ರತಂಡ ಬೀಡು ಬಿಟ್ಟಿದೆ.[ಕುತೂಹಲ ಹುಟ್ಟಿಸಿದ 'ಕಿಲ್ಲಿಂಗ್ ವೀರಪ್ಪನ್' ಪೋಸ್ಟರ್]

Parul Yadav

ಇದೀಗ ವೈಜಾಗ್ ನಲ್ಲಿ ಸ್ಟಂಟ್ ಮಾಡುವ ದೃಶ್ಯವೊಂದರ ಶೂಟಿಂಗ್ ಮಾಡುವ ಸಂದರ್ಭದಲ್ಲಿ ಪಾರುಲ್ ಯಾದವ್ ಅವರ ಕಾಲಿನ ಹೆಬ್ಬೆರಳಿಗೆ ತೀವ್ರ ಪೆಟ್ಟಾಗಿದೆ. ಈ ಬಗ್ಗೆ ಪಾರುಲ್ ಯಾದವ್ ತಮ್ಮ ಮೈಕ್ರೋ ಬ್ಲಾಗಿಂಗ್ ತಾಣವಾದ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.[ವೀರಪ್ಪನ್ ಕೊಲ್ಲೋಕೆ ಶಿವರಾಜ್ ಕುಮಾರ್ ಸಿದ್ಧ]

ಈಗಾಗಲೇ 'ಜೆಸ್ಸಿ' ಚಿತ್ರದ ಫಸ್ಟ್ ಶೆಡ್ಯೂಲ್ ಶೂಟಿಂಗ್ ಊಟಿಯಲ್ಲಿ ಮುಗಿಸಿ ಬಂದಿರುವ ಪಾರುಲ್ ಯಾದವ್ ವರ್ಮಾ ಅವರ 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಶೂಟಿಂಗ್ ಗೆ ವೈಜಾಗ್ ನಲ್ಲಿ ಹಾಜರಾಗಿದ್ದರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿರುವ 'ಕಿಲ್ಲಿಂಗ್ ವಿರಪ್ಪನ್' ಚಿತ್ರದಲ್ಲಿ ಪಾರುಲ್ ಯಾದವ್ ಶಿವಣ್ಣನಿಗೆ ಜೋಡಿಯಾಗಿ ವಿಶಿಷ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.['ಕಿಲ್ಲಿಂಗ್ ವೀರಪ್ಪನ್'ನಲ್ಲಿ ಭಟ್ರ ಶಿಷ್ಯ 'ದ್ಯಾವ್ರೇ' ಗಡ್ಡಾ ವಿಜಿ]

ಇನ್ನುಳಿದಂತೆ ಸಂದೀಪ್ ಭಾರದ್ವಾಜ್, ಸಂಚಾರಿ ವಿಜಯ್, ಯಜ್ಞಾ ಶೆಟ್ಟಿ, ನಿರ್ದೇಶಕ ಗಡ್ಡಾ ವಿಜಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

ಒಟ್ನಲ್ಲಿ ನಮ್ಮ ಪ್ಯಾರ್ಗೆ ಆಗ್ಬುಟ್ಟೈತೆ ಹುಡುಗಿಯ ಕಾಲು ಆದಷ್ಟು ಬೇಗ ಸರಿ ಹೋಗಿ ಮತ್ತೆ ಶೂಟಿಂಗ್ ನಲ್ಲಿ ಹಾಜರಾಗಲಿ ಅಂತಾ ನಾವು ಶುಭ ಹಾರೈಸೋಣ ಅಲ್ವಾ, ನೀವೇನಂತೀರಾ.

English summary
Kannada actress Parul Yadav got injured while shooting for her new film 'Killing Veerappan'. Kannada actor Shiva Rajkumar, Kannada Actress Parul Yadav, Yagna Shetty in the lead role. The movie is directed by Ram Gopal Varma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada