»   » ನಟಿ ಪ್ರಣೀತಾ ಸುಭಾಷ್ ಮನೆಗೆ ಬಂತು ಹೊಸ ಕಾರು.!

ನಟಿ ಪ್ರಣೀತಾ ಸುಭಾಷ್ ಮನೆಗೆ ಬಂತು ಹೊಸ ಕಾರು.!

Posted By:
Subscribe to Filmibeat Kannada

'ಪೊರ್ಕಿ', 'ಬ್ರಹ್ಮ', 'ಜಗ್ಗು ದಾದಾ', 'ಮಾಸ್ ಲೀಡರ್' ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಪ್ರಣೀತಾ ಸುಭಾಸ್ ಮನೆಗೆ ಹೊಸ ಕಾರು ಬಂದು ನಿಂತಿದೆ.

ಸ್ಯಾಂಡಲ್ ವುಡ್ ಮಾತ್ರವಲ್ಲದೇ, ಟಾಲಿವುಡ್, ಕಾಲಿವುಡ್ ಮತ್ತು ಮಾಲಿವುಡ್ ನಲ್ಲಿಯೂ ಜನಪ್ರಿಯತೆ ಗಳಿಸಿರುವ ನಟಿ ಪ್ರಣೀತಾ ಸುಭಾಷ್ ಮಿನಿ ಕೂಪರ್ ಕಾರು ಖರೀದಿಸಿದ್ದಾರೆ.

ನಟಿ ಪ್ರಣೀತಾ ತುಟಿಗೆ ತುಟಿ ಒತ್ತಿದ ಈ ನಟನ್ಯಾರು?

Kannada Actress Pranitha Subhash bought new Mini cooper car

ಕೆಂಪು ಹಾಗೂ ಕಪ್ಪು ಬಣ್ಣ ಮಿಶ್ರಿತ ಮಿನಿ ಕೂಪರ್ ಕಾರು ಖರೀದಿಸಿರುವ ಬಗ್ಗೆ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ನಟಿ ಪ್ರಣೀತಾ ಸುಭಾಷ್ ಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

'ಕತಾರ್'ನಲ್ಲಿ ಪ್ರಣಿತಾ ಜೊತೆ ಹ್ಯಾಟ್ರಿಕ್ ಹೀರೋ ಡ್ಯುಯೆಟ್

ನಟಿ ಪ್ರಣೀತಾ ಸುಭಾಷ್ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮಾಸ್ ಲೀಡರ್' ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆ ಆಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿತ್ತು. ಸದ್ಯ ಎರಡು ಮಲಯಾಳಂ ಸಿನಿಮಾಗಳಲ್ಲಿ ಪ್ರಣೀತಾ ಸುಭಾಷ್ ಅಭಿನಯಿಸುತ್ತಿದ್ದಾರೆ.

English summary
In picture: Kannada Actress Pranitha Subhash bought new Mini cooper car.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada