For Quick Alerts
  ALLOW NOTIFICATIONS  
  For Daily Alerts

  ಮದುವೆ ಬಂಧನಕ್ಕೊಳಗಾದ 'ಬಿಂದಾಸ್ ಹುಡುಗಿ' ನಟಿ ಪ್ರಿಯಾ ಹಾಸನ್

  By Suneetha
  |

  ಸ್ಯಾಂಡಲ್ ವುಡ್ ನ ಹೆಚ್ಚಿನ ನಟ-ನಟಿಯರು ಒಂಟಿ ಜೀವನಕ್ಕೆ ಬಾಯ್ ಬಾಯ್ ಹೇಳಿ, ಜಂಟಿಯಾಗಲು ಹಾತೊರೆಯುತ್ತಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್ ಜಂಟಿಯಾಗುತ್ತಿರುವ ಬೆನ್ನಲ್ಲೆ, ರಾಕ್ ಸ್ಟಾರ್ ಆರ್.ಜೆ ರೋಹಿತ್ ಅವರು ಕೂಡ ಮದುವೆ ಆಗುವ ಮನಸ್ಸು ಮಾಡಿದ್ದಾರೆ.

  ಇದೀಗ 'ಜಂಬದ ಹುಡುಗಿ' ಚಿತ್ರದ ಖ್ಯಾತಿಯ ನಟಿ ಪ್ರಿಯಾ ಹಾಸನ್ ಅವರು ಕೂಡ ಇಂದು (ಸೆಪ್ಟೆಂಬರ್ 8) ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. 'ಸಂಸಾರ' ಎಂಬ ಹೊಸ ಪಾತ್ರವನ್ನು ನಿಜ ಜೀವನದಲ್ಲಿ ಮಾಡಲು ಪ್ರಿಯಾ ಅವರು ಎಲ್ಲಾ ತಯಾರಿ ನಡೆಸುತ್ತಿದ್ದಾರೆ.[ಪ್ರಿಯಾ ಹಾಸನ್ ಒಂಟಿ ಬಾಳಲ್ಲಿ ಬಂದವನ್ಯಾರು?]

  ಅಂದಹಾಗೆ ಜೂನಿಯರ್ ಮಾಲಾಶ್ರೀ ಅಂತಾನೇ ಕರೆಸಿಕೊಳ್ಳುತ್ತಿದ್ದ 'ಜಂಬದ ಹುಡುಗಿ'ಯ ಕತ್ತಿಗೆ ತಾಳಿ ಬಿಗಿಯೋ, ಆ ಸುರ ಸುಂದರಾಂಗ ಯಾರು ಅಂತ ನೋಡಲು, ಮುಂದೆ ಓದಿ....

  Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ

  'ಬಿಂದಾಸ್ ಹುಡುಗಿ' ಕನಸಿನ ರಾಜ ಇವರೆ

  'ಬಿಂದಾಸ್ ಹುಡುಗಿ' ಕನಸಿನ ರಾಜ ಇವರೆ

  'ಬಿಂದಾಸ್ ಹುಡುಗಿ' ಚಿತ್ರದಲ್ಲಿ ಸೂಪರ್ ಕಾಪ್ ಆಗಿ ಮಾಲಾಶ್ರೀ ಅವರ ತರಾನೇ ಫೈಟ್ ಮಾಡಿ, ಜೂನಿಯರ್ ಮಾಲಾಶ್ರೀ ಎನಿಸಿಕೊಂಡಿದ್ದ ನಟಿ ಪ್ರಿಯಾ ಹಾಸನ್ ಅವರ ಕೈ ಹಿಡಿಯುವ ಸುರ ಸುಂದರಾಂಗ ಎಸ್ ರಾಮು ಎಂಬುವವರು.[ಸೌತ್ ಸೂಪರ್ ಸ್ಟಾರ್ ಕಾಲೆಳೆದರೇ ಪ್ರಿಯಾ ಹಾಸನ್?]

  ರಿಯಲ್ ಎಸ್ಟೇಟ್ ಉದ್ಯಮಿ

  ರಿಯಲ್ ಎಸ್ಟೇಟ್ ಉದ್ಯಮಿ

  ಪ್ರಿಯಾ ಹಾಸನ್ ಕೈ ಹಿಡಿಯುತ್ತಿರುವ ಎಸ್ ರಾಮು ಅವರು ಮೂಲತಃ ರಿಯಲ್ ಎಸ್ಟೇಟ್ ಉದ್ಯಮಿ. ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ವಾಸವಾಗಿದ್ದಾರೆ.[ತೆಲುಗು ಚಿತ್ರದಲ್ಲಿ ಜಂಭದ ಹುಡುಗಿ ಪ್ರಿಯಾ ಹಾಸನ್]

  ಲವ್ ಕಮ್ ಆರೇಂಜ್

  ಲವ್ ಕಮ್ ಆರೇಂಜ್

  ಕೆಲವು ತಿಂಗಳುಗಳ ಹಿಂದೆ ಟಿ ಪ್ರಿಯಾ ಹಾಸನ್ ಮತ್ತು ರಾಮು ಅವರಿಗೆ ಪರಿಚಯವಾಗಿ, ಸ್ನೇಹವಾಗಿತ್ತು. ಇದೀಗ ಎರಡು ಕುಟುಂಬದ ಸಮ್ಮತಿಯ ಮೇರೆಗೆ ಮದುವೆಯಾಗುತ್ತಿದ್ದಾರೆ.[ಬಿಂದಾಸ್ ಹುಡುಗಿ ಪ್ರಿಯಾ ಹಾಸನ್ ಈಗ ಸ್ಮಗ್ಲರ್]

  ಸಿಂಪಲ್ ಮದುವೆ

  ಸಿಂಪಲ್ ಮದುವೆ

  ಎಲ್ಲವೂ ತರಾ-ತುರಿಯಲ್ಲಿ ನಡೆದ ಕಾರಣ ಯಾರಿಗೂ ಹೇಳಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಪ್ರಿಯಾ ಅವರು. ಇಂದು (ಸೆಪ್ಟೆಂಬರ್ 8) ಬೆಳಗ್ಗೆ ಯಶವಂತಪುರದಲ್ಲಿರುವ ಗಾಯತ್ರಿ ದೇವಸ್ಥಾನದಲ್ಲಿ, ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ರಾಮು ಮತ್ತು ಪ್ರಿಯಾ ಅವರ ವಿವಾಹ ಬಹಳ ಸರಳವಾಗಿ ನಡೆಯಲಿದೆ.

  ಸೆಪ್ಟೆಂಬರ್ 13 ಅದ್ಧೂರಿ ಕಾರ್ಯಕ್ರಮ

  ಸೆಪ್ಟೆಂಬರ್ 13 ಅದ್ಧೂರಿ ಕಾರ್ಯಕ್ರಮ

  ಇನ್ನು ಪ್ರಿಯಾ ಅವರು ಹೇಳದೇ-ಕೇಳದೆ ಮದುವೆಯಾಗುತ್ತಿದ್ದಾರೆ ಎಂಬ ಪ್ರಶ್ನೆ ಬರೋದು ಬೇಡ. ಸೆಪ್ಟೆಂಬರ್ 13ರಂದು ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಆ ದಿನ ಇಡೀ ಕನ್ನಡ ಚಿತ್ರರಂಗದ ಗಣ್ಯರು ಭಾಗವಹಿಸುವ ಸಂಭವ ಇದೆ.

  ಪ್ರಿಯಾ ಹಾಸನ್ ಕುರಿತು ಒಂಚೂರು...

  ಪ್ರಿಯಾ ಹಾಸನ್ ಕುರಿತು ಒಂಚೂರು...

  'ಬಿಂದಾಸ್ ಹುಡುಗಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಖ್ಯಾತಿ ಗಳಿಸಿದ ನಟಿ ಪ್ರಿಯಾ ಹಾಸನ್, ತದನಂತರ ಶ್ರೀ ವಾಸವಿ ವೈಭವಮ್ ತೆಲುಗು ಚಿತ್ರದಲ್ಲಿ ಮಿಂಚಿದರು. ನಂತರ 'ಸ್ಮಗ್ಲರ್', 'ಗಂಡು ಬೀರಿ', ಮತ್ತು ರೌಡಿ ರಾಣಿ ಚಿತ್ರದಲ್ಲಿ ನಟಿಸಿ ನಾಪತ್ತೆಯಾದರು.

  English summary
  'Jambada Hudugi' fme Kannada Actress-Producer Priya Hassan is getting married to S Ramu Today (8th September).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X