For Quick Alerts
  ALLOW NOTIFICATIONS  
  For Daily Alerts

  ಇಂದಿನಿಂದ ತುಪ್ಪದ ಬೆಡಗಿ ರಾಗಿಣಿ ಸಿಎಂ

  By Suneetha
  |

  ತುಪ್ಪದ ಬೆಡಗಿ ರಾಗಿಣಿ 'ಪರಪಂಚ' ಮುಗಿಸಿ ಇದೀಗ 'ನಾನೇ ನೆಕ್ಸ್ಟ್ ಸಿ.ಎಂ' ಆಂತ ಎಲ್ಲೆಡೆ ಪ್ರಚಾರ ಮಾಡುತ್ತಿದ್ದಾರೆ.

  ಅಂದಹಾಗೆ ಇವರು ಯಾವಾಗ ಸಿ.ಎಂ ಆದ್ರು ಅಂತ ನೀವು ಯೋಚನೆ ಮಾಡುತ್ತಿದ್ದೀರಾ, ಇವರು ಸಿ.ಎಂ ಆಗಿಲ್ಲ ಬದಲಾಗಿ ಅವರ ಹೊಸ ಚಿತ್ರ 'ನಾನೇ' ನೆಕ್ಸ್ಟ್ ಸಿ.ಎಂ ಎನ್ನುವ ಅಡಿಬರಹದಲ್ಲಿ ಬರುತ್ತಿರುವ ರಾಗಿಣಿ ಚಿತ್ರ ಸದ್ಯದಲ್ಲೇ ಸೆಟ್ಟೇರುತ್ತಿದೆ.

  ತುಪ್ಪ ಬೇಕಾ ತುಪ್ಪ ಅಂತ ಇಡೀ ಗಾಂಧಿನಗರದ ತುಂಬೆಲ್ಲಾ ತುಪ್ಪ ಹಂಚಿದ ನಮ್ಮ ರಾಗಿಣಿ 'ಅಮ್ಮ', 'ರಣಚಂಡಿ'. 'ರಾಗಿಣಿ ಐ.ಪಿ.ಎಸ್' ಚಿತ್ರಗಳ ನಂತರ ಇದೀಗ 'ನಾನೇ' ಅಂತ ನೆಕ್ಸ್ಟ್ ಸಿ.ಎಂ ಆಗೋಕೆ ಹೊರಟಿದ್ದಾರೆ.

  ಮೈಸೂರು ಪ್ರೀಮಿಯಂ ಸ್ಟುಡಿಯೋ ಅರ್ಪಿಸುವ 'ನಾನೇ' ನೆಕ್ಸ್ಟ್ ಸಿ.ಎಂ ಆಗಸ್ಟ್ 20 ರಂದು ಮೈಸೂರಿನಲ್ಲಿ ಸೆಟ್ಟೇರುತ್ತಿದೆ. ರಾಗಿಣಿ ದ್ವಿವೇದಿ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ ಚಿತ್ರದಲ್ಲಿ ನಾಯಕಿಗೆ ಪ್ರಧಾನ ಪಾತ್ರ.

  ನಿರ್ದೇಶಕ 'ಮುಸ್ಸಂಜೆ ಮಾತು' ಖ್ಯಾತಿಮಹೇಶ್ ಆಕ್ಷನ್-ಕಟ್ ಹೇಳುತ್ತಿರುವ ಚಿತ್ರದಲ್ಲಿ ದೇವರಾಜ್, ಶ್ರೀನಿವಾಸಮೂರ್ತಿ, ಮೈಕ್ರೋ ನಾಗಾರಾಜ್, ಪದ್ಮವಾಸಂತಿ, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ರಮೇಶ್ ಭಟ್, ರಂಗಾಯಣ ರಘು, ಮುಂತಾದವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

  ಚಿತ್ರಕ್ಕೆ ಕಥೆ-ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ನಿರ್ದೇಶಕ ಮಹೇಶ್ ವಹಿಸಿಕೊಂಡಿದ್ದು, ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ.

  ಒಟ್ಟಿನಲ್ಲಿ ಗ್ಲಾಮರ್ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸೌಂಡ್ ಮಾಡಿರುವ ರಾಗಿಣಿ ಅವರು ಈ ಚಿತ್ರದ ಮೂಲಕನಾದ್ರೂ ಗಾಂಧಿನಗರದಲ್ಲಿ ಯಶಸ್ಸು ಗಳಿಸುತ್ತಾರ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

  English summary
  Ragini's new film 'Naane CM' being directed by 'Mussanje Maathu' Mahesh is all set to be launched on the 20th of August in Mysuru(mysore).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X