twitter
    For Quick Alerts
    ALLOW NOTIFICATIONS  
    For Daily Alerts

    ರಮ್ಯಾ ಸಾಕುತಂದೆ ನಾರಾಯಣ್ ಬಗ್ಗೆ ಮತ್ತಿಷ್ಟು ಮಾಹಿತಿ

    By Srinath
    |

    ಮೈಸೂರು, ಆಗಸ್ಟ್ 5: ಹೃದಯಾಘಾತದಿಂದ ಶನಿವಾರ ಹಠಾತ್ ವಿಧಿವಶರಾದ ನಟಿ ರಮ್ಯಾ ಅವರ ಸಾಕು ತಂದೆ ಆರ್ ಟಿ ನಾರಾಯಣ್ ಅವರ ಅಂತ್ಯಕ್ರಿಯೆ ಮೈಸೂರಿನ ನಗರದ ಗೋಕುಲಂನ ಚಿರಶಾಂತಿಧಾಮದಲ್ಲಿ ಅಂತಿಮ ವಿಧಿವಿಧಾನಗಳೊಂದಿಗೆ ಭಾನುವಾರ ನೆರವೇರಿತು. 11 ವರ್ಷಗಳ ಹಿಂದೆಯೂ ಒಮ್ಮೆ ಅವರಿಗೆ ತೀವ್ರ ಹೃದಯಾಘಾತವಾಗಿತ್ತು.

    ರಮ್ಯಾ, ನಾರಾಯಣ್ ಸಹೋದರಿ ರಂಗಪ್ರಿಯ, ಭಾವಮೈದುನ ಎಂಎನ್ ನಾರಾಯಣ್, ರಮ್ಯಾ ಅವರ ತಾಯಿ ರಂಜಿತಾ ಬೋರಯ್ಯ ಸೇರಿದಂತೆ ಕುಟುಂಬದವರು ಮತ್ತು ಅನೇಕ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

    ಒಂಟಿಕೊಪ್ಪಲಿನ 2ನೇ ಮುಖ್ಯರಸ್ತೆಯಲ್ಲಿ ಇರುವ ಸ್ವಗೃಹದಲ್ಲಿ ಮೃತರ ಪಾರ್ಥಿವ ಶರೀರವನ್ನು ಶನಿವಾರ ಸಂಜೆಯಿಂದಲೇ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ರಾಜಕಾರಣಿಗಳು, ಚಿತ್ರರಂಗದವರು ಹಾಗೂ ಗಣ್ಯರು ಮನೆಗೆ ಬಂದು ಮೃತರ ಅಂತಿಮ ದರ್ಶನ ಪಡೆದರು.

    ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ, ಪ್ರೇಮಾ ಕೃಷ್ಣ, ವಸತಿ ಸಚಿವ ಎಂಎಚ್ ಅಂಬರೀಷ್, ಕೆಪಿಸಿಸಿ ಅಧ್ಯಕ್ಷ ಡಾಜಿ ಪರಮೇಶ್ವರ, ಸಂಸದ ಅಡಗೂರು ಎಚ್ ವಿಶ್ವನಾಥ್, ಜಿಲ್ಲಾ ಉಸ್ತುವಾರಿ ಸಚಿವ ವಿ ಶ್ರೀನಿವಾಸ ಪ್ರಸಾದ್, ಶಾಸಕ ಡಿಕೆ ಶಿವಕುಮಾರ್ ಮತ್ತು ನಟಿ ರಾಧಿಕಾ ಮೃತರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

    ಎಸ್ಎಂ ಕೃಷ್ಣ ಅತ್ಯಾಪ್ತರು:

    ಎಸ್ಎಂ ಕೃಷ್ಣ ಅತ್ಯಾಪ್ತರು:

    ಎಸ್ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ (1999-2004) ನಾರಾಯಣ್ ಅವರು ಕಿಚನ್ ಕ್ಯಾಬಿನೆಟ್ ಪ್ರಮುಖ ಸದಸ್ಯರು. ರಾಜಕೀಯವಾಗಿ ಎಸ್ಎಂ ಕೃಷ್ಣ ಅವರಿಗೆ ಮಾರ್ಗದರ್ಶಿ. ನಾರಾಯಣ್ ಅನುಮತಿಯಲ್ಲದೆ ವಿಧಾನಸೌಧದಲ್ಲಿ ಹುಲ್ಲಕಡ್ಡಿಯೂ ಅಲುಗಾಡುತ್ತಿರಲಿಲ್ಲ ಎಂಬಷ್ಟರ ಮಟ್ಟಿಗೆ ಪ್ರಭಾವಿಯಾಗಿದ್ದರು. ಆದರೆ ಎಂದಿಗೂ ಬಹಿರಂಗವಾಗಿ ಪ್ರಚಾರಕ್ಕೆ ಬಂದವರಲ್ಲ. ಉಚ್ಛ್ರಾಯ ಕಾಲದಲ್ಲಿ ಟೆನಿಸ್ ಅಂಕಣದಲ್ಲಿ ಇಬ್ಬರೂ ಮೈ-ಮನದಣಿಯುವವರೆಗೂ ಆಡುತ್ತಿದ್ದರು. (ಚಿತ್ರ- RNN live)

    ತಾಜ್ ವೆಸ್ಟ್ ಎಂಡ್ ಹೋಟೆಲ್ಲೇ ಮನೆ

    ತಾಜ್ ವೆಸ್ಟ್ ಎಂಡ್ ಹೋಟೆಲ್ಲೇ ಮನೆ

    70 ರ ಗಡಿಯಲ್ಲಿದ್ದ ನಾರಾಯಣ್ ಅವಿವಾಹಿತರು. ಮೈಸೂರಿನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ. ಧಾರವಾಡದಲ್ಲಿ BSc (Agriculture) ಪದವಿ ಶಿಕ್ಷಣ. ಬೆಂಗಳೂರಿನ ರೇಸ್ ಕೋರ್ಸ್ ಎದುರುಗಡೆಯಿರುವ Taj West End ಪಂಚತಾರಾ ಹೋಟೆಲಿನಲ್ಲಿ 1970ರಿಂದ ನಾಲ್ಕು ದಶಕಗಳ ಕಾಲ ಕಾಯಂ ಠಿಕಾಣಿ.
    ಅವರಿಗೆ ತಾಜ್ ವೆಸ್ಟ್ ಎಂಡ್ ಹೋಟೆಲ್ಲೇ ಮನೆಯಾಗಿತ್ತು. ಸೋಮವಾರದಿಂದ ಶುಕ್ರವಾರದವರೆಗೂ ಇಲ್ಲಿದ್ದು, ಶನಿವಾರ ಮತ್ತು ಭಾನುವಾರ ಮೈಸೂರಿಗೆ ತೆರಳುತ್ತಿದ್ದರು. ರಮ್ಯಾ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜತೆಗಿರಲು ಶನಿವಾರ ಹೋಟೆಲಿನಿಂದ ಮಂಡ್ಯಕ್ಕೆ ತೆರಳಿದ್ದರು.

    ತಾಜ್‌ ವೆಸ್ಟ್ ಎಂಡ್ ಸೂಟ್ ನಂಬರ್ 1509:

    ತಾಜ್‌ ವೆಸ್ಟ್ ಎಂಡ್ ಸೂಟ್ ನಂಬರ್ 1509:

    ಸೂಟ್ ನಂಬರ್ 1509: 'ತಾಜ್‌ ವೆಸ್ಟ್ ಎಂಡ್ ಹೋಟೆಲಿನ 1509ನೇ ನಂಬರಿನ ಸೂಟ್‌ ನಲ್ಲಿ ಉಳಿಯುತ್ತಿದ್ದರು. 20 ವರ್ಷಗಳ ಹಿಂದೆ 122 ನೇ ನಂಬರಿನ ಸೂಟ್‌ ನಲ್ಲಿ ಇದ್ದರು. ನಂತರ ಎರಡು ಕೊಠಡಿಗಳ ಸೂಟ್‌ ಗೆ (1509) ಸ್ಥಳಾಂತರ ಆಗಿದ್ದರು. ಅವರು ಊರಲ್ಲಿ ಇರಲಿ- ಬಿಡಲಿ ಅವರ ಹೆಸರಿನಲ್ಲೇ ಕೊಠಡಿ ಇರುತ್ತಿತ್ತು. ಅದರ ಬೀಗ ಕೂಡ ಅವರ ಬಳಿಯೇ ಇರುತ್ತಿತ್ತು' ಎಂದು ಅವರ ಆಪ್ತ, ಮಂಡ್ಯ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ನಾಗರಾಜ್ ತಿಳಿಸಿದ್ದಾರೆ.

    ಕಣ್ವ ಇಂಡಸ್ಟ್ರೀಸ್

    ಕಣ್ವ ಇಂಡಸ್ಟ್ರೀಸ್

    ಪದವಿಯನಂತರ ಉದ್ಯೋಗನಿಮಿತ್ತ ಬಾಂಬೆಯಲ್ಲಿ 14 ವರ್ಷ ಕಾಲ ಇದ್ದರಾದರೂ ಆನಂತರ ಮೈಸೂರಿಗೆ ವಾಪಸಾದರು. 'ಕಣ್ವ ಇಂಡಸ್ಟ್ರೀಸ್' ಸ್ಥಾಪಿಸಿದರು. ಮೈಸೂರು-ಮಂಡ್ಯ- ಬೆಂಗಳೂರಿನಲ್ಲಿ ಆಪ್ತ ಬಳಗದ ಮಧ್ಯೆ ಕಾಣಿಸಿಕೊಳ್ಳುತ್ತಿದ್ದರು. ರಫ್ತು ಉದ್ಯಮಿಯೂ ಆಗಿದ್ದರು.

     ನಾರಾಯಣ್ ಅವರಿಗೆ ಅಗಾಧ ನೆನಪಿನ ಶಕ್ತಿ:

    ನಾರಾಯಣ್ ಅವರಿಗೆ ಅಗಾಧ ನೆನಪಿನ ಶಕ್ತಿ:

    ಅಗಾಧ ನೆನಪಿನ ಶಕ್ತಿ: 10ಕ್ಕೂ ಹೆಚ್ಚು ಭಾಷೆಗಳ ಕಲಿತಿದ್ದ ನಾರಾಯಣ್ ಅವರಿಗೆ ಅಪಾರ ನೆನಪಿನ ಶಕ್ತಿ ಕೂಡ ಇತ್ತು. ದೇಶ-ವಿದೇಶಗಳ ದೂರವಾಣಿ ಸಂಖ್ಯೆಗಳನ್ನು ಯಾವ ಡೈರಿಯ ಸಹಾಯ ಇಲ್ಲದೆ, ನೇರವಾಗಿ ಡಯಲ್ ಮಾಡುತ್ತಿದ್ದರು. ಹೆಸರು ಹೇಳಿದ ತಕ್ಷಣ ಅವರ ದೂರವಾಣಿ ಸಂಖ್ಯೆ ಕೂಡ ಹೇಳುವುದನ್ನು ಕರಗತ ಮಾಡಿ ಕೊಂಡಿದ್ದರು ಎನ್ನುತ್ತಾರೆ ನಾಗರಾಜ್.

    ಆರ್.ಟಿ. ನಾರಾಯಣ್ ಟೆನಿಸ್ ಪ್ರೀತಿ

    ಆರ್.ಟಿ. ನಾರಾಯಣ್ ಟೆನಿಸ್ ಪ್ರೀತಿ

    ಟೆನಿಸ್ ಆಟಗಾರ: ಆರ್.ಟಿ. ನಾರಾಯಣ್ ಅವರದ್ದು ತುಂಬು ಕುಟುಂಬ. ಆರ್ಯ ನರಸಿಂಹಾಚಾರ್ ಅವರ ಪುತ್ರರಾಗಿ 1939, ಜೂನ್ 21ರಂದು ಜನಿಸಿದ್ದರು. ಅವಿವಾಹಿತರಾದ ಅವರು ಸಹೋದರಿ ರಂಗಪ್ರಿಯ ಮತ್ತು ಬಾವಮೈದುನ ಎಂಎನ್ ನಾರಾಯಣ್ ಅವರೊಂದಿಗೆ ಒಂಟಿಕೊಪ್ಪಲಿನ 2ನೇ ಮುಖ್ಯರಸ್ತೆಯ ಭವ್ಯ ಬಂಗಲೆಯಲ್ಲಿ ನೆಲೆಸಿದ್ದರು.

    ರಮ್ಯಾ ಬಾಲ್ಯದಲ್ಲೇ ನಾರಾಯಣ್ ಮಡಿಲಿಗೆ

    ರಮ್ಯಾ ಬಾಲ್ಯದಲ್ಲೇ ನಾರಾಯಣ್ ಮಡಿಲಿಗೆ

    'ನಟಿ ರಮ್ಯಾ 5 ವರ್ಷದ ಬಾಲಕಿ ಆಗಿದ್ದಾಗಲೇ ಮಂಡ್ಯದಿಂದ ಆಕೆಯನ್ನು ಮೈಸೂರಿಗೆ ಕರೆತಂದು ಸಾಕಿದ್ದರು. ಬಿಡುವಿನ ವೇಳೆಯಲ್ಲಿ ಸಾಕು ಮಗಳೊಂದಿಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಆಕೆ ಕನ್ನಡ ಚಿತ್ರರಂಗದಲ್ಲಿ ಬಹಳ ಎತ್ತರಕ್ಕೆ ಬೆಳೆದಿದ್ದು ಅವರಿಗೆ ಸಂತಸ ತಂದಿತ್ತು. ಆಕೆ ಮಗುವಿದ್ದಾಗ ತೋರುತ್ತಿದ್ದ ಪ್ರೀತಿ ದೊಡ್ಡವಳಾದ ಮೇಲೂ ಕಡಿಮೆಯಾಗಲಿಲ್ಲ. ಆಕೆಯನ್ನು ಊಟಿಯ ಪ್ರತಿಷ್ಠಿತ ಕಾನ್ವೆಂಟ್‌ನಲ್ಲಿ ಓದಿಸಿದ್ದರು.

    ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ರೂವಾರಿ

    ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ರೂವಾರಿ

    ಒಂದೂವರೆ ದಶಕದಿಂದ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆಯ ಬೆಳವಣಿಗೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಕೆಎಸ್‌ಎಲ್‌ಟಿಎ ಕ್ರೀಡಾಂಗಣದ ನವೀಕರಣ ಮಾಡಿದ್ದು, ಇಲ್ಲಿಯೇ ಎಟಿಪಿ ವಿಶ್ವ ಡಬಲ್ಸ್ ಟೂರ್ನಿ ನಡೆಸಿದ್ದು, ನೂರಾರು ಕಿರಿಯ ಆಟಗಾರರ ತರಬೇತಿಗೆ ಅಗತ್ಯವಾದ ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ರೂಪಿಸಿದ್ದು ಇತ್ಯಾದಿ ಹಲವು ಅಭಿವೃದ್ಧಿ ಕಾರ್ಯಗಳು ನಾರಾಯಣ ಅವರ ಕಣ್ಗಾವಲಲ್ಲೇ ನಡೆದಿತ್ತು ಎಂದು ಕೆಎಸ್‌ಎಲ್‌ಟಿಎ ಕಾರ್ಯದರ್ಶಿ ಸಿ.ಎಸ್.ಸುಂದರರಾಜು, ಜಂಟಿ ಕಾರ್ಯದರ್ಶಿ ರಾಮಸ್ವಾಮಿ, ಸಂಸ್ಥೆಯ ತರಬೇತಿ ಕೇಂದ್ರದ ನಿರ್ದೇಶಕ ಸುನಿಲ್ ಯಜಮಾನ್ ಸ್ಮರಿಸಿದ್ದಾರೆ.

    English summary
    Mandya Lok Sabha bypoll Congress candidate Kannada Actress Ramya foster father- guardian RT Narayan died due to heart attack on Aug 3 in Mandya. A BSc (Agriculture) graduate from University of Agricultural Sciences, Dharwad, Narayan was a bachelor and used to operate from a suite in Taj West End on the Race Course Road. Though he ran Kanva Industries in Mysore, he came to prominence only after Krishna became the chief minister. He continued to stay in the hotel suite till he breathed last.
    Monday, August 5, 2013, 11:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X